ಪರದೇಶದಲ್ಲಿ ನಮ್ಮ ಮಾತೃಭೂಮಿಯನ್ನು ನೆನೆಯುವಾಗ ಆಗುವ ಆನಂದ ಹೇಳತೀರದು. ಈ ಸವಿ ಅನುಭವವನ್ನು ಬಹುಶಃ ಅನುಭವಸಿದೇ ತಿಳಿಯಲು ಕಷ್ಟಸಾಧ್ಯ. ಹುಟ್ಟೂರಿನಿಂದ ದೂರ ಇರುವ ಜನ ತಮ್ಮೂರನ್ನು ನೆನೆದು ಸ್ವಲ್ಪ ಮಟ್ಟಿಗೆ ಇದನ್ನು ಅನುಭವಿಸಿರಬೇಕು. ಎಲ್ ಅಂಡ್ ಟಿ ಇನ್ಫೋಟೆಕ್ ನ ಉದ್ಯೋಗಿಗಳಾಗಿ ಕಾರ್ಯನಿಮಿತ್ತ ನಾವಿರುವುದು ಸುಂದರವಾದ ಸುವಾನ್ ನಗರಿಯಲ್ಲಿ, ದಕ್ಷಿಣ ಕೊರಿಯಾ ದೇಶದಲ್ಲಿರುವ ಒಂದು ಸುಂದರ ನಗರ.