ಯುಗಾದಿ ಹಿನ್ನೆಲೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಸೇವೆ
ಬೆಂಗಳೂರು : ಮತ್ತೊಂದು ರಜೆ ಸರಣಿ ಶನಿವಾರದಿಂದ ಆರಂಭಗೊಳ್ಳಲಿದೆ. ಈ ವರ್ಷದ ಯುಗಾದಿ ಸೋಮವಾರ(ಮಾ.19) ಬಂದಿರುವ ಕಾರಣ, ಅನೇಕರಲ್ಲಿ ಹಬ್ಬದ ಖುಷಿ ದ್ವಿಗುಣಗೊಂಡಿದೆ. ವಿವಿಧೆಡೆ ತೆರಳುವ ಕಾರ್ಯಕ್ರಮಗಳನ್ನು ಬಹುತೇಕರು ರೂಪಿಸಿದ್ದಾರೆ.
ರಾಜ್ಯ ಮತ್ತು ಹೊರರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ, ಕೆಎಸ್‌ಆರ್‌ಟಿಸಿ ಸುಮಾರು 400 ಹೆಚ್ಚುವರಿ ಬಸ್ ಸೇವೆಯನ್ನು ಕಲ್ಪಿಸಿದೆ. ಶನಿವಾರ ಬೆಳಗ್ಗೆಯಿಂದಲೇ ಹೆಚ್ಚುವರಿ ಬಸ್‌ಗಳು ರಸ್ತೆಗಿಳಿಯಲಿವೆ.
ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು, ಹೊರ ರಾಜ್ಯಗಳಿಗೆ ಹೊರಡುವ ಬಹುತೇಕ ಬಸ್‌ಗಳ ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಅಂದ ಹಾಗೆ, ನಿಮಗೆ ಕೆಎಸ್‌ಆರ್‌ಟಿಸಿ ಈ-ಟಿಕೆಟ್ ಸೇವೆ ಬಗ್ಗೆ ಗೊತ್ತಾ?
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications