Naga Panchami 2024 Vastu Dosha: ನಾಗ ಪಂಚಮಿಯಂದು ಕಬ್ಬಿಣದ ಪ್ಯಾನ್‌ನಲ್ಲಿ ರೊಟ್ಟಿ ಏಕೆ ಮಾಡುವುದಿಲ್ಲ?

ಆಗಸ್ಟ್ 9ರಂದು ದೇಶಾದ್ಯಂತ ನಾಗ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ನಾಗ ಪಂಚಮಿಯೊಂದಿಗೆ ಅನೇಕ ರೀತಿಯ ನಂಬಿಕೆಗಳು ಮತ್ತು ಸಂಪ್ರದಾಯಗಳು ಸಂಬಂಧಿಸಿವೆ. ನಾಗ ಪಂಚಮಿಯಲ್ಲಿ ಹಲವರು ಹಾವಿನ ಮೂರ್ತಿ, ಹುತ್ತಕ್ಕೆ ಹಾಲನೆರೆಯುತ್ತಾರೆ. ಅನೇಕ ಸ್ಥಳಗಳಲ್ಲಿ, ನಾಗ ಪಂಚಮಿಯ ದಿನದಂದು ವಿಶೇಷ ಆಚರಣೆಗಳು ಮತ್ತು ಪೂಜೆ-ಹವನವನ್ನು ಸಹ ಮಾಡಲಾಗುತ್ತದೆ. ನಾಗ ಪಂಚಮಿಯಿಂದ ಕೆಲ ದಿನಗಳವರೆಗೆ ಹಾವಿನ ಹುತ್ತಗಳಿಗೆ, ಮೂರ್ತಿಗಳಿಗೆ ಹಾಲನೆರೆಯುತ್ತಾರೆ.

ನಾಗ ಪಂಚಮಿಗೆ ಸಂಬಂಧಿಸಿದ ಇನ್ನೊಂದು ನಂಬಿಕೆ ಇದೆ. ನಾಗ ಪಂಚಮಿಯ ದಿನದಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿಯನ್ನು ಬೇಯಿಸಬಾರದು ಎಂದು ಹಲವರು ನಂಬುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ನಾಗ ಪಂಚಮಿಯ ದಿನದಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿ ಮಾಡುವುದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ನಾಗಪಂಚಮಿಯ ದಿನದಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿ ಏಕೆ ಮಾಡುವುದಿಲ್ಲ ಎಂದು ತಿಳಿಯೋಣ.

Naga Panchami 2024 Vastu Dosha Why roti cannot be made in an iron pan

ನಾಗ ಪಂಚಮಿಯಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿ ಮಾಡುವುದಿಲ್ಲ. ಇದಕ್ಕೆ ಕಾರಣವಿದೆ. ನಾಗ ಪಂಚಮಿಯಂದು ಹಾವಿನ ಪೂಜೆಯ ಜೊತೆಗೆ ರಾಹು ಗ್ರಹದ ಶಾಂತಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಹ ಮಾಡಲಾಗುತ್ತದೆ. ಹೀಗಾಗಿ ಈ ದಿನ ಕಬ್ಬಿಣವನ್ನು ಬಳಸಬಾರದು. ರೊಟ್ಟಿ ತಯಾರಿಸಲು ಬಳಸುವ ಕಬ್ಬಿಣದ ಪ್ಯಾನ್ ಅನ್ನು ಸಹ ಈ ದಿನ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ.

ಹೌದು.. ಕಬ್ಬಿಣದ ಪ್ಯಾನ್ ಅನ್ನು ಸಾಮಾನ್ಯವಾಗಿ ರೊಟ್ಟಿ ಮಾಡಲು ಬಳಸಲಾಗುತ್ತದೆ. ನಾಗ ಪಂಚಮಿಯಂದು ಕಬ್ಬಿಣದ ಬಳಕೆಯನ್ನು ಅಶುಭವೆಂದು ಪರಿಗಣಿಸುವುದರಿಂದ ಅದರ ಬಳಕೆಯನ್ನು ತಪ್ಪಿಸಲಾಗುತ್ತದೆ.

ರಾಹುವಿನಿಂದ ನಕಾರಾತ್ಮಕ ಶಕ್ತಿ

ಕಬ್ಬಿಣವನ್ನು ರಾಹುವಿನ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಔಇಗೆ ಹಾಲನೆರೆಯುವ ದಿನಗಳಲ್ಲಿ ಕಬ್ಬಿಣದ ಬಾಣಲೆಯನ್ನು ಬಳಸಿದರೆ ರಾಹು ಗ್ರಹ ಅಶುಭ ಪರಿಣಾಮಗಳನ್ನು ಬೀರುತ್ತದೆ ಎಂದು ನಂಬಲಾಗುತ್ತದೆ. ರಾಹು ಗ್ರಹದ ಶಾಂತಿಗಾಗಿ ಮಾತ್ರ ಸರ್ಪಗಳನ್ನು ಪೂಜಿಸಲಾಗುತ್ತದೆ. ಹೀಗಾಗಿ ಈ ದಿನ ವಿಶೇಷವಾಗಿ ಕಬ್ಬಿಣವನ್ನು ಬಳಸಬಾರದು.

ರಾಹುವಿನ ಋಣಾತ್ಮಕ ಪ್ರಭಾವದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಈ ನಕಾರಾತ್ಮಕ ಶಕ್ತಿಯಿಂದಾಗಿ ಒಬ್ಬ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ ಮತ್ತು ಅವನ ಕೆಲಸವೂ ಹಾಳಾಗುತ್ತದೆ.

ಈ ದಿನ ನಾಗ ಪಂಚಮಿಯಂದು ನಾಗದೇವರ ಹೆಸರಿನಲ್ಲಿ ಆಹಾರ ಸೇವಿಸಿ. ನಾಗ ಪಂಚಮಿಯ ದಿನದಂದು ನಾಗದೇವತೆಯ ಹೆಸರಿನಲ್ಲಿ ಆಹಾರ ಮತ್ತು ಹಾಲನ್ನು ಹೊರತರಬೇಕು. ಅಂದಹಾಗೆ ಹಾವುಗಳು ಹಾಲು ಅಥವಾ ಆಹಾರವನ್ನು ಸೇವಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ನಾಗ ಪಂಚಮಿಯಂದು ಶೇಷನಾಗನನ್ನು ನೆನೆದು, ಆಹಾರವನ್ನು ತೆಗೆದುಕೊಂಡು ಹಾವುಗಳಿಗೆ ಇಟ್ಟುಬರಬೇಕು. ನಂತರ ಅದನ್ನು ಹಸಿದ ಪ್ರಾಣಿ ಅಥವಾ ಪಕ್ಷಿಗಳು ತಿನ್ನುತ್ತವೆ. ಇದರಿಂದ ನಿಮಗೆ ಪುಣ್ಯವನ್ನು ಲಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+