• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Valentine's Day Special: ಸಂಗಾತಿಗೆ ಐ ಲವ್ ಯೂ ಎನ್ನಲು ಮರೆಯದಿರಿ...!

|

ಪ್ರೇಮಿಗಳ ದಿನದಂದು ಎಲ್ಲೆಡೆಯೂ ಪ್ರೇಮಸ್ವರ ರಿಂಗಣಿಸುತ್ತಿರುವಾಗ ಒಂದು ಕಾಲದಲ್ಲಿ ಪ್ರೇಮಿಗಳಾಗಿ ಇದೀಗ ಸಪ್ತಪದಿ ತುಳಿದು ದಂಪತಿಗಳಾಗಿರುವ ಅದೆಷ್ಟೋ ಮಂದಿ ಮದುವೆಯಾಯಿತು ಈಗ ಅದೆಲ್ಲ ನಮಗ್ಯಾಕೆ ಎಂದು ಉಡಾಫೆ ತೋರದೆ, ನಿಮ್ಮ ಸಂಗಾತಿಗೊಂದು ಗುಲಾಬಿ ನೀಡಿ ಸಿಹಿ ಮುತ್ತು ನೀಡಿ ಬಿಡಿ...

ಪ್ರೀತಿ ಎಂದರೆ ಅದೊಂದು ರೀತಿಯ ಸಾಗರದಂತೆ, ಇಲ್ಲಿ ಗೆದ್ದವರ ಹಾಗೆಯೇ ಸೋತವರ ದೊಡ್ಡ ಪಟ್ಟಿಯೇ ಇದೆ. ಪ್ರತಿಯೊಬ್ಬ ಪ್ರೇಮಿಯೂ ಪ್ರೀತಿಯಲ್ಲಿ ಯಶಸ್ಸು ಕಾಣಬೇಕೆಂದು ಬಯಸುತ್ತಾನೆ. ಆದರೆ ಪ್ರೀತಿಸಿದವರೆಲ್ಲ ಅದನ್ನು ಪಡೆದೇ ಪಡೆಯುತ್ತಾರೆ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ.

ವ್ಯಾಲೆಂಟೈನ್ ಡೇ:ಎಂದಿಗೂ ವಂಚಕ ಪ್ರೇಮಿಯಾಗದಿರಿ...!

ಪ್ರೀತಿ ಎಂಬುದು ಬರೀ ಆಕರ್ಷಣೆ ಅಲ್ಲ!

ಪ್ರೀತಿ ಎಂಬುದು ಬರೀ ಆಕರ್ಷಣೆ ಅಲ್ಲ!

ಇಲ್ಲಿ ಪ್ರೀತಿ ಎಂಬುದು ಆಕರ್ಷಣೆ, ಅದರಾಚೆಗೆ ಮದುವೆ ಎಂಬುದು ಜವಾಬ್ದಾರಿ. ಇದೆರೆಡರ ನಡುವಿನ ಬದುಕು ಅಷ್ಟು ಸುಲಭವಲ್ಲ. ಮದುವೆ ಎಂಬ ವೇದಿಕೆಗೆ ಪ್ರೀತಿಯೇ ಮೆಟ್ಟಿಲು. ಈ ಮೆಟ್ಟಿಲನ್ನೇರುವುದು ಕೂಡ ಒಂದು ರೀತಿಯ ಸವಾಲು. ಭಾರತದಂತಹ ಸಂಪ್ರದಾಯದ ರಾಷ್ಟ್ರದಲ್ಲಿ ಪ್ರೀತಿಸುವುದೇ ಮದುವೆಯಾಗಲು ಎಂಬುದು ಲಿಖಿತ ನಿಯಮ. ಆದರೆ ಬಹಳಷ್ಟು ಜನರ ಬದುಕಿನಲ್ಲಿ ಪ್ರೀತಿ ಮದುವೆ ತನಕ ಹೋಗುವುದೇ ಇಲ್ಲ. ಅವರ ನಡುವಿನ ಹತ್ತಾರು ಸಮಸ್ಯೆಗಳಿಗೆ ಪ್ರೀತಿ ಬಲಿಯಾಗಿ ಬಿಡುತ್ತದೆ.

ಪ್ರೀತಿಸುವುದೆಂದರೆ ಎಂಜಾಯ್ ಮಾಡುವುದಲ್ಲ

ಪ್ರೀತಿಸುವುದೆಂದರೆ ಎಂಜಾಯ್ ಮಾಡುವುದಲ್ಲ

ಇವತ್ತಿನ ಆಧುನಿಕ ಬದುಕಿನಲ್ಲಿ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಗಳು ಪ್ರೀತಿ ಮತ್ತು ಪ್ರೇಮದ ಮಹತ್ವವನ್ನು ಗಾಳಿಗೆ ತೂರಿ ಅದೊಂದು ಎಂಜಾಯ್ ಎಂಬ ಮಟ್ಟಿಗೆ ತಂದು ನಿಲ್ಲಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹರೆಯದಲ್ಲಿ ಪ್ರೀತಿ-ಪ್ರೇಮದ ಬಗ್ಗೆ ತಲೆ ಕೆಡಿಸಿಕೊಳ್ಳುವ ಯುವ ಮನಸ್ಸು ದಾರಿ ತಪ್ಪುತ್ತಿವೆ. ಒಂದೊಳ್ಳೆಯ ಗೆಳೆತನವನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದು, ದೈಹಿಕ ಆಕರ್ಷಣೆಯನ್ನೇ ಪ್ರೀತಿ ಎಂದು ನಂಬುವುದು. ಜತೆಗೆ ಸದ್ಯಕ್ಕೆ ನನಗೊಬ್ಬ ಗೆಳೆಯ/ಗೆಳತಿ ಇರಲಿ, ಆಮೇಲೆ ನೋಡಿದರಾಯಿತೆಂಬ ಮನಸ್ಥಿತಿಗಳು ಬಹಳಷ್ಟು ಸಲ ತೊಂದರೆಗಳಿಗೆ ಎಡೆ ಮಾಡಿಕೊಡುತ್ತವೆ.

ಹುಷಾರ್ ವಂಚಕ ಪ್ರೇಮಿಗಳಿದ್ದಾರೆ!

ಹುಷಾರ್ ವಂಚಕ ಪ್ರೇಮಿಗಳಿದ್ದಾರೆ!

ಕೆಲವು ವಂಚಕ ಮನಸ್ಸುಗಳು ಬೇರೆ, ಬೇರೆ ರೀತಿಯಲ್ಲಿ ಆಕರ್ಷಿಸಿ ಪ್ರೀತಿಸುವ ನಾಟಕವಾಡಿ ತಾನು ಬಯಸಿದ್ದನ್ನು ಪಡೆದು ದೂರ ಸರಿಯುವವರು ಇಲ್ಲದಿಲ್ಲ. ಇಂಥವರಿಂದ ಪ್ರಾಮಾಣಿಕ ಪ್ರೀತಿಗೆ ಅವಮಾನವಾಗುತ್ತದೆ. ಪ್ರೀತಿ ಮೇಲೆ ಅನುಮಾನ ಮೂಡುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಪ್ರೇಮಿಗಳ ದಿನವನ್ನು ಹರೆಯದ ಹುಡುಗ-ಹುಡುಗಿಯರು ಅದರಲ್ಲೂ, ಕಾಲೇಜು ವಿದ್ಯಾರ್ಥಿಗಳು ಹಬ್ಬದಂತೆ ಆಚರಿಸುತ್ತಿರುವುದು ಕಂಡು ಬರುತ್ತದೆ. ಇದರ ಅಗತ್ಯತೆ ಇದೆಯಾ? ಇದೆಲ್ಲ ಬೇಕಾ? ಎಂಬಿತ್ಯಾದಿ ಪ್ರಶ್ನೆಗಳ ಜತೆಯಲ್ಲಿ ಹೆತ್ತವರಲ್ಲಿ ತಮ್ಮ ಮಕ್ಕಳ ಬಗೆಗಿನ ತಳಮಳಗಳು ಹೆಚ್ಚಾಗುವಂತೆ ಮಾಡುತ್ತಿದೆ.

ಪ್ರೀತಿಯ ಕನಸು, ಮದುವೆಯಲ್ಲಿ ನನಸು

ಪ್ರೀತಿಯ ಕನಸು, ಮದುವೆಯಲ್ಲಿ ನನಸು

ಹಾಗೆ ನೋಡಿದರೆ ಜವಾಬ್ದಾರಿಯುತ ಬದುಕು ಕಟ್ಟಿಕೊಳ್ಳುವ ಮುನ್ನ ಪ್ರೀತಿಯನ್ನು ಹೋರಾಡಿ ಗೆದ್ದರೂ, ಅದರ ಗೆಲುವನ್ನು ಜೀವನುದ್ದಕ್ಕೂ ಅನುಭವಿಸಲು ಸಾಧ್ಯವಾಗದ ಬದುಕಿನ ಅರ್ಧದಲ್ಲಿಯೇ ಕೈಚೆಲ್ಲಿ ಕುಳಿತವರಿಗೇನು ಕೊರತೆಯಿಲ್ಲ. ಪ್ರೀತಿ ಎಂಬುದೊಂದು ಕನಸು, ಅದನ್ನು ನಾವು ಮದುವೆಯೊಂದಿಗೆ ನನಸು ಮಾಡಿಕೊಳ್ಳಬೇಕು. ಹಾಗೆ ಆಗಬೇಕಾದರೆ ನಮ್ಮದು ಸೌಂದರ್ಯ, ಹಣ, ಅಂತಸ್ತು ಎಲ್ಲವನ್ನೂ ಮೀರಿದ ಪ್ರಾಮಾಣಿಕ ಪ್ರೀತಿಯಾಗಿರಬೇಕು. ಆಗ ಮಾತ್ರ ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಬಹಳಷ್ಟು ಜನರ ಬದುಕಿನಲ್ಲಿ ಅಂದುಕೊಂಡಂತೆ ಆಗುವುದೇ ಇಲ್ಲ. ಪ್ರೇಮಿಗಳಾಗಿದ್ದಾಗಿನ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆಗೆ ಮದುವೆಯಾಗಿ ಮಕ್ಕಳಾಗಿ ಬದುಕು ಕಟ್ಟಿಕೊಳ್ಳುವಾಗ ತುಕ್ಕು ಹಿಡಿಯಲಾರಂಭಿಸುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರೇಮಿಗಳಾಗಿರುವಾಗ ಜವಾಬ್ದಾರಿ ಕಡಿಮೆಯಿರುತ್ತದೆ. ಆಕರ್ಷಣೆ ಹೆಚ್ಚಿರುತ್ತದೆ. ಜೊತೆಯಾಗಬೇಕೆಂಬುದಷ್ಟೆ ಮುಖ್ಯವಾಗುತ್ತದೆ.

ಪ್ರೇಮ ಅಂದ್ರೆ ಸೂಕ್ಷ್ಮ ಸಂವೇದಿ

ಪ್ರೇಮ ಅಂದ್ರೆ ಸೂಕ್ಷ್ಮ ಸಂವೇದಿ

ಅಪರೂಪಕ್ಕೆ ಭೇಟಿಯಾಗಿ ಹರಟೆ ಹೊಡೆಯುವುದು, ಐಸ್ ಕ್ರೀಮ್ ಮೆಲ್ಲುವುದು, ಊಟ ಮಾಡುವುದು, ಸಿನಿಮಾ ನೋಡುವುದು ಎಲ್ಲವೂ ಖುಷಿ ಕೊಡುತ್ತಿರುತ್ತದೆ. ಏಕೆಂದರೆ ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಅದಕ್ಕೆ ಆಳ, ಗಾತ್ರ ಯಾವುದೂ ಇಲ್ಲ. ಒಮ್ಮೆ ಹೃದಯಾಂತರಾಳದಲ್ಲಿ ಅಂಕುರಿಸಿತೆಂದರೆ ಸಾಕು ಅದು ಜಾತಿಯ ಹಂಗು, ಬಡತನ, ವಯಸ್ಸು, ಸ್ಥಾನಮಾನ ಎಲ್ಲವನ್ನೂ ಧಿಕ್ಕರಿಸಿ ಜತೆಯಾಗಿ ಬದುಕುವುದನ್ನಷ್ಟೆ ಬಯಸುತ್ತದೆ. ಈ ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಮುಖ್ಯವಾಗುತ್ತದೆ ಅದೆರಡು ಇಲ್ಲದೆ ಹೋದರೆ ಪ್ರೀತಿಸಲು ಸಾಧ್ಯವಿಲ್ಲ. ಒಂದು ವೇಳೆ ಪ್ರೀತಿಸಿದರೂ ಹೆಚ್ಚು ದಿನ ಬಾಳುವುದಿಲ್ಲ.

ನಾವು ಪ್ರೀತಿಗೆ ಗೌರವ ಕೊಡೋಣ

ನಾವು ಪ್ರೀತಿಗೆ ಗೌರವ ಕೊಡೋಣ

ಪ್ರೀತಿಸಿ ಬಳಿಕ ಮದುವೆಯಾಗಿ ಸದಾ ಜತೆಯಲ್ಲಿದ್ದು, ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಮುನ್ನಡೆಯುವಾಗ ಎಲ್ಲವೂ ಕಷ್ಟವಾಗಿ ಕಾಣಲಾರಂಭಿಸುತ್ತದೆ. ಆದರೆ ಅವೆಲ್ಲವನ್ನು ಮೀರಿ ಖುಷಿ ಖುಷಿಯಾಗಿ ಬದುಕಿ ತೋರಿಸುವುದೇ ನಿಜವಾದ ಜೀವನ ಮತ್ತು ನಾವು ಪ್ರೀತಿಗೆ ಕೊಡುವ ಗೌರವವಾಗುತ್ತದೆ. ನೆನಪಿರಲಿ ಪ್ರೇಮಿಗಳ ದಿನದಂದು ಶ್ರೀಮಂತರು ಐಷರಾಮಿ ಹೋಟೆಲ್ ಗಳಲ್ಲಿ ಪಾರ್ಟಿ, ಕುಣಿತದೊಂದಿಗೆ ಅದ್ಧೂರಿಯಾಗಿ ಆಚರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಬಹುದು. ಆದರೆ ಪ್ರಾಮಾಣಿಕ ಪ್ರೀತಿ ಅದ್ಯಾವುದನ್ನು ಬಯಸುವುದಿಲ್ಲ. ಹೀಗಿರುವಾಗ ಇದುವರೆಗೆ ಪ್ರೇಮಿಗಳ ದಿನದಂದು ಹೂ ನೀಡಿ ಲವ್ ಯೂ ಎಂದವರು, ಈಗ ಮದುವೆ ಆಯಿತೆಂದು ತೆಪ್ಪಗೆ ಕೂರಬೇಡಿ. ಗುಲಾಬಿ ನೀಡಿ ಐ ಲವ್ ಯೂ ಎಂದು ಬಿಡಿ...

English summary
Love is the attraction, and beyond that marriage is the responsibility. Life between the two is not easy. Love is a stepping stone to a platform called marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X