Dhanteras Muhurta 2024: ಧನ್‌ತೇರಸ್ ದಿನ ಈ ಶುಭ ಸಮಯದಲ್ಲಿ ವಾಹನ ಖರೀದಿಸಿ... ಮುಂದಿನ ವರ್ಷ ದುಪ್ಪಟ್ಟು ಆಗುತ್ತೆ
ಇನ್ನೇನು ಕೆಲವೇ ದಿನಗಳಲ್ಲಿ ನಾವೆಲ್ಲಾ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ದೀಪಾವಳಿ ಐದು ದಿನಗಳ ಹಬ್ಬ. ಇದು ಅಕ್ಟೋಬರ್ 29ರಂದು ಆರಂಭವಾಗುತ್ತದೆ. ಈ ದಿನ ಧನ್‌ತೇರಸ್ ಅಥವಾ ಧನತ್ರಯೋದಶಿ ಇದ್ದು ಬಂಗಾರ, ಬೆಳೆಬಾಳುವ ವಸ್ತು, ಭೂಮಿ, ಮನೆ, ವಾಹನ ಹಾಗೂ ಇನ್ನಿತರ ಹೊಸ ವಸ್ತುಗಳ ಖರೀದಿಗೆ ಅತ್ಯಂತ ಮಂಗಳಕರ. ಆದರೆ ಈ ದಿನ ಯಾವುದೇ ವಸ್ತುವನ್ನು ಖರೀದಿಸಿದರೂ ಶುಭ ಮುಹೂರ್ತದಲ್ಲೇ ಖರೀದಿಸಬೇಕು. ಆಗ ಮಾತ್ರ ಈ ವಸ್ತುಗಳಿಂದ ದುಪ್ಪಟ್ಟು ಲಾಭ ಪಡೆಯಲು ಸಾಧ್ಯವಾಗುತ್ತದೆ. ಹಾಗಾದರೆ ಧನತ್ರಯೋದಶಿಯಂದು ವಾಹನ ಖರೀದಿ ಮಾಡಲು ಶುಭ ಸಮಯ ಯಾವುದು?
ಧನತೇರಸ್ ಅಥವಾ ಧನತ್ರಯೋದಶಿ ಶಾಪಿಂಗ್ ಮುಹೂರ್ತ 2024:
ಧನತೇರಸ್ ಅಥವಾ ಧನತ್ರಯೋದಶಿ ದೀಪಾವಳಿ ಹಬ್ಬದ ಆರಂಭವನ್ನು ಸೂಚಿಸುತ್ತದೆ. ಈ ದಿನ ಆರೋಗ್ಯ ಮತ್ತು ಸಂಪತ್ತು ಹೆಚ್ಚಿಸುವ ದೇವರಾದ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನತೇರಸ್ ವಾಹನವನ್ನು ಖರೀದಿಸುವುದು ಅತ್ಯಂತ ಮಂಗಳಕರವಾಗಿದೆ.

ಯಾಕೆಂದರೆ ಇದು ವರ್ಷವಿಡೀ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಹೀಗಾಗಿ ಹಿಂದೂಗಳು ಧನತೇರಸ್ ಅನ್ನು ಹೊಸ ವಾಹನವನ್ನು ಖರೀದಿಸಲು ಸೂಕ್ತ ದಿನವೆಂದು ಪರಿಗಣಿಸಿ ಕಾರು, ಬೈಕು ಅಥವಾ ಸ್ಕೂಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸುತ್ತಾರೆ. ಅಲ್ಲದೆ ಇದು ಜೀವನದಲ್ಲಿ ಸುರಕ್ಷಿತ ಮತ್ತು ಯಶಸ್ವಿ ಪ್ರಯಾಣವನ್ನು ಒದಗಿಸಲಿದೆ.
ಈ ವರ್ಷ ಧನತೇರಸ್ ಅನ್ನು 29 ಅಕ್ಟೋಬರ್ 2024 ರಂದು ಆಚರಿಸಲಾಗುತ್ತದೆ. ಹಾಗಾದರೆ ಧನತೇರಸ್ ದಿನದಂದು ವಾಹನ ಖರೀದಿಸಲು ಯಾವ ಶುಭ ಮುಹೂರ್ತವಿದೆ ಎಂದು ತಿಳಿಯೋಣ.
ಧನತೇರಸ್ರಂದು ವಾಹನ ಖರೀದಿಸಲು ಶುಭ ಸಮಯ
ಧನತೇರಸ್ ದಿನ ನೀವು ಯಾವಾಗ ಬೇಕಾದರೂ ವಾಹನವನ್ನು ಖರೀದಿಸಬಹುದು. ಆದರೆ ಶುಭ ಸಮಯ ಅಕ್ಟೋಬರ್ 29 ರಂದು ಬೆಳಿಗ್ಗೆ 10:31 ರಿಂದ ಅಕ್ಟೋಬರ್ 30 ರಂದು ಮಧ್ಯಾಹ್ನ 1:15 ರ ನಡುವೆ ಇರುತ್ತದೆ. ಈ ಪವಿತ್ರ ಸಮಯವನ್ನು ವಾಹನಗಳನ್ನು ಖರೀದಿಸಲು ಸೂಕ್ತವೆನ್ನಲಾಗುತ್ತದೆ.

29 ಅಕ್ಟೋಬರ್ 2024 ರಂದು ಶುಭ ಸಮಯ
ಅತ್ಯುತ್ತಮ ಸಮಯ- ಸಂಜೆ 4:13 ರಿಂದ ಸಂಜೆ 5:36ರವರೆಗೆ
ಉತ್ತಮ ಸಮಯ-ಸಂಜೆ 5:36 ರಿಂದ ಸಂಜೆ 7:14
ಸಾಮಾನ್ಯ ಸಮಯ- ಸಂಜೆ 7:14 ರಿಂದ ರಾತ್ರಿ 8:51
ಧನತೇರಸ್ ನಲ್ಲಿ ವಾಹನ ಖರೀದಿಸುವ ಪ್ರಯೋಜನಗಳು
ಧನತ್ರಯೋದಶಿ ಎಂದೂ ಕರೆಯಲ್ಪಡುವ ಧಂತೇರಸ್‌ನಲ್ಲಿ ವಾಹನವನ್ನು ಖರೀದಿಸುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಧನ್ತೇರಸ್‌ನಲ್ಲಿ ವಾಹನವನ್ನು ಖರೀದಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಸುರಕ್ಷಿತ ಮತ್ತು ಯಶಸ್ವಿ ಪ್ರಯಾಣವನ್ನು ಒದಗಿಸಲಿದೆ. ಇದಲ್ಲದೆ ಒಬ್ಬರ ಸ್ಥಾನಮಾನ, ಸೌಕರ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.
ಹೀಗೆ ಧನತ್ರಯೋದಶಿಯಂದು ವಾಹನ ಖರೀದಿಸುವ ಪ್ರಯೋಜನಗಳು ಸಾಕಷ್ಟಿವೆ. ಈ ದಿನ ಖರೀದಿ ಮಾಡುವ ವಸ್ತುಗಳು ಸಮೃದ್ಧಿ, ಅದೃಷ್ಟ ಮತ್ತು ದೈವಿಕ ಆಶೀರ್ವಾದಗಳನ್ನು ಪಡೆಯುತ್ತವೆ. ಇವು ವ್ಯವಹಾರ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಬೆಳವಣಿಗೆಯನ್ನು ತರುತ್ತದೆ. ಹೀಗಾಗಿ ಈ ದಿನದಂದು ಖರೀದಿಸಿದ ವಾಹನಗಳು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿವೆ. ಇದರಿಂದಾಗಿ ಜನ ಧನತ್ರಯೋದಶಿಯ ಶುಭ ಮುಹೂರ್ತದಲ್ಲಿ ವಾಹನಗಳನ್ನು ಖರೀದಿ ಮಾಡುತ್ತಾರೆ.












Click it and Unblock the Notifications