Dhanteras 2024 Tips: ಧನ್ತೇರಸ್ ದಿನದಂದು ಈ ವಿಶೇಷ ವಸ್ತುಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸಿ, ಸಮೃದ್ಧಿ ಪಕ್ಕಾ...

ಧನ್ತೇರಸ್ ಅಥವಾ ಧನತೇರಸ್‌ ಹಬ್ಬ ಹಿಂದೂ ಧರ್ಮದಲ್ಲಿ ಬಹಳ ವಿಶೇಷವಾಗಿದೆ. ಈ ದಿನ ಭಗವಾನ್ ಕುಬೇರ ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನ ವಾಸ್ತು ಪ್ರಕಾರ ಮನೆಯನ್ನು ಅಲಂಕರಿಸಿ ನಿಯಮಾವಳಿಗಳನ್ನು ಪಾಲಿಸಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗಲಿದೆ ಎಂದು ನಂಬಲಾಗುತ್ತದೆ.

ಧನ್ತೇರಸ್‌ನಲ್ಲಿ ಮನೆಯ ಮುಖ್ಯ ದ್ವಾರದಿಂದ ದೇವಾಲಯದವರೆಗೆ ಅಲಂಕರಿಸುವಾಗ ವಾಸ್ತು ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಈ ದಿನ ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಯನ್ನು ಈ ಬಣ್ಣಗಳಿಂದ ಅಲಂಕರಿಸುವುದು ಒಳ್ಳೆಯದು.

Dhanteras 2024 Place these special items at the main entrance on Dhanteras day

ಧನ್ತೇರಸ್‌ನಲ್ಲಿ ಸರಿಯಾದ ವಸ್ತುಗಳನ್ನು ಖರೀದಿಸುವುದು ಮತ್ತು ಮಂಗಳಕರ ಸಮಯದಲ್ಲಿ ಪೂಜಿಸುವುದು ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಧಂತೇರಸ್‌ನಲ್ಲಿ ನಿಮ್ಮ ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕದಂತಹ ಮಂಗಳಕರ ಚಿಹ್ನೆಗಳನ್ನು ಮಾಡಿ. ಮನೆ ಬಾಗಿಲಿಗೆ ಕೆಲವು ಅಲಂಕಾರಿಕ ಸಸ್ಯಗಳನ್ನು ನೆಟ್ಟರೆ, ಅದು ನಿಮ್ಮ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.

ಧನಾತ್ಮಕ ಶಕ್ತಿಯು ಪ್ರವೇಶಿಸಲು ಮುಖ್ಯ ದ್ವಾರದಲ್ಲಿ ಕೆಲ ವಸ್ತುಗಳನ್ನು ಇಡದೇ ಇರುವುದು ತುಂಬಾ ಮುಖ್ಯ. ನಿಮ್ಮ ಮುಖ್ಯ ಬಾಗಿಲ ಮುಂದೆ ಬೂಟುಗಳು ಅಥವಾ ಚಪ್ಪಲಿಗಳನ್ನು ಇರಿಸಿದರೆ, ತಕ್ಷಣವೇ ಅವುಗಳನ್ನು ತೆಗೆದುಹಾಕಿ. ಬದಲಾಗಿ ನೀರಿನಿಂದ ತುಂಬಿದ ಗಾಜಿನ ಬೌಲ್ ಅನ್ನು ಇರಿಸಿ ಮತ್ತು ತಾಜಾ ಹೂವುಗಳನ್ನು ಅದರಲ್ಲಿ ಹಾಕಿರಿ. ಇದು ಮನೆಯೊಳಗೆ ಧನಾತ್ಮಕ ಶಕ್ತಿಯ ಹರಿವನ್ನು ನಿರ್ವಹಿಸುತ್ತದೆ.

ಧನ್ತೇರಸ್ ಸಮಯದಲ್ಲಿ ಮನೆಯನ್ನು ವಾಸ್ತು ಪ್ರಕಾರ ಅಲಂಕರಿಸುವುದು ಮತ್ತು ಸರಿಯಾದ ವಸ್ತುಗಳನ್ನು ಖರೀದಿಸುವುದು ಮುಖ್ಯ. ಇದು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ. ಈ ದಿನದ ಪೂಜೆ ಮತ್ತು ಅಲಂಕಾರ ವಾಸ್ತು ಪ್ರಕಾರವಾಗಿದ್ದರೆ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.

ದೀಪಾವಳಿ ದಿನಾಂಕ ಮತ್ತು ಸಮಯ:-

ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31, 2024 ರಂದು ಆಚರಿಸಲಾಗುವುದು.

ಅಮಾವಾಸ್ಯೆ ತಿಥಿ ಅಕ್ಟೋಬರ್ 31, 2024 ರಂದು ಮಧ್ಯಾಹ್ನ 03:52 ಕ್ಕೆ ಪ್ರಾರಂಭವಾಗುತ್ತದೆ

ಅಮವಾಸ್ಯೆಯ ತಿಥಿಯು ನವೆಂಬರ್ 01, 2024 ರಂದು ಸಂಜೆ 06:16ಕ್ಕೆ ಕೊನೆಗೊಳ್ಳುತ್ತದೆ

ಪ್ರದೋಷ ಕಾಲ ಮಧ್ಯಾಹ್ನ 05:12 ರಿಂದ ಸಂಜೆ 07:43

ಲಕ್ಷ್ಮಿ ಪೂಜೆ ಮುಹೂರ್ತ ಸಂಜೆ 05:12 ರಿಂದ ಸಂಜೆ 06:16

ವೃಷಭ ಮುಹೂರ್ತದಿಂದ ಸಂಜೆ 06:00 ರಿಂದ ಸಂಜೆ 07:59

ಐದು ದಿನಗಳ ಹಬ್ಬ ದೀಪಾವಳಿ:-

ದೀಪಾವಳಿ ಐದು ದಿನಗಳ ಹಬ್ಬವಾಗಿದೆ. ಹಾಗಾದರೆ ಐದು ದಿನ ಹಬ್ಬದ ಮಾಹಿತಿ ಹಾಗೂ ದಿನಾಂಕ, ಶುಭ ಸಮಯದ ಬಗ್ಗೆ ತಿಳಿಯೋಣ..

*ಅಕ್ಟೋಬರ್ 29ರಂದು ಸಂಜೆ 06:31 ರಿಂದ ರಾತ್ರಿ 08:13ರವರೆಗೆ ತ್ರಯೋದಶಿ ತಿಥಿ ಇದ್ದು ಧನ್ತೇರಸ್ ಆಚರಿಸಲಾಗುತ್ತದೆ. ಇದೇ ದಿನ ಸಂಜೆ 05:14 ರಿಂದ 06:29 ರವರೆಗೆ ಯಮ ದೀಪ ಹಚ್ಚಲಾಗುತ್ತದೆ.

*ಅಕ್ಟೋಬರ್ 31ರಂದು ರಾತ್ರಿ 11:39ರಿಂದ ಬೆಳಗ್ಗೆ 12:31ರವರೆಗೆ ಚತುರ್ದಶಿ ತಿಥಿ ಇದ್ದು ಚೋಟಿ ದೀಪಾವಳಿ ಆಚರಿಸಲಾಗುತ್ತದೆ.

*ಅಕ್ಟೋಬರ್ 31ರಂದು ಸಂಜೆ05:12ರಿಂದ ಸಂಜೆ 06:16 ರವರೆಗೆ ಅಮವಾಸ್ಯೆ ತಿಥಿ ಇದ್ದು ಲಕ್ಷ್ಮಿ ಪೂಜೆ ನಡೆಯಲಿದೆ.

*ನವೆಂಬರ್ 2ರಂದು ಸಂಜೆ 06:34 ರಿಂದ ಬೆಳಗ್ಗೆ08:46ರವರೆಗೆ ಪ್ರತಿಪದ ತಿಥಿ ಇದ್ದು ಗೋವರ್ಧನ ಪೂಜೆ ಮಾಡಲಾಗುತ್ತದೆ.

*ನವೆಂಬರ್ 3ರಂದು ಮಧ್ಯಾಹ್ನ 12:38 ರಿಂದ ಮಧ್ಯಾಹ್ನ 02:55 ರವರೆಗೆ ದ್ವಿತೀಯ ತಿಥಿ ಇದ್ದು ಭಾಯಿ ದೂಜ್ ಆಚರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+