ಬದುಕೆಲ್ಲ ಬೇವು-ಬೆಲ್ಲ
- ಶ್ರುತಿ ಸತೀಶ್, ನ್ಯೂಜೆರ್ಸಿ
ಚ್ಯೆತ್ರದ ಚಿಗುರು ಎಲ್ಲೆಲ್ಲೂ ಹಸಿರು ತಂದ ವಸಂತ
ಅವಿರತ ಹಕ್ಕಿಗಳ ಚಿಲಿಪಿಲಿ ಗಾನ
ಆದರೆ ಮನುಜರೇಕೋ ಮೌನ ಅರಿಯದಾದ ವಸಂತ
ಮೌನದ ಮನುಜನಿಗೆ ಪ್ರಶ್ನಿಸಿದ ಹೀಗೆ
ದಿನದಿನದ ದುಡಿಮೆಗೆ ದುಗುಡವೇಕೆ?
ದಿನವೂ ಉದಯಿಸುವ ದಿನಕರ ದಣಿದಾನೆ?
ಈ ದಿನ ಬರಲಾರೆನೆಂದು ವಿರಮಿಸುವನೆ?
ಉಕ್ಕುವ ಕಡಲು ಉದಾಸಗೊಂಡಿತೆ?
ಬಳ್ಳಿ ಬಳಲೀತೆ ಹೂ ಭಾರದಿಂದ?
ನಿತ್ಯವು ನಗೆ ತುಂಬಿ ಹೂವು ಅರಳುವುದಲ್ಲ
ಶಿಶಿರ ಕಳೆದು ವಸಂತ ಬಂದಾಯಿತಲ್ಲ
ನಲಿಯುತ್ತಿವೆ ಜೀವಸಂಕುಲವೆಲ್ಲ
ಬಿಸಿಲು ಕಳೆದು ಬೆಳದಿಂಗಳು ಬರುವುದು ಸಹಜ ಧರ್ಮ
ಇದೇ ಜೀವನದ ಮರ್ಮ
ಅರಿಯಿತೇ ಮನುಜ ಜೀವನದ ಮೌಲ್ಯ?
ಇನ್ನಾಗಲಿ ನಿಮ್ಮ ಬದುಕು ಬೇವು-ಬೆಲ್ಲ.












Click it and Unblock the Notifications