Ganesha Chaturthi 2023: ಗಣೇಶ ಚತುರ್ಥಿಯಂದು ಈ 4 ವಸ್ತುಗಳಿಂದ ತಯಾರಿಸಿದ ಗಣೇಶನನ್ನು ಪೂಜಿಸಿದರೆ ತುಂಬಾ ಒಳ್ಳೆಯದು
ಬಹು ನಿರೀಕ್ಷಿತ ಗಣೇಶ ಚತುರ್ಥಿ ಬಂದೇ ಬಿಡ್ತು. 10 ದಿನಗಳ ಕಾಲ ಆಚರಿಸುವ ಗಣೇಶ ಚತುರ್ಥಿಯಂದು ಅನೇಕರು ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಗಣಪತಿಗೆ ಇಷ್ಟವಾದ ಕಡುಬು, ಮೋದಕ, ಲಡ್ಡು ಸೇರಿದಂತೆ ಹಲವು ಖಾದ್ಯಗಳನ್ನು ಮಾಡಿ ಗಣೇಶನನ್ನು ಮೆಚ್ಚಿಸಿ ಆತನ ಕೃಪೆಗೆ ಪಾತ್ರರಾಗುತ್ತಾರೆ.
ಈ ವರ್ಷ ವಿನಾಯಕ ಚತುರ್ಥಿ ಸೆಪ್ಟೆಂಬರ್ 18 ರಂದು ಬರುತ್ತದೆ. ಸೆಪ್ಟಂಬರ್ 28ರವರೆಗೆ ಆಚರಣೆ ನಡೆಯಲಿದೆ. ಹೆಚ್ಚಾಗಿ ಭಕ್ತರು ಗಣೇಶ ಚತುರ್ಥಿಯಂದು ಮಣ್ಣಿನಿಂದ ಮಾಡಿದ ಗಣೇಶನನ್ನು ಖರೀದಿಸಿ ಪೂಜಿಸುತ್ತಾರೆ.

ಆದರೆ ಮಣ್ಣಿನ ಗಣಪತಿಗಿಂತ ಕೆಲವು ಮಂಗಳಕರ ವಸ್ತುಗಳಿಂದ ತಯಾರಿಸಿದ ಗಣಪತಿಯನ್ನು ಪೂಜಿಸಿದರೆ ಗಣೇಶನ ಕೃಪೆಯಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಈಗ ಗಣೇಶ ಚತುರ್ಥಿಗೆ ಯಾವ ಗಣೇಶನನ್ನು ಕೊಂಡು ಪೂಜಿಸುವುದು ಒಳ್ಳೆಯದು ಎಂದು ತಿಳಿಯೋಣ.
ಮರದ ಗಣೇಶ
ನಿಮ್ಮ ಮನೆಯಲ್ಲಿ ಸುಂದರವಾದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ನೀವು ಬಯಸಿದರೆ ಮರದ ಗಣೇಶನ ಮೂರ್ತಿಯನ್ನು ಇಡಿ. ಮನೆಯಲ್ಲಿ ರಾಜ ಮರ, ಮಾವಿನ ಮರ ಅಥವಾ ಬೇವಿನ ಮರಗಳ ವಿಗ್ರಹಗಳನ್ನು ಸಹ ಇರಿಸಬಹುದು. ಏಕೆಂದರೆ ಈ ಎಲ್ಲಾ ಮರಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ಪವಿತ್ರ ಮರಗಳೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ಮರದ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಇರಿಸಿದಾಗ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ತುಂಬಿ ಸಂಪತ್ತು ವೃದ್ಧಿಯಾಗುತ್ತದೆ.
ಹಳದಿ ಗಣೇಶ
ಅರಿಶಿನ ಮಂಗಳಕರ ವಸ್ತುವಾಗಿದೆ. ಸಾಮಾನ್ಯವಾಗಿ ಪೂಜೆ ಮಾಡುವಾಗ ಗಣೇಶನಿಗೆ ಅರಿಶಿನ ಹಚ್ಚಿ ಪೂಜೆ ಮಾಡುತ್ತಾರೆ. ಅಂತಹ ಅರಿಶಿನವನ್ನು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಗಣೇಶನ ಚಿತ್ರವನ್ನು ಮಾಡಿ. ಅರಿಶಿನವನ್ನು ರುಬ್ಬಲು ಸಾಧ್ಯವಾಗದವರು ಅರಿಶಿನ ಪುಡಿಯನ್ನು ಸೇರಿಸಿ ರುಬ್ಬಬಹುದು. ವಾಸ್ತವವಾಗಿ ಅಂಗಡಿಗಳಲ್ಲಿ ಗಣೇಶನನ್ನು ಹಳದಿ ಉಂಡೆಗಳಲ್ಲಿ ಮಾರಲಾಗುತ್ತದೆ. ಅದನ್ನು ಖರೀದಿಸಿ ಪೂಜಿಸಬಹುದು.
ಹಸುವಿನ ಸಗಣಿಯಿಂದ ಮಾಡಿದ ಗಣೇಶನ ಮೂರ್ತಿ
ಹಸುವಿನ ಸಗಣಿಯಿಂದ ಮಾಡಿದ ಗಣೇಶನ ವಿಗ್ರಹವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದು ಉತ್ತಮ. ಏಕೆಂದರೆ ಲಕ್ಷ್ಮಿ ದೇವಿಯು ಹಸುವಿನ ಸಗಣಿಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗಬೇಕೆಂದರೆ ಮಣ್ಣಿನಿಂದ ಮಾಡಿದ ಗಣಪತಿಯ ಬದಲು ಗೋವಿನ ಸಗಣಿಯಿಂದ ಮಾಡಿದ ಗಣಪತಿಯನ್ನು ಪೂಜಿಸಿ.
ಲೋಹದ ಪ್ರತಿಮೆ
ಗಣೇಶ ಚತುರ್ಥಿಯಂದು ಮನೆಯಲ್ಲಿ ಗಣೇಶನ ಲೋಹದ ಮೂರ್ತಿಯನ್ನು ಪೂಜಿಸುವುದು ತುಂಬಾ ಮಂಗಳಕರ. ಹಾಗೆಯೇ ಸಾಧ್ಯವಾದರೆ ಬೆಳ್ಳಿ ಅಥವಾ ಹಿತ್ತಾಳೆಯಿಂದ ತಯಾರಿಸಿದ ಗಣೇಶನ ಮೂರ್ತಿಯನ್ನು ಖರೀದಿಸಿ ಪೂಜಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications