ಮೈಸೂರು ದಸರಾಗೆ ಏಳೂವರೆ ಸಾವಿರ ಕೆಂಪು ಬಸ್

ಸುಮಾರು 7,500 ಬಸ್ ಗಳನ್ನು ದಸರಾ ವಿಶೇಷವಾಗಿ ರಸ್ತೆಗೆ ಬಿಡಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ. ರಾಜ್ಯದ ವಿವಿಧೆಡೆಗಳಿಂದ ಹಾಗೂ ನೆರೆ ರಾಜ್ಯಗಳಿಂದಲೂ ದಸರಾ ವಿಶೇಷ ಬಸ್ ಗಳು ಹೊರಡಲಿದೆ.
KSIC ಪ್ರಾಯೋಜಕತ್ವ: ಶತಕದ ಸಂಭ್ರಮದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ, ಮೈಸೂರು ದಸರಾದ ಪ್ರಮುಖ ಪ್ರಾಯೋಜಕನಾಗಿ ಪಾಲ್ಗೊಳ್ಳಲಿದೆ. ಈ ಬಗ್ಗೆ KSIC ಅಧ್ಯಕ್ಷ ಸಚಿವ ಬಚ್ಚೇಗೌಡರೊಡನೆ ದಸರಾ ಸ್ವಾಗತ ಸಮಿತಿ ಮಾತುಕತೆ ನಡೆಸಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತ್ಯೇಕ ಚಲನಚಿತ್ರೋತ್ಸವ ಆಯೋಜನೆ ರೂಪುರೇಷೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ರಾಮದಾಸ್ ಹೇಳಿದರು.












Click it and Unblock the Notifications