ಮೈಸೂರು ಕೊನೆ ಮಹಾರಾಜರಿಗೆ ಗೌರವಧನ ದುಪ್ಪಟ್ಟು

ಮೈಸೂರು,ಸೆ 19: ಸುವಿಖ್ಯಾತ ಮೈಸೂರು ದಸರಾ ಸಡಗರಕ್ಕೆ ಜಿಲ್ಲಾ ಆಡಳಿತ ಸರ್ವಸಿದ್ಧತೆ ನಡೆಸಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ರಾಜವಂಶಸ್ಥರಿಗೆ ರಾಜ್ಯ ಸರಕಾರ ಕೊಡಮಾಡುವ ಗೌರವಧನವನ್ನು ಈ ಬಾರಿ ದುಪ್ಪಟ್ಟು ಮಾಡಲಾಗಿದೆ.

ಮೈಸೂರಿನವರೇ ಆದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರವು ಮೈಸೂರಿನ ಕೊನೆಯ ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (60) ಅವರಿಗೆ ಸಂಪ್ರದಾಯಂತೆ ಫಲತಾಂಬೂಲದ ಜತೆಗೆ ಗೌರವ ಸೂಚಕವಾಗಿ 20 ಲಕ್ಷ ರೂಪಾಯಿಯನ್ನು ನೀಡಲಿದೆ.

4 ಬಾರಿ ಸಂಸದರಾಗಿದ್ದವರು

4 ಬಾರಿ ಸಂಸದರಾಗಿದ್ದವರು

1970ರ ಸಂದರ್ಭದಲ್ಲಿ ರಾಜರ ಆಡಳಿತ ಅಂತ್ಯಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ಮೊದಲ 3 ವರ್ಷ ದಸರಾ ಮಹೋತ್ಸವದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪಾಲ್ಗೊಂಡಿರಲಿಲ್ಲ. ಮುಂದೆ, ಅವರು 4 ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ.

1950ರಲ್ಲಿ 50 ಸಾವಿರ ರೂ ಗೌರವಧನ

1950ರಲ್ಲಿ 50 ಸಾವಿರ ರೂ ಗೌರವಧನ

ಆ ನಂತರದ ದಸರಾ ಮಹೋತ್ಸವಗಳಲ್ಲಿ ರಾಜಕುಟುಂಬದವರನ್ನು ಅಧಿಕೃತವಾಗಿ ಆಹ್ವಾನಿಸಿ, ಗೌರವಧನ ನೀಡುವ ಪದ್ಧತಿ ಜಾರಿಗೆ ಬಂದಿತು. 1950ರ ಸಂದರ್ಭದಲ್ಲಿ ರಾಜವಂಶಸ್ಥರಿಗೆ 50 ಸಾವಿರ ರೂ ನಗದನ್ನು ಗೌರವಾರ್ಪಣೆ ಮಾಡಲಾಗುತ್ತಿತ್ತು.

ಕಳೆದ ವರ್ಷ 10 ಲಕ್ಷ ರೂ ನೀಡಿಕೆ

ಕಳೆದ ವರ್ಷ 10 ಲಕ್ಷ ರೂ ನೀಡಿಕೆ

2003-04ರಲ್ಲಿ ಗೌರವಧನ 2 ಲಕ್ಷ ರೂ ಗೆ ಏರಿಕೆಯಾಯ್ತು. ಮುಂದೆ 5 ಲಕ್ಷ ರೂ. ಗೂ ಏರಿತು. ಕಳೆದ ವರ್ಷ 10 ಲಕ್ಷ ರೂ ನೀಡಿ ಗೌರವಿಸಲಾಗಿತ್ತು. ಆದರೆ ಈ ಬಾರಿ ದುಪ್ಪಟ್ಟುಗೊಳಿಸಿ, 20 ಲಕ್ಷ ರೂ ಗೌರವಧನ ನೀಡಲು ನಿರ್ಧರಿಸಲಾಗಿದೆ ಎಂದು ದಸರಾ ಮಹೋತ್ಸವ ಉಸ್ತುವಾರಿ ಹೊತ್ತಿರುವ ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.

ಗಣ್ಯಾತಿಗಣ್ಯರಿಗೆ ಅಧಿಕೃತ ಆಹ್ವಾನ:

ಗಣ್ಯಾತಿಗಣ್ಯರಿಗೆ ಅಧಿಕೃತ ಆಹ್ವಾನ:

ನಾಡ ಹಬ್ಬ ದಸರೆಯಲ್ಲಿ ಪಾಲ್ಗೊಳ್ಳುವಂತೆ ನಾಡಿನ ಗಣ್ಯಾತಿಗಣ್ಯರಿಗೂ ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಲಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ಸಚಿವರು ಮತ್ತು ರಾಜವಂಶಸ್ಥರನ್ನು ಆಹ್ವಾನಿಸಲು ಜಿಲ್ಲಾಡಳಿತ ಈ ವಾರಾಂತ್ಯ ಬೆಂಗಳೂರಿಗೆ ಬರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ನೇತೃತ್ವದ ಉನ್ನತಾಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+