ಕವನ : ಮಹಾ ನಾಯಕ ಮಾಹಾ ಕಾಯಕ

ಮಹಾ ನಾಯಕ ಮಾಹಾ ಕಾಯಕ
ವಿಘ್ನ ವಿನಾಶಕ ವಿನಾಯಕ
ಮಾಯಾದ ಸ್ವಪ್ನದ
ದಿವ್ಯ ಜ್ಯೋತಿಯೇ
ಜೀವಾಧಾರವಾಗಿಹೆ
ಮೂಲಾಧಾರಾ ವಾಸಿಯೆ
ಸೂಕ್ಷ್ಮರೂಪಿ ವಿಶ್ವಸ್ವರೂಪಿ
ಸ್ಥಿತಿಲಯ ಪ್ರಳಯ
ಸಾಕ್ಷಿ ನೀ ಮಂದಹಾಸಿ
ವಿಸ್ಮಯ ರಾಶಿ ನೀ ವಿಶ್ವಾಸಿ
ಸದ್ದಿಲ್ಲದ ಸದ್ದದು
ಓಂಕಾರ ನಾದವದು
ಸಿದ್ದಿಸು ಸಿದ್ದಿ ವಿನಾಯಕ
ನನ್ನ ಕಾಯಕ ನಾಯಕ
ನನ್ನಲೇ ಇರುವೆ
ನನ್ನನೆ ಗೆಲುವೆ
ಪ್ರೇಮದ ಚಿಲುಮೆ
ಜೀವ ರಾಶಿಯ ಕುಲುಮೆ
ವಂಚ ಪಂಚ ಭೂತಕ
ಅದ್ಯ ಅದಿ ಭೌತಿಕ
ಗತಿಕ ಪಂಚೇಂದ್ರಿಯ
ಇಂದ್ರಿಯ ಸಾರ್ವಭೌಮ












Click it and Unblock the Notifications