ಕ್ರಿಸ್‌ಮಸ್‌ನಲ್ಲಿ ಯಾವೆಲ್ಲಾ ಖಾದ್ಯಗಳನ್ನು ತಯಾರಿಸಲಾಗುತ್ತೆ? ಇಲ್ಲಿದೆ ಜನಪ್ರಿಯ ಭಕ್ಷ್ಯಗಳು
ಕ್ರಿಸ್‌ಮಸ್ ಪ್ರಪಂಚದಾದ್ಯಂತ ಹೆಚ್ಚು ಆನಂದಿಸುವ ಹಬ್ಬಗಳಲ್ಲಿ ಒಂದಾಗಿದೆ. ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸಲು ಕುಟುಂಬಗಳು ಒಗ್ಗೂಡುವ ಸಮಯ ಇದು. ಕ್ರಿಸ್‌ಮಸ್ ಟ್ರೀಯನ್ನು ಅಲಂಕರಿಸುವುದರಿಂದ ಹಿಡಿದು, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಊಟವನ್ನು ಹಂಚಿಕೊಳ್ಳುವವರೆಗೆ ಈ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ.
ಇತರ ಹಬ್ಬಗಳಂತೆ ಕ್ರಿಸ್ಮಸ್ ಹಬ್ಬವನ್ನು ರುಚಿಕರವಾದ ಭಕ್ಷ್ಯಗಳೊಂದಿಗೆ ಆಚರಿಸಲಾಗುತ್ತದೆ. ರೋಸ್ಟ್ ಟರ್ಕಿ, ಪ್ಲಮ್ ಕೇಕ್, ಎಗ್‌ನಾಗ್ ನಂತಹ ಭಕ್ಷ್ಯಗಳೊಂದಿಗೆ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ.

ದೇಶದಾದ್ಯಂತ 9 ಜನಪ್ರಿಯ ಕ್ರಿಸ್ಮಸ್ ಭಕ್ಷ್ಯಗಳು ಇಲ್ಲಿವೆ:
1. ಚಂದ್ರಕಲಾ/ ಸೂರ್ಯಕಲಾ ಸ್ವೀಟ್
ಕರ್ನಾಟಕದಲ್ಲಿ ಕ್ರಿಸ್ಮಸ್ ಸಮಯದಲ್ಲಿ ಮಾಡುವ ಸಿಹಿ ಖಾದ್ಯ ಇದಾಗಿದೆ. ಹೆಸರೇ ಹೇಳುವಂತೆ ಇದರ ಆಕಾರ ಸೂರ್ಯನಂತೆ ಗುಂಡಾಗಿರುತ್ತದೆ ಅಥವಾ ಚಂದ್ರನಂತೆ ಅರ್ಧಾಕಾರವಾಗಿರುತ್ತದೆ. ಇದನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ ಕೆಲ ಗಂಟೆಗಳ ಕಾಲ ನೆನಸಬೇಕು. ನಂತರ ಅದನ್ನು ಲೇಯರ್ ಆಗಿ ಲಟ್ಟಿಸಿ ಪ್ರತಿ ಲೇಯರ್ ಮಧ್ಯದಲ್ಲಿ ಬೆಣ್ಣೆ ಸವರಬೇಕು. ಹೀಗೆ ತುಂಬಾ ಲೇಯರ್ ಮಾಡಿ ಚಂದ್ರ ಅಥವಾ ಸೂರ್ಯನ ಆಕಾರಕ್ಕೆ ಮಡಚಿ ಕರಿದರೆ ಕುರುಕುಲಾಗಿ ಇದು ತಯಾರಾಗುತ್ತದೆ. ನಂತರ ಸಕ್ಕರೆ ಪಾಕದಲ್ಲಿ ಹಾಕಿ ನೆನಸಿ ಮೇಲೆ ಡ್ರೈ ಫ್ರೂಟ್ಸ್ ಹಾಕಿದರೆ ರುಚಿಯಾದ ಸೂರ್ಯಕಲಾ ಸ್ವೀಟ್ ರೆಡಿಯಾಗುತ್ತದೆ.

2. ಕುಲಕುಲಗಳು
ಕುಲಕುಲ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇದನ್ನು ಮನೆಯಲ್ಲಿ ಎರಡು ಬಗೆಯಲ್ಲಿ ಮಾಡಲಾಗುತ್ತದೆ. ಒಂದು ಸಿಹಿ ಕುಲಕುಲ ಹಾಗೂ ಇನ್ನೊಂದು ಖಾರದ ಕುಲಕುಲ. ಇದು ಮಾಡುವ ವಿಧಾನ ಕೂಡ ತುಂಬಾ ಸುಲಭ. ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಿಸುವಾಗ ಸಕ್ಕರೆ, ಬಾಳೆ ಹಣ್ಣು, ಮೊಟ್ಟೆ (ಬಳಸದೇ ಇರಬಹುದು) ಹಾಕಿ ಚೆನ್ನಾಗಿ ಕಲಸಿ ಬಿಸ್ಕೆಟ್ ಆಕಾರದಲ್ಲಿ ಕಟ್ ಮಾಡಿ ಎಣ್ಣೆಯಲ್ಲಿ ಕರಿದರೆ ರುಚಿ ರುಚಿಯಾದ ಕುಲಕುಲ ಸ್ವೀಟ್ ರೆಡಿ. ಇದರಲ್ಲಿ ಸಕ್ಕರೆ ಬದಲಿಗೆ ಖಾರ ಹಾಕಿ ಕೂಡ ಮಾಡಬಹುದು. ಇದು ಕೂಡ ತುಂಬಾ ರುಚಿಯಾಗಿರುತ್ತದೆ.

3. ರೋಸ್ ಕುಕೀಸ್
ಗೋವಾದ ಮತ್ತೊಂದು ಜನಪ್ರಿಯ ಸಾಂಪ್ರದಾಯಿಕ ಸಿಹಿ ಅಂದರೆ ಅದು ರೋಸ್ ಕುಕೀಸ್ (ಅಚಪ್ಪಂ). ಇದು ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ. ಇದನ್ನು ಅಕ್ಕಿ ಹಿಟ್ಟು, ಮೊಟ್ಟೆ, ಎಳ್ಳು ಮತ್ತು ಸಕ್ಕರೆಯ ಬ್ಯಾಟರ್‌ನಿಂದ ತಯಾರಿಸಲಾಗುತ್ತದೆ. ಈ ಭಾರತೀಯ ಶೈಲಿಯ ಕುಕೀಗಳನ್ನು ಹಬ್ಬದ ಋತುವಿನಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ.

4. ಪ್ಲಮ್ ಕೇಕ್
ಕ್ರಿಸ್ಮಸ್ ಸಂದರ್ಭದಲ್ಲಿ ಮನೆಯಲ್ಲೇ ಕೇಕ್ ತಯಾರಿಸುವುದು ವಿಶೇಷ. ಅದರಲ್ಲೂ ಹೆಚ್ಚಾಗಿ ಜನ ಪ್ಲಮ್ ಕೇಕ್‌ಗಳನ್ನು ಮನೆಯಲ್ಲಿ ಹಬ್ಬದ ಸಂದರ್ಭದಲ್ಲಿ ತಯಾರಿಸುತ್ತಾರೆ. ಇದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಕಡಿಮೆ ಅವಧಿಯಲ್ಲಿ ಕೇಕ್ ಅನ್ನು ಕುಕ್ಕರ್‌ನಲ್ಲೇ ತಯಾರಿಸಬಹುದು. ಹೀಗಾಗಿ ಕ್ರಿಸ್ಮಸ್ ಆಚರಣೆ ಮಾಡುವ ಪ್ರತಿಯೊಬ್ಬರು ಕೂಡ ಪ್ಲಮ್ ಕೇಕ್ ತಯಾರಿಸುವರು.
5. ಪಾಲಪ್ಪಮ್ (Palappam)
ಪಾಲಪ್ಪಮ್ ಅನ್ನು ಅಪ್ಪಮ್ ಎಂದೂ ಕರೆಯುತ್ತಾರೆ. ಇದು ಕೇರಳದ ಪಾಕಪದ್ಧತಿಯಾಗಿದ್ದು ಒಂದು ರೀತಿಯ ಪ್ಯಾನ್‌ಕೇಕ್ ಆಗಿದೆ. ಇದು ಕ್ರಿಸ್‌ಮಸ್ ಆಚರಣೆಗಳಿಗೆ ಮುಖ್ಯ ಉಪಹಾರ ವಸ್ತುವಾಗಿದೆ. ಇದನ್ನು ಹುದುಗಿಸಿದ ಅಕ್ಕಿ ಹಿಟ್ಟು ಮತ್ತು ತೆಂಗಿನ ಹಾಲಿನಿಂದ ತಯಾರಿಸಲಾಗುತ್ತದೆ.
6. ನಾನ್‌ವೆಜ್
ಸಾಮಾನ್ಯವಾಗಿ ಕ್ರಿಸ್ಮಸ್ ಸಮಯದಲ್ಲಿ ಮನೆಯಲ್ಲಿ ಮಾಂಸಾಹಾರ ಮಾಡುವುದು ಬಹುತೇಕ ಮನೆಗಳಲ್ಲಿ ಕಂಡು ಬರುತ್ತದೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಗ್ರೇವಿ, ಚಿಕನ್ ಪ್ರೈ, ಮಟನ್ ಕಬಾಬ್ ಇವೆಲ್ಲಾ ಹಬ್ಬದ ಸಮಯದಲ್ಲಿ ತುಂಬಾ ವಿಶೇಷವಾಗಿವೆ.
7. ಡಕ್ ಮೊಯ್ಲೀ
ಈ ಪಾಕವಿಧಾನ ಮಹಾರಾಷ್ಟ್ರದ ಆಂಗ್ಲೋ-ಇಂಡಿಯನ್ ಸಮುದಾಯದಿಂದ ಬಂದಿದೆ. ಈ ಖಾದ್ಯವನ್ನು ಬಾತುಕೋಳಿ ಮಾಂಸದಿಂದ ತಯಾರಿಸಲಾಗುತ್ತದೆ. ಇದನ್ನು ಬ್ರೆಡ್, ಅಕ್ಕಿ, ಫ್ಯೂಜಿಯಾಸ್ ಮತ್ತು ಸಲಾಡ್‌ಗಳೊಂದಿಗೆ ಬಡಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ, ಆಂಗ್ಲೋ-ಇಂಡಿಯನ್ ಸಮುದಾಯವು ಈ ಖಾದ್ಯವನ್ನು ಬಾಟಲ್ ಮಸಾಲಾದೊಂದಿಗೆ ತಯಾರಿಸುತ್ತದೆ ಮತ್ತು ಕ್ರಿಸ್ಮಸ್ ಆಚರಣೆಗಳು ಈ ಖಾದ್ಯವಿಲ್ಲದೆ ಪೂರ್ಣವಾಗುವುದಿಲ್ಲ.












Click it and Unblock the Notifications