ಮೈಸೂರು ದಸರಾ : ಚಿನ್ನದ ಅಂಬಾರಿಗೆ ವಿಮೆ ಎಷ್ಟು ಗೊತ್ತೆ?

Written By: Ramesh
Subscribe to Oneindia Kannada

ಮೈಸೂರು, ಅಕ್ಟೋಬರ್. 08 : ಮೈಸೂರು ರಾಜಮನೆತನಕ್ಕೆ ಸೇರಿದ ಚಿನ್ನದ ಅಂಬಾರಿಗೆ ಈ ಬಾರಿ 27 ಕೋಟಿ ರುಗಳ ವಿಮೆ ಮಾಡಿಸಲಾಗಿದೆ. ಯುನೈಟೆಡ್ ವಿಮಾ ಸಂಸ್ಥೆ 7 ದಿನಗಳ ವರೆಗೆ ಅಂಬಾರಿಗೆ ಮಿಮೆ ನೀಡಿದೆ.

ದಸರಾ ಜಂಬೂ ಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ 750 ಕೆಜಿ ತೂಕದ ಚಿನ್ನದ ಅಂಬಾರಿಗೆ ಅಕ್ಟೋಬರ್ 10 ರಿಂದ ಅಕ್ಟೋಬರ್ 16 ರವರೆಗೆ 27 ಕೋಟಿ ರುಗಳನ್ನು ಯುನೈಟೆಡ್ ವಿಮಾ ಸಂಸ್ಥೆ ಮಿಮೆ ನೀಡಿದ್ದು. ವಿಮೆಯನ್ನು ಪ್ರಮೋದಾದೇವಿ ಒಡೆಯರ್ ಅವರ ಹೆಸರಿಗೆ ಮಾಡಿಸಲಾಗಿದೆ. [ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]

Golden Howdah

ವಿಮೆ ಮಾಡಿಸಲು ರಾಜವಂಶಸ್ಥರೇ ಹಣವನ್ನು ಪಾವತಿಸಿದ್ದು, ಆ ವಿಮೆ ಮಾಡಿಸಲು ರಾಜವಂಶಸ್ಥರು ಪಾವತಿಸಿದ ಮೊತ್ತ ಬಹಿರಂವಾಗಿಸದೆ ಗೌಪ್ಯವಾಗಿ ಇಡಲಾಗಿದೆ. ಈ ಬಾರಿಯ ನಾಡಹಬ್ಬ ದಸರೆಯ ಆಕರ್ಷಕ ಜಂಬೂಸವಾರಿಯಲ್ಲಿ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The golden howdah will be on display at Mysuru palace from October 10 to 16.— FILE PHOTO: M.A. SRIRAM The cynosure of all eyes at the Jamboo Savari — the golden howdah — has been insured for a whopping Rs. 27 crore.
Please Wait while comments are loading...