Krishna Jayanti 2024: ಕೃಷ್ಣ ಜಯಂತಿಯ ದಿನದಂದು ಈ ವಸ್ತು ಖರೀದಿಸಿ.. ಲಕ್ಷ್ಮಿಯ ಕೃಪೆಯಿಂದ ಸಂಪತ್ತು ವೃದ್ಧಿ
ಹಿಂದೂ ಧರ್ಮದಲ್ಲಿ ಕೃಷ್ಣ ಜಯಂತಿ ಬಹಳ ಮುಖ್ಯ. ಶ್ರೀಕೃಷ್ಣ ಈ ದಿನ ಜನಿಸಿದರು. ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿ ತಿಥಿಯಂದು ಕೃಷ್ಣ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಕೃಷ್ಣ ಜಯಂತಿಯನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ.
ಕೃಷ್ಣ ಜಯಂತಿಯನ್ನು ದೇಶದಾದ್ಯಂತ ಹಿಂದೂಗಳು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಮನೆಯಲ್ಲಿ ಕೃಷ್ಣನ ಪಾದಗಳನ್ನು ಬಿಡಿಸಿ ಕೃಷ್ಣನಿಗೆ ಇಷ್ಟವಾದ ವಿವಿಧ ಆಭರಣಗಳನ್ನು ಹಾಕಿ ಶ್ರೀಕೃಷ್ಣನನ್ನು ಪೂಜಿಸುವುದು ವಾಡಿಕೆ. ಹೀಗೆ ಪೂಜೆ ಮಾಡುವುದರಿಂದ ಕೃಷ್ಣನ ಕೃಪೆಯಿಂದ ಜೀವನದಲ್ಲಿ ಎಲ್ಲ ರೀತಿಯ ಕಷ್ಟಗಳು ದೂರವಾಗಿ ಜೀವನ ಸುಖ ಸಮೃದ್ಧಿಯಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೃಷ್ಣ ಜಯಂತಿಯ ದಿನದಂದು ಮನೆಗೆ ಬೇಕಾಗುವ ಒಂದಿಷ್ಟು ವಸ್ತುಗಳನ್ನು ಖರೀದಿಸುವುದರಿಂದ ಶ್ರೀಕೃಷ್ಣನ ಅನುಗ್ರಹ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಹಣದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷವು ಯಾವಾಗಲೂ ಇರುತ್ತದೆ. ಹಾಗಾದರೆ ಈಗ ಕೃಷ್ಣ ಜಯಂತಿಯ ದಿನ ಯಾವ ವಸ್ತು ಖರೀದಿಸಿದರೆ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನೋಡೋಣ.
ಬಾಲ ಕೃಷ್ಣನ ವಿಗ್ರಹ
ನಿಮ್ಮ ಮನೆಯಲ್ಲಿ ಕೃಷ್ಣನ ಮೂರ್ತಿ ಇಲ್ಲದ್ದಿದ್ದರೆ ಕೃಷ್ಣ ಜಯಂತಿಯ ದಿನದಂದು ಬಾಲ ಕೃಷ್ಣನ ವಿಗ್ರಹವನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಇದನ್ನು ಪೂಜಿಸುವುದರಿಂದ ಶ್ರೀಕೃಷ್ಣ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸಂಪತ್ತು ಹೆಚ್ಚಾಗುತ್ತದೆ.
ಕೊಳಲು
ಕೃಷ್ಣನಿಗೆ ಕೊಳಲು ಎಂದರೆ ತುಂಬಾ ಇಷ್ಟ. ಅದಕ್ಕೇ ಅವರ ಕೈಯಲ್ಲಿ ಸದಾ ಕೊಳಲು ಇರುತ್ತೆ. ಕೃಷ್ಣ ಜಯಂತಿಯ ದಿನ ಈ ಕೊಳಲನ್ನು ಮನೆಗೆ ತರುವುದು ಒಳ್ಳೆಯದು. ಮನೆಯಲ್ಲಿ ಕೊಳಲು ಇದ್ದರೆ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗುತ್ತದೆ. ಮತ್ತು ಅದನ್ನು ಮನೆಯಲ್ಲಿ ನೇತುಹಾಕುವುದರಿಂದ, ನೀವು ವ್ಯಾಪಾರ ಮತ್ತು ವೃತ್ತಿಯಲ್ಲಿ ಉತ್ತಮ ಯಶಸ್ಸು ಹಾಗೂ ಲಾಭವನ್ನು ಪಡೆಯುತ್ತೀರಿ. ಹಾಗೆಯೇ ಮಲಗುವ ಕೋಣೆಯಲ್ಲಿ ಕೊಳಲನ್ನು ಇಟ್ಟರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ನವಿಲು ಗರಿ
ನವಿಲು ಗರಿ ಕೃಷ್ಣನ ಬಳಿ ಇರುವ ಇನ್ನೊಂದು ವಸ್ತು. ಈ ನವಿಲು ಗರಿಯನ್ನು ರಾಧೆಯ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಕೃಷ್ಣ ಜಯಂತಿಯ ದಿನ ಈ ನವಿಲು ಗರಿಯನ್ನು ಖರೀದಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ಹಸು ಮತ್ತು ಕರುವಿನ ಪ್ರತಿಮೆ
ಕೃಷ್ಣ ಜಯಂತಿಯಂದು ಮನೆಗೆ ಹಸು ಮತ್ತು ಕರುವಿನ ಮೂರ್ತಿಯನ್ನು ತರುವುದು ತುಂಬಾ ಒಳ್ಳೆಯದು. ಹಸುವನ್ನು ಕಾಮದೇನು ಎಂದು ಪರಿಗಣಿಸಲಾಗುತ್ತದೆ. ಇದು 14 ಸಂಪತ್ತುಗಳಲ್ಲಿ ಒಂದಾಗಿದೆ. ಹಾಗಾಗಿ ಈ ಗೋವಿನ ಮೂರ್ತಿಯನ್ನು ಮನೆಯಲ್ಲಿಟ್ಟರೆ ಸುಖ ಸಂತೋಷ ಹೆಚ್ಚುತ್ತದೆ. ಮನಸ್ಸು ಮತ್ತು ದೇಹ ಆರೋಗ್ಯವಾಗಿರುತ್ತದೆ. ಅದರೊಂದಿಗೆ ಮನೆಯಲ್ಲಿ ಹಣದ ಹರಿವು ಕೂಡ ಹೆಚ್ಚಾಗುತ್ತದೆ.
ಬೆಣ್ಣೆ
ಕೃಷ್ಣನಿಗೆ ಬೆಣ್ಣೆ ಎಂದರೆ ತುಂಬಾ ಇಷ್ಟ. ಬೆಣ್ಣೆಯೊಂದಿಗೆ ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಹಾಗಾಗಿ ಕೃಷ್ಣ ಜಯಂತಿಯ ದಿನದಂದು ಈ ಬೆಣ್ಣೆಯನ್ನು ಖರೀದಿಸಿ ಕೃಷ್ಣನನ್ನು ಪೂಜಿಸಿದರೆ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.












Click it and Unblock the Notifications