ಪ್ರೇಮಿಗಳ ದಿನಕ್ಕಾಗಿ ಪ್ರೀತಿಯ ಅರ್ಥ ಸ್ಪುರಿಸುವ ಸಂದೇಶಗಳು
ವ್ಯಾಲೆಂಟೈನ್ ಎಂಬ ಸಂತನ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಹಲವರು ಪ್ರೇಮ ನಿವೇದನೆಗಾಗಿ ಈ ದಿನವನ್ನೇ ಆಯ್ದುಕೊಳ್ಳುವುದರಿಂದ ಪ್ರೇಮಿಗಳ ಪಾಲಿಗೆ ಇದು ಅತ್ಯಂತ ಮಹತ್ವದ ದಿನ ಎನ್ನಿಸಿದೆ.
ಪ್ರೇಮಿಗಳ ದಿನದಂದು ಪ್ರೇಮಿಗೆ ಗ್ರೀಟಿಂಗ್ ಕಾರ್ಡ್ ಜೊತೆ ಹೃದಯಕ್ಕೆ ತಟ್ಟುವಂಥ ಸಂದೇಶವನ್ನೂ ಕೊಡುವ ಹುಮ್ಮಸ್ಸಿನಲ್ಲಿರುವವರಿಗಾಗಿ ಪ್ರೀತಿಯ ಅರ್ಥವನ್ನು ಮತ್ತಷ್ಟು ಗಹನವಾಗಿಸುವ ಕೆಲವು ಕನ್ನಡದ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.
ಇಷ್ಟು ದಿನ ಪ್ರೀತಿಯನ್ನು ಮನಸ್ಸಿನಲ್ಲೇ ಗುಟ್ಟಾಗಿ ಇರಿಸಿಕೊಂಡಿರುವವರು ಎಲ್ಲವನ್ನೂ ಹೇಳಿ ಖಾಲಿಯಾಗಿಬಿಡುವ ತವಕದಲ್ಲಿದ್ದರೆ ಅಂಥವರಿಗೆ ಈ ದಿನ ವೇದಿಕೆಯಾಗಲಿದೆ. ಮನಮೆಚ್ಚಿದ ಸಂಗಾತಿಯೊಂದಿಗೆ ಹೊಸ ಬದುಕಿನ ಹೆಜ್ಜೆ ಇಡುವ ಹುಮ್ಮಸ್ಸಿನಲ್ಲಿರುವವರ ಪಾಲಿಗೆ ವ್ಯಾಲೆಂಟೈನ್ಸ್ ಡೇ ಶುಭದಿನವಾಗಲಿ ಎಂಬುದು ನಮ್ಮ ಹಾರೈಕೆ.
ಪ್ರೇಮಿಗಳಿಗಾಗಿ ಪ್ರೀತಿಯ ಅರ್ಥ ಸ್ಪುರಿಸುವ ಕೆಲವು ಸಂದೇಶಗಳು ನಿಮಗಾಗಿ ಇಲ್ಲಿವೆ.

ದೌರ್ಬಲ್ಯವೇ ಪರಿಪೂರ್ಣತೆ!
* ನಿನ್ನನ್ನು ಪ್ರೀತಿಸುವ ಹೃದಯಕ್ಕೆ ನಿನ್ನ ದೌರ್ಬಲ್ಯಗಳೂ ಪರಿಪೂರ್ಣತೆಯಾಗಿ ಕಾಣಿಸುತ್ತವೆ
* ಬದುಕಿನಲ್ಲಿ ನೆಮ್ಮದಿ ನೀಡುವ ಎರಡೇ ಎರಡು ಸಂಗತಿ ಎಂದರೆ... ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು.
* ಸೂರ್ಯ ಕಿರಣಗಳಿಲ್ಲದೆ ಹೂವುಗಳು ಹೇಗೆ ಅರಳುವುದಿಲ್ಲವೋ, ಹಾಗೆಯೇ ಪ್ರೀತಿಯಿಲ್ಲದೆ ಮನುಷ್ಯ ಜೀವಿಸಲಾರ

ಹುಚ್ಚಿಲ್ಲದ್ದು ಪ್ರೀತಿಯಲ್ಲ!
* ಜಗತ್ತಿನ ಅತ್ಯುತ್ತಮ ಮತ್ತು ಸುಂದರ ಸಂಗತಿ ಎಂದರೆ ಪ್ರೀತಿ. ಅದನ್ನು ನೋಡುವುದುಕ್ಕೂ, ಸ್ಪರ್ಶಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಅದನ್ನು ನಾವು ಹೃದಯದಲ್ಲಿ ಅನುಭವಿಸಬಹುದು.
* ಪ್ರೀತಿ ಎಂದರೆ ಇಬ್ಬರೂ ಒಬ್ಬರನ್ನೊಬ್ಬರು ನೋಡುವುದಲ್ಲ. ಇಬ್ಬರೂ ಒಂದೇ ದಿಕ್ಕಿನತ್ತ ನೋಡುವುದು
* ಹುಚ್ಚಿಲ್ಲದಿದ್ದರೆ ಅದು ಪ್ರೀತಿಯೇ ಅಲ್ಲ!
* ಪ್ರೀತಿ ಎಂದರೆ ಯಾರೊಂದಿಗೆ ಬದುಕಬೇಕು ಎಂಬುದನ್ನು ಹುಡುಕುವುದಲ್ಲ, ಯಾರಿಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲವೋ ಅಂಥವರನ್ನು ಹುಡುಕುವುದು.

ನೀನಿಲ್ಲದೆ ಬದುಕಿಲ್ಲ...
* ನೀನು 100 ದಿನ ಬದುಕಬೇಕೆಂದು ನಿರ್ಧರಿಸಿದರೆ, ನಾನು 99 ದಿನ ಬದುಕಲು ಬಯಸುತ್ತೇನೆ. ಏಕೆಂದರೆ ನೀನಿಲ್ಲದೆ ಒಂದು ದಿನವೂ ಬದುಕುವುದಕ್ಕೆ ನನಗೆ ಸಾಧ್ಯವಿಲ್ಲ
* ಪ್ರೀತಿ ನಮ್ಮ ಮುಖ್ಯ ಗುರಿ. ನಾವು ಒಂಟಿಯಾಗಿ ಬದುಕಿನ ಅರ್ಥ ಹುಡುಕುವುದಕ್ಕೆ ಸಾಧ್ಯವಿಲ್ಲ, ಪ್ರೀತಿಸುವ ಒಬ್ಬರು ಬೇಕೇ ಬೇಕು.
* "ನಾನು ನಿನ್ನನ್ನು ಪ್ರೀತಿಸುತ್ತೇನೆ... ನೀನು ಹೇಗಿದ್ದೀಯಾ ಎಂಬ ಕಾರಣಕ್ಕೆ ಮಾತ್ರವಲ್ಲ, ಬದಲಾಗಿ ನಿನ್ನೊಂದಿಗಿದ್ದರೆ ನಾನು ಹೇಗಿರುತ್ತೇನೆ ಎಂಬುದನ್ನೂ ಅರಿತಿರುವ ಕಾರಣಕ್ಕಾಗಿ!"

ಪ್ರೀತಿ ದೂರವಾದರೆ...
* ಪ್ರೀತಿ ನಮ್ಮಿಂದ ದೂರವಾದರೆ ನಾನು ಹೊರಗಿನ ಮತ್ತು ನಮ್ಮೊಳಗಿನ ಜಗತ್ತಿನಲ್ಲೂ ಬದುಕುವುದಕ್ಕೆ ಸಾಧ್ಯವಿಲ್ಲ.
* ಪ್ರೀತಿ ಎಂದರೆ ಪ್ರಕೃತಿಯ ಕ್ಯಾನ್ವಾಸ್ ಮೇಲೆ ಕಲ್ಪನೆಯ ಚಿತ್ತಾರ. ಅದೊಂದು ಆಟವಿದ್ದಂತೆ. ಇಬ್ಬರು ಆಡಬಹುದು ಮತ್ತು ಇಬ್ಬರೂ ಗೆಲ್ಲಬಹುದು!
* ಪ್ರೀತಿ ನಿಮ್ಮ ದೌರ್ಬಲ್ಯವಾದರೆ ನಿಮಗಿಂತ ಬಲಶಾಲಿ ಮತ್ತೊಬ್ಬರಿಲ್ಲ!
* ಪ್ರೀತಿ ಎಂದರೆ ಪಿಯಾನೋ ನುಡಿಸಿದಂತೆ. ಮೊದಲು ನೀವು ಪಿಯಾನೋ ನುಡಿಸುವ ಶಾಸ್ತ್ರಗಳನ್ನು ಕಲಿಯಬೇಕು. ನಂತರ ನುಡಿಸಬೇಕು. ಕಲಿತ ಮೇಲೆ ನಿಯಮಗಳನ್ನು ಮರೆತು ಹೃದಯದಿಂದ ನುಡಿಸಬೇಕು!












Click it and Unblock the Notifications