2015ರ ಸಾಲಿನ ರಜಾದಿನಗಳ ಪಟ್ಟಿ ಬಿಡುಗಡೆ
ಬೆಂಗಳೂರು, ನ 18: 2015ರ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಕಟಿಸಿದೆ. 19 ನಿರ್ಬಂಧಿತ ರಜೆಗಳನ್ನು ಹೊರತು ಪಡಿಸಿ 24 ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ.

2014ರ ವರ್ಷದಂತೆ ಬರುವ ವರ್ಷವೂ ಸರಣಿ ರಜೆಯ ಮಜಾ ಅನುಭವಿಸಲು ಹೆಚ್ಚಿನ ಅವಕಾಶವಿದೆ. ಮುಂದಿನ ವರ್ಷ ಕನ್ನಡ ರಾಜ್ಯೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು ಭಾನುವಾರದಂದು ಬರಲಿದೆ. ಜೂನ್ ತಿಂಗಳಲ್ಲಿ ಯಾವುದೇ ರಜೆಗಳಿಲ್ಲ. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಆರು ರಜೆಗಳಿಗೆ.
ಇಲಾಖೆ ಪ್ರಕಟಿಸಿರುವ 24 ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿದೆ
| ಕ್ರಮ-ಸಂ | ದಿನಾಂಕ | ದಿನ | ದಿನವಿಶೇಷ / ಹಬ್ಬಹರಿದಿನ |
| 1 | ಜನವರಿ 15 | ಗುರುವಾರ | ಮಕರ ಸಂಕ್ರಾಂತಿ/ಪೊಂಗಲ್ |
| 2 | ಜನವರಿ 26 | ಸೋಮವಾರ | ಗಣರಾಜ್ಯೋತ್ಸವ |
| 3 | ಫೆಬ್ರವರಿ 17 | ಮಂಗಳವಾರ | ಮಹಾಶಿವರಾತ್ರಿ |
| 4 | ಮಾರ್ಚ್ 21 | ಶನಿವಾರ | ಚಾಂದ್ರಮಾನ ಯುಗಾದಿ |
| 5 | ಏಪ್ರಿಲ್ 2 | ಗುರುವಾರ | ಮಹಾವೀರ ಜಯಂತಿ |
| 6 | ಏಪ್ರಿಲ್ 3 | ಶುಕ್ರವಾರ | ಗುಡ್ ಫ್ರೈಡೆ |
| 7 | ಏಪ್ರಿಲ್ 14 | ಮಂಗಳವಾರ | ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ |
| 8 | ಏಪ್ರಿಲ್ 21 | ಮಂಗಳವಾರ | ಬಸವ ಜಯಂತಿ |
| 9 | ಮೇ 1 | ಶುಕ್ರವಾರ | ಕಾರ್ಮಿಕರ ದಿನಾಚರಣೆ |
| 10 | ಜುಲೈ 18 | ಶನಿವಾರ | ರಂಜಾನ್ |
| 11 | ಆಗಸ್ಟ್ 15 | ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| 12 | ಸೆಪ್ಟಂಬರ್ 17 | ಗುರುವಾರ | ಗಣೇಶ ಚತುರ್ಥಿ |
| 13 | ಸೆಪ್ಟಂಬರ್ 24 | ಗುರುವಾರ | ಬಕ್ರೀದ್ |
| 14 | ಅಕ್ಟೋಬರ್ 2 | ಶುಕ್ರವಾರ | ಗಾಂಧಿ ಜಯಂತಿ |
| 15 | ಅಕ್ಟೋಬರ್12 | ಸೋಮವಾರ | ಮಹಾಲಯ ಅಮವಾಸ್ಯೆ/ಸರ್ವಪಿತೃ ಅಮವಾಸ್ಯೆ |
| 16 | ಅಕ್ಟೋಬರ್22 | ಗುರುವಾರ | ಮಹಾನವಮಿ/ಆಯುಧಪೂಜೆ |
| 17 | ಅಕ್ಟೋಬರ್23 | ಶುಕ್ರವಾರ | ವಿಜಯದಶಮಿ |
| 18 | ಅಕ್ಟೋಬರ್24 | ಶನಿವಾರ | ಮೊಹರಂ |
| 19 | ಅಕ್ಟೋಬರ್27 | ಮಂಗಳವಾರ | ವಾಲ್ಮೀಕಿ ಜಯಂತಿ |
| 20 | ನವೆಂಬರ್10 | ಮಂಗಳವಾರ | ನರಕ ಚತುರ್ದಶಿ |
| 21 | ನವೆಂಬರ್12 | ಗುರುವಾರ | ಬಲಿಪಾಡ್ಯ |
| 22 | ನವೆಂಬರ್ 28 | ಶನಿವಾರ | ಕನಕದಾಸ ಜಯಂತಿ |
| 23 | ಡಿಸೆಂಬರ್ 24 | ಗುರುವಾರ | ಈದ್ ಮಿಲಾದ್ |
| 24 | ಡಿಸೆಂಬರ್ 25 | ಶುಕ್ರವಾರ | ಕ್ರಿಸ್ಮಸ್ |












Click it and Unblock the Notifications