ಟ್ವಿಟ್ಟರಿನಲ್ಲಿ ಕನ್ನಡ ಕೋಗಿಲೆಯ ಕುಹೂ ಕುಹೂ

ಜೇನ ಹನಿಯಷ್ಟು ಸಿಹಿ, ಕೋಗಿಲೆ ದನಿಯಷ್ಟು ಸವಿಯಾಗಿರುವ ಕನ್ನಡವನ್ನು ಅಂತರ್ಜಾಲದಲ್ಲಿ ಓದುವವರಿಗೆ, ಕನ್ನಡವನ್ನೇ ಉಸಿರಾಗಿಸಿಕೊಂಡವರಿಗೆ, ಕನ್ನಡವನ್ನು ಪ್ರೀತಿಯಿಂದ ಕನ್ನಡೇತರರಿಗೆ ಕಲಿಸುತ್ತಿರುವವರಿಗೆ, ಎಲೆಮರೆ ಕಾಯಿಯಂತೆ ಕನ್ನಡ ಸೇವೆ ಮಾಡುತ್ತಿರುವವರಿಗೆ ಆನ್ ಲೈನ್ ಮುಖಾಂತರವೇ 58ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಜಿಲ್ಲೆಜಿಲ್ಲೆಗಳಲ್ಲಿ, ತಾಲೂಕುತಾಲೂಕುಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಇಂದು ಕನ್ನಡ ಧ್ವಜಗಳು ಹಾರಾಡುತ್ತಿವೆ. ಎಲ್ಲರ ಬಾಯಲ್ಲಿ ಕನ್ನಡದ ಮಾತುಗಳು, ಕನ್ನಡದ ಹಾಡುಗಳು, ಕನ್ನಡದ ನೆನಪುಗಳು ಮೆರೆದಾಡುತ್ತಿವೆ. ಆದರೆ, ಬ್ಯಾಂಕುಗಳಲ್ಲಿ, ಮಾಲ್ ಗಳಲ್ಲಿ, ಎಂಜಿ ರಸ್ತೆಯಲ್ಲಿ, ನಮ್ಮ ಮೆಟ್ರೋಗಳಲ್ಲಿ, ಬ್ರಿಗೇಡ್ ರಸ್ತೆಯಲ್ಲಿ, ಎಫ್ಎಂ ರೇಡಿಯೋಗಳಲ್ಲಿ, ಆಂಗ್ಲ ಭಾಷೆಯ ಶಾಲೆಗಳಲ್ಲಿ ಕನ್ನಡ ನಲಿದಾಡುವುದು ಎಂದು?

ವಸ್ತುಸ್ಥಿತಿ ಹೇಗಿದೆಯಂದ್ರೆ, ಕನ್ನಡ ಕಲೀರೋ ಮುಂಡೆ ಮಕ್ಳಾ, ಎಲಾ ಕುನ್ನಿ ಕರ್ನಾಟಕದಲ್ಲಿ ಕನ್ನಡ ಮಾತಾಡೋ ಎಂಬಂತಹ ಭಾಷೆಯನ್ನು ಬಳಸಲೇಬೇಕಾದಂಥ ಪರಿಸ್ಥಿತಿ ಉದ್ಭವವಾಗಿದೆ. ಇಂಥ ಭಾಷೆಯ ಅಗತ್ಯವಿದೆಯಾ? ಇಂದು ಹಾರಿಸಿದ ಕನ್ನಡ ಬಾವುಟ ಕಂಬದ ಮೇಲೆ ಇನ್ನೂ ಒಂದು ವರ್ಷ ಹಾರಾಡುತ್ತ, ಹರಿದಾಡುತ್ತ ಇದ್ದರೆ ಹೇಗೆ?

ಆಫ್ ಲೈನ್ ನಲ್ಲಿ ಹೇಗಿದೆಯೋ, ಆನ್ ಲೈನ್ ನಲ್ಲಿ, ಫೇಸ್ ಬುಕ್ ನಲ್ಲಿ, ಗೂಗಲ್ ಪ್ಲಸ್ ನಲ್ಲಿ, ಟ್ವಿಟ್ಟರ್ ನಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳ ಸುರಿಮಳೆ ನೋಡುವುದೇ ಒಂದು ಆನಂದ. ಆದರೆ, ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವ ಅಗತ್ಯವಿಲ್ಲ. ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸಾರಿದಂತೆ ಇಡೀ ವರ್ಷ ಕನ್ನಡ ಉತ್ಸವ ನಡೆಯುತ್ತಿರಬೇಕು.

ಈ ಸಂದರ್ಭದಲ್ಲಿ ಟ್ವಿಟ್ಟರಿನಲ್ಲಿ ನಲಿದಾಡುತ್ತಿರುವ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ. ಆನ್ ಲೈನ್ ನಲ್ಲಿ ಕೂಡ ಕನ್ನಡ ಬರೆಯಲು ಇದು ಪ್ರೇರೇಪಣೆಯಾಗಲಿ, ಅಂತರ್ಜಾಲದಲ್ಲಿ ಕನ್ನಡದ ಬಳಕೆ ಇನ್ನೂ ಹೆಚ್ಚಲಿ, ಕನ್ನಡ ಭಾಷೆ ಇನ್ನಷ್ಟು ಬಲಿಷ್ಠವಾಗಲಿ, ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಸುವಂತಾಗಲಿ ಎಂಬುದಷ್ಟೇ ಒನ್ಇಂಡಿಯಾ ಕನ್ನಡದ ಉದ್ದೇಶ.

Lohit (ಲೋಹಿತ್)

ಪದ ತಂತ್ರಾಂಶ ಅಭಿವೃದ್ಧಿ ಪಡಿಸಿದ ತಂತ್ರಜ್ಞ ಲೋಹಿತ್ ಡಿ. ಶಿವಮೂರ್ತಿ ಅವರ ಸಂದೇಶ.

ನವರಸ ನಾಯಕ ಜಗ್ಗೇಶ್

ಟ್ವಿಟ್ಟರನ್ನು ಮತ್ತು ಟ್ವಿಟ್ಟರಿನಲ್ಲಿ ಕನ್ನಡವನ್ನು ಅವಕಾಶ ಸಿಕ್ಕಾಗಲೆಲ್ಲ ಬಳಸುವ ಕನ್ನಡ ನಟರಲ್ಲಿ ನವರಸ ನಾಯಕ ಜಗ್ಗೇಶ್ ಅಗ್ರಗಣ್ಯರು. ಅವರಿಗೂ ಶುಭಾಶಯಗಳು.

ಬಿಜೆಪಿ ನಾಯಕ ಅನಂತ್ ಕುಮಾರ್

ಅನಂತ್ ಕುಮಾರ್ ಅವರ ಮೊಗದಲ್ಲಿ ಎಂದೂ ಮಾಸದ ಕನ್ನಡದ ನಗು.

ಮಂಡ್ಯ ಎಂಪಿ ರಮ್ಯಾ

ಈ ಕನ್ನಡ ರಾಜ್ಯೋತ್ಸವದಂದು, ಈ ವರ್ಷ ಯಾವುದೇ ವಿವಾದ ಮಾಡಿಕೊಳ್ಳುವುದಿಲ್ಲವೆಂದು ರಮ್ಯಾ ಅವರು ನಿರ್ಣಯ ತೆಗೆದುಕೊಳ್ಳಲಿ.

ಪ್ರೋ. ರಾಜೀವ್ ಗೌಡ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಬೆಂಗಳೂರು) ನಲ್ಲಿ ಪ್ರೊಫೆಸರ್ ಆಗಿರುವ ಕಾಂಗ್ರೆಸ್ ವಕ್ತಾರ ರಾಜೀವ್ ಗೌಡ ಅವರಿಂದ ರಾಜ್ಯೋತ್ಸವ ಸಂದೇಶ.

ರತ್ನನ್ ಪದಗಳನ್ನು ಮರೆತರೆ ಹೇಗೆ?

ಜಿ.ಪಿ. ರಾಜರತ್ನಂ ಅವರ ಪದಗಳನ್ನು ಈ ರಾಜ್ಯೋತ್ಸವದ ಸಂದರ್ಭದಲ್ಲಿ ನೆನಪಿಸಿಕೊಟ್ಟಿದ್ದಕ್ಕೆ ಸಹನಾ ರಾವ್ ಅವರಿಗೆ ಧನ್ಯವಾದಗಳು.

ಸುಧೀಂದ್ರ ಕುಲಕರ್ಣಿ

ರಾಜಕಾರಣಿ, ಪತ್ರಕರ್ತ, ಅಂಕಣಕಾರ, ಬೆಳಗಾವಿ ಜಿಲ್ಲೆಯ ಅಥಣಿಯ ಸುಧೀಂದ್ರ ಕುಲಕರ್ಣಿ ಅವರ ಸಂದೇಶ.

ಬಿಜೆಪಿ ಕರ್ನಾಟಕ

ಭಾರತೀಯ ಜನತಾ ಪಕ್ಷದ ಶುಭಾಶಯಗಳು.

ಸತೀಶ್ ಶೇಖರ್

ಟ್ಟಿಟ್ಟರ್ ಸ್ನೇಹಿತ, ರಾಜಕೀಯ ಚಳವಳಿಗಾರ ಯುಕೆಯಲ್ಲಿರುವ ಸತೀಶ್ ಶೇಖರ್ ಅವರಿಂದ ಕನ್ನಡ ನಾಡಿನ ಬಂಧುಗಳಿಗೆ ಕನ್ನಡ ರಾಜ್ಯೋತ್ಸವದ ಸಂದೇಶ.

ಚಾಲೇಂಜಿಂಗ್ ಸ್ಟಾರ್ ದರ್ಶನ್

ನವೆಂಬರ್ 1ರಂದು ಚಾಲೇಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಅಭಿನಯಿಸಿದ ಬ್ಲಾಕ್ ಬಸ್ಟರ್ ಚಲನಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 1 ವರ್ಷ ಪೂರೈಸಿದೆ. ಅವರಿಗೆ ಒನ್ಇಂಡಿಯಾದ ಅಭಿನಂದನೆಗಳು.

ಮಧುಸೂಧನ್ ಮೂರ್ತಿ

ಯಾರು ಏನೇ ತಿಳಿದುಕೊಳ್ಳಲಿ, ಏನೇ ಅಂದುಕೊಳ್ಳಲಿ ಕನ್ನಡ ಮಾತಾಡುವುದನ್ನು ಮಾತ್ರ ಬಿಡಬೇಡಿ ಅನ್ನುವ ಕನ್ನಡಿಗನೊಬ್ಬನ ಕಳಕಳಿ.

ಲಂಬೋಧರ

ಏನು ಹೇಳ್ತೀರಿ ಇದಕ್ಕೆ?

ಇಂಗ್ಲಿಷಲ್ಲಿ ಸುದೀಪ್ ಶುಭಾಶಯ

ಸಿಕ್ಕಾಪಟ್ಟೆ ಬಿಜಿಯಾಗಿಯೇ ಇರುವ ಸುದೀಪ್ ಅವರಿಗೆ ಕನ್ನಡದಲ್ಲಿ ಟೈಪ್ ಮಾಡಕ್ಕೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಕನ್ನಡ ಟೈಪಿಸುವುದನ್ನು ಆದಷ್ಟು ಬೇಗನೆ ಕಲಿಯಲಿ.

ಚೆಂದುಳ್ಳಿ ಚೆಲುವೆ ಹರ್ಷಿಕಾ ಪೂಣಚ್ಚ

'ಪಿಯುಸಿ' ಪಾಸ್ ಆಗಿರುವ ನಟಿ ಹರ್ಷಿಕಾ ಪೂಣಚ್ಚ ಎಷ್ಟು ಬಿಜಿಯಾಗಿದ್ದಾರೋ ಗೊತ್ತಿಲ್ಲ. ಅವರ ಈ ಸಂದೇಶ ನೋಡಿದರೆ ಅವರಿಗೂ ಕನ್ನಡ ಟೈಪಿಸಲು ಬರುವುದಿಲ್ಲ ಅಂತ ಕಾಣತ್ತೆ. ಅವರೂ ಬೇಗನೆ ಕಲಿಯಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+