Get Updates
Get notified of breaking news, exclusive insights, and must-see stories!

Navratri Puja in Periods: ನವರಾತ್ರಿ ಪೂಜೆಯನ್ನು ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡಬೇಕಾ ಅಥವಾ ಬೇಡಬಾರದಾ?

ನವರಾತ್ರಿ ಭಾನುವಾರ ಅಕ್ಟೋಬರ್ 15ರಿಂದ ಆರಂಭವಾಗುತ್ತದೆ. ಅಕ್ಟೋಬರ್ 15ರಿಂದ ಅಕ್ಟೋಬರ್ 23ರವರೆಗೆ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಅಕ್ಟೋಬರ್ 24ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ದುರ್ಗಾದೇವಿಯು ಶಕ್ತಿ ಸ್ವರೂಪ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡಿ ಜಯ ಸಾಧಿಸಿದಳು.

ದೇವತೆಗಳಿಗೆ ಕಂಠಕವಾಗಿದ್ದ ಮಹಿಷಾಸುರನನ್ನು ಕೊಲ್ಲಲು ದುರ್ಗಾದೇವಿಗೆ ದೇವತೆಗಳು ತಮ್ಮೆಲ್ಲಾ ಶಕ್ತಿಯನ್ನು ನೀಡಿದರು. ಮಹಿಷಾಸುರನನ್ನು ಸದೆಬಡಿಯಲು ದುರ್ಗಾ ದೇವಿಯನ್ನು ತಮ್ಮೆಲ್ಲಾ ಶಕ್ತಿಯನ್ನು ನೀಡಿ ಪೂಜಿಸಿದರು ಆರಾಧಿಸಿದರು. ಒಂಬತ್ತು ದಿನಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿದ ದುರ್ಗಾ ಮಾತೆ ಕೊನೆಗೆ ಜಯ ಸಾಧಿಸಿದಳು. ಹೀಗಾಗಿ ಹತ್ತನೇ ದಿನ ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

shardiya-navratri-vrat-in-periods

ದೇಶದ ಹಲವೆಡೆ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಲವೆಡೆ ಪೆಂಡಾಲ್‌ಗಳನ್ನು ಹಾಕಿ ಬೃಹತ್ ದುರ್ಗಾ ದೇವಿಯ ಮೂರ್ತಿಯನ್ನು ಸ್ಥಾಪಿಸಿ ಅಲಂಕರಿಸಲಾಗುತ್ತದೆ. ಈ ಒಂಬರತ್ತು ದಿನಗಳ ಕಾಲ ಅತ್ಯಂತ ಸಂಭ್ರಮ ಸಡಗರದಿಂದ ದುರ್ಗಾ ದೇವಿಯ ಪೂಜೆ ನೆರವೇರಿಸಲಾಗುತ್ತದೆ.

ಈ ಒಂಬತ್ತು ದಿನಗಳಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸುವ ಮೂಲಕ ಭಕ್ತರು ದೇವಿ ಆರ್ಶೀವಾದ ಪಡೆಯುತ್ತಾರೆ. ಭಕ್ತರ ಇಷ್ಟಾರ್ಥಗಳು ಈಡೇರಿಸಿ ಮತ್ತು ಅವರಿಗೆ ಯಶಸ್ಸನ್ನು ನೀಡುವ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಮಂಗಳಕರ ವಾತಾವರಣ ನಿರ್ಮಾಣವಾಗಿ ಶತ್ರುವನ್ನು ಜಯಿಸುವ ಶಕ್ತಿ ಲಭಿಸುತ್ತದೆ ಎಂದು ಬಲವಾದ ನಂಬಿಕೆ ಇದೆ. ಹೀಗಾಗಿ ಪ್ರತಿ ಹಿಂದೂ ಕುಟುಂಬ ಮಾತೃದೇವತೆಯ ಆರಾಧನೆಯಲ್ಲಿ ತೊಡಗಿಕೊಳ್ಳುತ್ತದೆ.

ಆದರೆ ಮಹಿಳೆಯರಿಗೆ ತಮ್ಮ ಮುಟ್ಟಿನ ಅವಧಿಯಲ್ಲಿ ಪೂಜೆಯನ್ನು ಮಾಡಬೇಕಾ ಅಥವಾ ಬೇಡಬಾರದಾ ಎನ್ನುವ ಗೊಂದಲಗಳಿವೆ. ಹಾಗಾದರೆ ನವರಾತ್ರಿ ವೇಳೆ ಮುಟ್ಟಾದರೆ ಅಥವಾ ಇದೇ ಸಮಯದಲ್ಲಿ ಮುಟ್ಟಿನ ಅವಧಿ ಇದ್ದಲ್ಲಿ ದುರ್ಗಾ ಪೂಜೆಯನ್ನು ಮಾಡಬೇಕಾ ಅಥವಾ ಮಾಡಬಾರದಾ ಎಂದು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯೋಣ.

shardiya-navratri-vrat-in-periods

ನವರಾತ್ರಿ ಪೂಜೆಯನ್ನು ಪಿರಿಯಡ್ಸ್ ಸಮಯದಲ್ಲಿ ಮಾಡಬೇಕಾ ಅಥವಾ ಬೇಡಬಾರದಾ?

ಸಾಮಾನ್ಯವಾಗಿ ಮಹಿಳೆಯರು ತಮ್ಮ ಮುಟ್ಟಿನ ಅವಧಿಯನ್ನು ತಿಳಿದಿರುತ್ತಾರೆ. ನವರಾತ್ರಿಯಲ್ಲಿ ಅವರ ಋತುಸ್ರಾವ ಬರಬಹುದೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಊಹಿಸಬಹುದು. ಒಂದು ವೇಳೆ ನವರಾತ್ರಿಯ ದಿನಗಳಲ್ಲಿ ಪಿರಿಯಡ್ಸ್ ಅವಧಿ ಇದೆ ಎಂದು ತೋರಿದರೆ ಅಂಥವರು ಮೊದಲ ಮತ್ತು ಕೊನೆಯ ನವರಾತ್ರಿಯಂದು ಪೂಜೆ ಮತ್ತು ಉಪವಾಸವನ್ನು ಮಾಡಬಹುದು. ಉಳಿದ ದಿನಗಳಲ್ಲಿ ದುರ್ಗೆ ದೇವಿಯನ್ನು ಸ್ಮರಿಸುವುದು ಒಳ್ಳೆಯದು.

ಮುಂಜಾನೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಪೂಜಾ ಕೊಠಡಿಯ ಮುಂದೆ ನಿಂತು ಮಾತೃದೇವತೆಯ ದರ್ಶನ ಪಡೆಯಬಹುದು. ಈ ಸಮಯದಲ್ಲಿ ಕಲಶ, ಪೂಜಾ ಸಾಮಗ್ರಿ ಅಥವಾ ದುರ್ಗಾ ದೇವಿಯ ಫೋಟೋವನ್ನು ಮುಟ್ಟಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಬಯಸಿದರೆ ಪಿರಿಯಡ್ಸ್ ಸಮಯದಲ್ಲಿ ನಿಮ್ಮ ಮನೆಯಲ್ಲಿ ಪೂಜೆಯನ್ನು ಮಾಡಲು ಅರ್ಚಕರನ್ನು ಕರೆತರಬಹುದು ಅಥವಾ ಇತರ ಕುಟುಂಬ ಸದಸ್ಯರು ಪೂಜೆಯನ್ನು ಮಾಡಬಹುದು.

ದುರ್ಗಾ ಸಪ್ತಶತಿ ಪಾರಾಯಣಕ್ಕೆ ಯಾವುದೇ ತೊಂದರೆ ಇಲ್ಲ. ನೀವು ಅದನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಥವಾ ನಿಮ್ಮ ಕೈಯಲ್ಲಿ ದುರ್ಗಾ ಸಪ್ತಶತಿಯನ್ನು ಹಿಡಿದುಕೊಂಡು ಪಠಿಸಬಹುದು. ಆದರೆ ಓದಿದ ನಂತರ ದುರ್ಗಾ ಸಪ್ತಶತಿಯನ್ನು ಶುದ್ಧ, ಪವಿತ್ರ ಸ್ಥಳದಲ್ಲಿ ಇರಿಸಿ. ಅದನ್ನು ಪೂಜಾ ಸ್ಥಳದಲ್ಲಿ ಇಡಬೇಡಿ.

(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+