ಅಲ್ಕಟೆಲ್ ಲ್ಯೂಸೆಂಟ್ ನಲ್ಲಿ ನಾಡಹಬ್ಬ

ಕಾರ್ಯಕ್ರಮವನ್ನು ಕೇವಲ ಕನ್ನಡಿಗರನ್ನು ಮಾತ್ರವಲ್ಲದೇ, ಕನ್ನಡೇತರರ ಸಹೋದ್ಯೋಗಿಗಳನ್ನೂ ಸೇರಿಸಿಕೊಂಡು ಯೋಜಿಸಲಾಗಿತ್ತು. ಹಲವು ದಿನಗಳಿಂದ ಸಹೋದ್ಯೋಗಿಗಳನ್ನು ಕುತೂಹಲಕ್ಕೀಡು ಮಾಡಿದ್ದ ಆಹ್ವಾನ ಫಲಕ, ಎಲ್ಲರೂ ತಮ್ಮದೇ ರೀತಿಯಲ್ಲಿ ಹಬ್ಬಕ್ಕೆ ಅಣಿಯಾಗಲು ಅನುವು ಮಾಡಿಕೊಟ್ಟಿತ್ತು. ಬಹಳಷ್ಟು ಜನ ವಿಶೇಷವಾದ ಸಾಂಪ್ರದಾಯಿಕ ಉಡುಗೆತೊಡುಗೆಗಳಲ್ಲಿ ವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು.
ವಿಡಿಯೋ:ಅಲ್ಕಟೆಲ್ ಲ್ಯೂಸೆಂಟ್ ನಲ್ಲಿ ಕನ್ನಡಹಬ್ಬ
ದಿನ ಪೂರ್ತಿ, ಉಪಹಾರ ಮಂದಿರದಲ್ಲಿ ಕನ್ನಡದ ಸುಮಧುರ ಹಾಡುಗಳು, ಕನ್ನಡದ ಬಗೆಗಿನ ದೃಶ್ಯಾವಳಿಗಳು ಜನಮನ ತಣಿಸಿತ್ತು. ಟೋಟಲ್ ಕನ್ನಡ.ಕಾಂ ನವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷೆ, ಸಾಹಿತ್ಯ, ಚಲನಚಿತ್ರಗಳಿಗೆ ಸಂಬಂಧಪಟ್ಟ ಪುಸ್ತಕಗಳು, ಹಾಡಿನ ಮುದ್ರಿಕೆಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಕನ್ನಡಿಗರನ್ನು ಸೆರೆಹಿಡಿದರೆ, ಪ್ರವಾಸೋದ್ಯಮ ಇಲಾಖೆಯ ಕೈಪಿಡಿಗಳ ಮೂಲಕ ಪ್ರವಾಸಿ ಸ್ಥಳಗಳ ಮಾಹಿತಿ, ಕನ್ನಡೇತರ ಮಿತ್ರರ ಆಸಕ್ತಿ ಕೆರಳಿಸಿತ್ತು.
ಅಂದುಕೊಂಡಂತೆ, ಸಂಜೆ 4 ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಹೊತ್ತಿಗೆ, ನಿರೀಕ್ಷೆಗೂ ಮೀರಿ ಕಿಕ್ಕಿರಿದು ಸೇರಿದ್ದ ಕನ್ನಡ ಪ್ರೇಮಿಗಳನ್ನು ನೋಡಿ ಹೃದಯ ತುಂಬಿಬಂದಿತ್ತು. ನಮ್ಮ ಕಛೇರಿಯ ಮುಖ್ಯಸ್ಥೆ ಶ್ರೀಮತಿ ಚಿತ್ರಾ ಕಸ್ತೂರಿಯವರು ಸಾಂಪ್ರದಾಯಿಕವಾಗಿ ದೀಪ ಬೆಳಗುತ್ತಿದ್ದರೆ, ಹಿನ್ನೆಯಲ್ಲಿ "ಹಚ್ಚೇವು ಕನ್ನಡ ದೀಪ" ದ ನೃತ್ಯ ಮತ್ತು ಹಾಡು ಮೇಳೈಸುತ್ತಿತ್ತು.
ಬಳಗದ ಪರಿಚಯ ಮತ್ತು ಅದರ ಧ್ಯೇಯೋದ್ದೇಶಗಳ ಬಗೆಗಿನ ನಿರೂಪಣೆ, ಬಳಗದ ಬಗೆಗೆ ಗೌರವ ಮತ್ತು ಆತ್ಮೀಯತೆಯನ್ನು ಮೂಡಿಸಿತು. ಪೂರ್ವಭಾವಿಯಾಗಿ ನಡೆಸಲ್ಪಟ್ಟ, ನಮ್ಮ ಶಾಲಾದಿನಗಳನ್ನು ನೆನಪಿಸುವಂಥ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಮತ್ತು ಚಿತ್ರವಿನ್ಯಾಸ ಸ್ಪರ್ಧೆಗಳ ವಿಜೇತರಿಗೆ ಪುಸ್ತಕಗಳು, ಮುದ್ರಿಕೆಗಳ ರೂಪದಲ್ಲಿ ಬಹುಮಾನ ವಿತರಿಸಲಾಯಿತು.
ನಂತರ ರಂಗು ರಂಗಿನದ ರಂಜನೀಯ ಕಾರ್ಯಕ್ರಮಗಳು ಸಭಿಕರನ್ನು ಕಾಲದ ಪರಿವಿರಿವೆ ಇರದಂತೆ ಹಿಡಿದಿಟ್ಟವು. ಭಾವಗೀತೆ, ವಿಶೇಷ ವಾದ್ಯಸಂಗೀತ, ಚಿತ್ರಗೀತೆ, ನಗೆ ನಾಟಕ, ಯಕ್ಷಗಾನದ ಹಾಡು, ಅರ್ಜುನ ಬಬ್ರುವಾಹನರ ವೀರಾವೇಶ, ಸಮೂಹಗಾನ, ರತ್ನನ ಪದಗಳ ಕುಡುಕನ ಕನ್ನಡಾಭಿಮಾನವನ್ನು ಆಹಾವಹಿಸಿಕೊಂಡ ಕಿರು ನಾಟಕ, ನಾಡಗೀತೆ ಹಾಗೂ ಹಲವು ಕನ್ನಡ ಚಿತ್ರಗೀತೆಗಳ ಸಮೂಹ ನೃತ್ಯ ಕಿವಿ ಕಣ್ಣಿಗಾದರೆ, ಕಾಯಿ ಹೋಳಿಗೆ, ಬೆಳಗಾವಿ ಕುಂದ, ಅವಲಕ್ಕಿ ಖಾರ ನಾಲಿಗೆಯನ್ನು ತಣಿಸಿದವು.
ಈ ವಿನೋದಾವಳಿಗಳ ಮಧ್ಯೆ ಕನ್ನಡಿಗರಿಗೆ, ಕನ್ನಡೇತರರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂತಹ ರಸಪ್ರಶ್ನೆಗಳು ಅಣುಬಾಂಬ್ ಗಳಂತೆ ಸಿಡಿಯುತ್ತಾ ಎಲ್ಲರ ಜ್ಞಾನವನ್ನು ಒರೆಗೆ ಹಚ್ಚಿದವು. ಕಾರ್ಯಕ್ರಮದ ಕೊನೆಗೆ ನಾಡಗೀತೆಯನ್ನು ಹಾಡುತ್ತಿದ್ದಂತೆ, ಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದಾಗ ಎಲ್ಲರ ಮೈಯಲ್ಲೂ ಮಿಂಚು ಹರಿದ ಭಾವ.
ಒಟ್ಟಿನಲ್ಲಿ ಅಂದಿನ ( ನ 12) ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ, ಆತ್ಮೀಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications