ನೀನಲ್ಲವೇ ?
ಸುಧೆಯನು ಉಣಿಸಿ,
ಲಾಲಿಸಿ ಪಾಲಿಸಿ
ಎತ್ತಿ ಮುದ್ದಾಡಿದವಳು
ನೀನಲ್ಲವೇ ?
ಕಥೆಯನು ಹೇಳುತ
ನೀತಿಯ ಕಲಿಸಿದ
ಮೊಟ್ಟ ಮೊದಲ ಗುರು
ನೀನಲ್ಲವೇ ?
ವಾತ್ಸಲ್ಯದಡಿಯಲಿ
ಪ್ರೀತಿ ಭಾವದಲಿ
ನಕ್ಕು ನಗಿಸಿದವಳು
ನೀನಲ್ಲವೇ ?
'ಸತ್ಯಮೇವ ಜಯತು"
ಸಹನೆಯಿಂದ ಒಳಿತು ಎಂದು
ನುಡಿದವಳು ನೀನಲ್ಲವೇ ?
ನಿನ್ನ ಸಿಹಿ ಜೇನಿನ ಸವಿ
ನಾನಲ್ಲವೇ !!
ನಿನಗೆ ಇದೋ ವಂದನೆ
ಕಣ್ಣು ತೆರೆವ ಮೊದಲೆ ನಿನ್ನ
ಕೂಗಿ ಕರೆದೆ ' ಅಮ್ಮ"
ಕರೆದ ಒಡನೆ ಮಡಿಲಿಗಿರಿಸಿ
ಮುದ್ದಿಸಿದಳು ಅಮ್ಮ
ಜಗದ ಬೆಳಕ ಕಂಡ ಒಡನೆ
ಪುಳಕಗೊಂಡೆ ಅಮ್ಮ
ಬಾಳದಾರಿ ದೀಪವದು
ಬೆದರದಿರೆಂದಳಮ್ಮ
ಎದ್ದು ಬಿದ್ದು ಹೆಜ್ಜೆ ಇಡುತ
ನಡಿಗೆ ಕಲಿತೆ ಅಮ್ಮ
ಏಳು ಬೀಳು ಬಾಳ ಗೆಲವು
ಒಲವಿನಿಂದ ನಕ್ಕಳಮ್ಮ.
***
ಅಮ್ಮ ನೀನು ನೀಲಿ ಬಾನು
ಅಮ್ಮ ನೀನು ಹಾಲು ಜೇನು
ಅಮ್ಮ ನೀನು ಕಾಮಧೇನು
ಸದಾ ಬೇಕು ನನಗೆ ನೀನು
ನಿನಗೆ ಇದೋ ವಂದನೆ
ವಿಶಾಲ ರಂಗಸ್ವಾಮಿ, ಜೆ.ಪಿ. ನಗರ, ಬೆಂಗಳೂರು












Click it and Unblock the Notifications