Ganesh Chaturthi 2024: ಮನೆಯಲ್ಲಿ ಗಣೇಶ ಮೂರ್ತಿ ಇಡುವಾಗ ಈ ತಪ್ಪು ಮಾಡಲೇಬೇಡಿ..

ಗಣೇಶ ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ದೇವರು. ತನ್ನ ಭಕ್ತರ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಾವಲುಗಾರನಾಗಿ ನಿಲ್ಲುವವನು ಗಜಾನನ... ಆದ್ದರಿಂದ ಮನೆಯಲ್ಲಿ ಗಣೇಶನ ವಿಗ್ರಹವನ್ನು ಹೊಂದಿರುವುದು ತುಂಬಾ ಮಂಗಳಕರವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ವಿಗ್ರಹವನ್ನು ಮನೆಯಲ್ಲಿ ಇಡುವುದು ಮಾತ್ರವಲ್ಲದೆ ಪ್ರತೀ ವರ್ಷ ಗಣೇಶ ಚತುರ್ಥಿಯಂದು ಸಿಹಿ ತಿಂಡಿಗಳನ್ನು ಮಾಡಿ ಮನೆ, ಕಚೇರಿ ಹಾಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗಾದರೆ 2024 ಗಣೇಶ ಚತುರ್ಥಿ ಯಾವಾಗ? ಪೂಜೆಗೆ ಉತ್ತಮ ಸಮಯ ಯಾವುದು? ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಗಣೇಶನ ಮೂರ್ತಿಯನ್ನು ಇಡಬೇಕು? ಇದಕ್ಕಿರುವ ನಿಯಮಗಳು ಯಾವುವು? ಯಾವ ರೀತಿಯ ಗಣೇಶನ ಪ್ರತಿಮೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ತಿಳಿಯೋಣ.

ganesh chaturthi 2024 follow these things for placing ganesha idol at home

ಗಣೇಶ ಚತುರ್ಥಿ ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಬರುತ್ತದೆ. 2024 ರಲ್ಲಿ ವಿನಾಯಕ ಚತುರ್ಥಿ ಹಬ್ಬ ಸೆಪ್ಟೆಂಬರ್ 6, ಮಧ್ಯಾಹ್ನ 03:01ಕ್ಕೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 17ರ ಮಂಗಳವಾರ ಸಂಜೆ 05:37ಕ್ಕೆ ಕೊನೆಗೊಳ್ಳುತ್ತದೆ.

ಗಣೇಶ ವಿಸರ್ಜನೆ ಸಮಯ 2024 ಸೆಪ್ಟೆಂಬರ್ 17 ರಂದು ಮಂಗಳವಾರ ಇದೆ. ಈ ದಿನಗಳಲ್ಲಿ ವಿನಾಯಕನ ಪೂಜೆಗೆ ಅತ್ಯಂತ ಮಂಗಳಕರ ಅವಧಿ ಬೆಳಿಗ್ಗೆ 11:03 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು 01:34 ರವರೆಗೆ ಅಂದರೆ 2 ಗಂಟೆ 31 ನಿಮಿಷಗಳವರೆಗೆ ಇರುತ್ತದೆ.

ganesh chaturthi 2024 follow these things for placing ganesha idol at home

ಪೂಜೆಯ ದಿನಾಂಕ ಮತ್ತು ಸಮಯ

ವಿನಾಯಕ ಚತುರ್ಥಿ 2024: ಆರಂಭದ ದಿನಾಂಕ ಸೆಪ್ಟೆಂಬರ್ 7 (ಶನಿವಾರ)

ವಿನಾಯಕ ಚತುರ್ಥಿ 2024: ಪೂಜಾ ತಿಥಿ ಆರಂಭ: ಸೆಪ್ಟೆಂಬರ್ 6 (ಶುಕ್ರವಾರ) ಮಧ್ಯಾಹ್ನ 3:01 ಗಂಟೆಗೆ

ವಿನಾಯಕ ಚತುರ್ಥಿ 2024: ಮುಕ್ತಾಯ ದಿನಾಂಕ/ವಿಸರ್ಜನ: ಸೆಪ್ಟೆಂಬರ್ 17 (ಮಂಗಳವಾರ)

ವಿನಾಯಕ ಚತುರ್ಥಿಯ ಮಹತ್ವ:

ಹಿಂದೂಗಳಿಗೆ ವಿನಾಯಕ ಚತುರ್ಥಿ ಬಹಳ ಮುಖ್ಯ. ಗಣೇಶನನ್ನು ಆತನ ಬುದ್ಧಿವಂತಿಕೆ, ಶಕ್ತಿ ಮತ್ತು ಸ್ವಭಾವಕ್ಕಾಗಿ ಪೂಜಿಸಲಾಗುತ್ತದೆ. ವಿನಾಯಕ ಚತುರ್ಥಿಯಂದು ಮನಃಪೂರ್ವಕವಾಗಿ ಪ್ರಾರ್ಥಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ಜ್ಞಾನ ಹೆಚ್ಚಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

ganesh chaturthi 2024 follow these things for placing ganesha idol at home

ಮನೆಯಲ್ಲಿ ಗಣೇಶ ಮೂರ್ತಿ ಇಡುವಾಗ ಗಮನಿಸಬೇಕಾದ ವಿಷಯಗಳು..

1. ಮನೆಯ ಮುಖ್ಯ ದ್ವಾರದಲ್ಲಿ ಗಣಪತಿ ಮೂರ್ತಿ ಇಡುವುದು ಉತ್ತಮ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಡಬೇಕು. ಆತನನ್ನು ಪ್ರತಿನಿತ್ಯ ಪೂಜೆ ಮಾಡಬೇಕು. ಗಣೇಶ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತಿಗೆ ಕೊರತೆಯಾಗುವುದಿಲ್ಲ.

2. ವಾಸ್ತು ಶಾಸ್ತ್ರದಲ್ಲಿ ಸ್ಫಟಿಕವನ್ನು ಅತ್ಯುತ್ತಮ ಲೋಹವೆಂದು ಪರಿಗಣಿಸಲಾಗಿದೆ. ನಮ್ಮ ಮನೆಯಲ್ಲಿ ಸ್ಫಟಿಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನೊಂದಿಗೆ ಸ್ಫಟಿಕ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಅದೃಷ್ಟ ಹೆಚ್ಚಾಗುತ್ತದೆ.

3. ಇದಲ್ಲದೆ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇರಿಸಿದಾಗ, ಅದನ್ನು ಯಾವಾಗಲೂ ಕುಳಿತುಕೊಳ್ಳುವ ಭಂಗಿಯಲ್ಲಿ ಇಡಬೇಕು. ಗಣೇಶನ ಮೂರ್ತಿಯನ್ನು ಮನೆಯ ಬಾಗಿಲ ಹೊರಗೆ ಇಡಬಾರದು.

4. ನಿಂತಿರುವ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬಯಸಿದರೆ, ಅದನ್ನು ನಿಮ್ಮ ಕಚೇರಿಯಲ್ಲಿ ಇಡಬೇಕು. ಇದು ಉತ್ತಮ ಫಲ ನೀಡುತ್ತದೆ.

5. ಗಣೇಶನ ವಿಗ್ರಹ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಶುಭಕಾರ್ಯಕ್ಕಾಗಿ ಮನೆಯಲ್ಲಿ ಕಂಚಿನ ಬಣ್ಣದ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಅಥವಾ ಬಿಳಿ ಬಣ್ಣದ ವಿಗ್ರಹವನ್ನು ಹೊಂದುವುದು ಕೂಡ ಶುಭಕಾರ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಈ ಮೂರ್ತಿಯನ್ನು ಮನೆಯ ಬಾಗಿಲಲ್ಲಿ ಪ್ರತಿಷ್ಠಾಪಿಸಬಾರದು ಎಂಬುದು ನೆನಪಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+