Diwali 2024: ಮನೆಯಲ್ಲಿ ಈ ವಸ್ತುಗಳಿದ್ದರೆ ದೀಪಾವಳಿಗೂ ಮುನ್ನ ತೆಗೆದು ಹಾಕಿ.. ಯಾಕೆಂದರೆ
ಹಿಂದೂಗಳ ಪ್ರಮುಖ ಹಬ್ಬ ದೀಪಾವಳಿ. ದೀಪಗಳ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದೆ. ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಗೆ ಹಾಗೂ ಗಣೇಶನಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ಮತ್ತು ಗಣೇಶನ ಆಶೀರ್ವಾದದಿಂದ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ದೀಪಾವಳಿ ಹಬ್ಬಕ್ಕೂ ಮುನ್ನ ಅನೇಕ ಮಂದಿ ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ದೀಪಾವಳಿಯಂದು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಬೇಕೆಂದು ನೀವು ಬಯಸಿದರೆ, ದೀಪಾವಳಿಗೂ ಮೊದಲು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಮನೆಯಿಂದ ಹೊರಹಾಕಿ.

ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದೆ. ಜೊತೆಗೆ ದಾರಿದ್ರ್ಯ ನಿವಾರಣೆಯಾಗುತ್ತದೆ. ಅಲ್ಲದೆ ಅಪಘಾತ, ಕೆಟ್ಟ ದೃಷ್ಟಿಯಿಂದ ದೂರವಿರುತ್ತೀರಿ. ಹೀಗಾಗಿ ನೀವೇನಾದರೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಬೇಕೆಂದು ಬಯಸಿದರೆ, ನಿಮ್ಮ ಮನೆಯಲ್ಲಿ ಈ ಕೆಳಗಿನ ವಸ್ತುಗಳು ಇದ್ದರೆ, ದೀಪಾವಳಿಯ ಮೊದಲು ಅವುಗಳನ್ನು ಮನೆಯಿಂದ ಹೊರಹಾಕಿ ಬಿಡಿ.
ಓಡದ ಗಡಿಯಾರ
ಮನೆಯಲ್ಲಿ ಓಡದ ಗಡಿಯಾರವಿದ್ದರೆ ಅದನ್ನು ಮನೆಯಿಂದ ಹೊರಹಾಕಬೇಕು. ಏಕೆಂದರೆ ಓಡದ ಗಡಿಯಾರವು ಒಬ್ಬರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಒಬ್ಬರ ಪ್ರಗತಿಗೆ ಅಡ್ಡಿಯಾಗುತ್ತದೆ. ಆದ್ದರಿಂದ ಈ ದೀಪಾವಳಿಯಲ್ಲಿ ನಿಮ್ಮ ಜೀವನ ಪ್ರಗತಿಯಾಗುವುದನ್ನು ನೀವು ನೋಡಲು ಬಯಸಿದರೆ, ಓಡದ ಗಡಿಯಾರವನ್ನು ತೆಗದು ಹಾಕಿ.
ಒಡೆದ ಗಾಜು
ಒಡೆದ ಗಾಜುಗಳನ್ನು ಮನೆಯಲ್ಲಿ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಗಾಜನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಮನೆಯವರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಗಾಜು ಒಡೆದಿದ್ದರೆ ದೀಪಾವಳಿಗೂ ಮುನ್ನ ಎಸೆದು ಬಿಡಿ. ಇಲ್ಲದಿದ್ದರೆ ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುವುದಿಲ್ಲ.

ಮುರಿದ ಪ್ರತಿಮೆಗಳು
ವಾಸ್ತು ಶಾಸ್ತ್ರ ಪ್ರಕಾರ, ನಿಮ್ಮ ಮನೆಯಲ್ಲಿ ದೇವತೆಗಳ ವಿಗ್ರಹಗಳು ಅಥವಾ ಕಲಾತ್ಮಕ ವಿಗ್ರಹಗಳು ಮುರಿದಿದ್ದರೆ ತಡಮಾಡದೆ ತಕ್ಷಣ ಅವುಗಳನ್ನು ತೆಗೆದುಹಾಕಬೇಕು ಎಂದು ಹೇಳುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬೇಕಾದರೆ, ದೀಪಾವಳಿಯ ಮೊದಲು ನಿಮ್ಮ ಮನೆಯಿಂದ ಮುರಿದ ವಿಗ್ರಹಗಳನ್ನು ತೆಗೆದುಹಾಕಿ.
ಮುರಿದ ಪೀಠೋಪಕರಣಗಳು
ವಾಸ್ತು ಪ್ರಕಾರ ಮನೆಯಲ್ಲಿ ಒಡೆದ ಪೀಠೋಪಕರಣಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮುರಿದ ಮರದ ಪೀಠೋಪಕರಣಗಳು ಮನೆಯ ನಿವಾಸಿಗಳ ಪ್ರಗತಿಗೆ ಅಡ್ಡಿಯಾಗಬಹುದು. ಹಾಗಾಗಿ ಇಂತಹ ಒಡೆದ ಪೀಠೋಪಕರಣಗಳನ್ನು ದೀಪಾವಳಿಗೂ ಮುನ್ನ ಮನೆಯಿಂದ ಹೊರಹಾಕಿ.
ಹಾನಿಗೊಳಗಾದ ಕಬ್ಬಿಣದ ಉತ್ಪನ್ನಗಳು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಡೆದ ಕಬ್ಬಿಣದ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ರಾಹು ಮತ್ತು ಕೇತುಗಳ ದುಷ್ಪರಿಣಾಮಗಳು ಹೆಚ್ಚಾಗುತ್ತವೆ. ಅದರಲ್ಲೂ ಇಂತಹ ವಸ್ತುಗಳನ್ನು ಮನೆಯಲ್ಲಿಟ್ಟರೆ ಹಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ದೀಪಾವಳಿಯಿಂದ ನಿಮ್ಮ ಜೀವನವು ಸಮೃದ್ಧವಾಗಿರಬೇಕೆಂದು ನೀವು ಬಯಸಿದರೆ ದೀಪಾವಳಿಯ ಮೊದಲು ಮುರಿದ ಅಥವಾ ಹಾನಿಗೊಳಗಾದ ಕಬ್ಬಿಣದ ವಸ್ತುಗಳನ್ನು ಹೊರ ಹಾಕಿ.












Click it and Unblock the Notifications