ಮೈಸೂರು ದಸರಾಗೆ ಕಂಡುಕೇಳರಿಯದ ಭದ್ರತೆ

ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರಾದ್ಯಂತ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಮುಖ್ಯ ಮೆರವಣಿಗೆ ಸಾಗುವ ಬನ್ನಿಮಂಟದವರೆಗೂ ಸರ್ಪಗಾವಲು ಹಾಕಲಾಗಿದೆ. ಭಯೋತ್ಪಾದರ ದಾಳಿ ಭೀತಿಯಿಂದಾಗಿ ರೈಲ್ವೆ ನಿಲ್ದಾಣ, ಏರ್ ಪೋರ್ಟ್ ಮತ್ತು ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಅಗರ್ ವಾಲ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎ ರಾಮದಾಸ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಮೈಸೂರಿನಲ್ಲಿ ಇದುವರೆಗೆ ಜಂಬೂ ಮೆರವಣಿಗೆ ಮುಕ್ತಾಯದ ಬಳಿಕ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಮಾತ್ರ ಎರಡು ದಿನ ಆಯೋಜಿಸಲಾಗುತ್ತಿತ್ತು. ಈ ಬಾರಿ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯೂ ಎರಡು ಸಾಗುವುದರಿಂದ ವೈಭವದ ಮೆರವಣಿಗೆಯ ತಾಲೀಮನ್ನು ಪ್ರವಾಸಿಗರು ಹಿಂದಿನ ದಿನವೂ ವೀಕ್ಷಿಸುವ ಅವಕಾಶ ದೊರೆಯುತ್ತದೆ ಎಂದು ಹೇಳಿದ್ದಾರೆ.
ಅ.16ರಂದು ಶನಿವಾರ ಮೆರವಣಿಗೆಯನ್ನು ಅರಮನೆಯಿಂದ ಚಾಮರಾಜೇಂದ್ರ ವೃತ್ತದವರೆಗೆ ಮಾತ್ರ ಸಾಗಿ, ವೃತ್ತವನ್ನು ಸುತ್ತು ಹಾಕಿ ವಾಪಸ್ ಅರಮನೆಗೆ ಪ್ರವೇಶಿಸಲಾಗುತ್ತಿತ್ತು. ಆದರೆ, ರಾಮದಾಸ್ ಅವರು ಇದರ ಸ್ವರೂಪವನ್ನು ಬದಲಾಯಿಸಿದ್ದಾರೆ. ಅ.17 ರಂದು ವಿಜಯದಶಮಿ ದಿನ ಜಂಬೂ ಸವಾರಿ ಮೆರವಣಿಗೆ ಸಾಗುತ್ತದೆ. ಅದರ ಹಿಂದಿನ ದಿನ ಅ. 16 ರಂದು ಮಧ್ಯಾಹ್ನ 3 ಗಂಟೆಗೆ ಜಂಬೂಸವಾರಿ ತಾಲೀಮು ಆರಂಭವಾಗುತ್ತದೆ. ಜಂಬೂ ಸವಾರಿಯ ಜೊತೆಗೆ ವಿವಿಧ ಕಲಾತಂಡಗಳು ಪೊಲೀಸ್ ವಾದ್ಯ ಮೇಳ ತಂಡಗಳು, ದಸರೆಯ ಆಯ್ದ ಪ್ರದರ್ಶನದ ಮೆರವಣಿಗೆ ತೆರಳುತ್ತಿತ್ತು. ಹೀಗಾಗಿ ಇದು ಕೂಡಾ ಜಂಬೂ ಸವಾರಿ ಮೆರವಣಿಗೆಯಾಗಿ ಬದಲಾಗಿದೆ.












Click it and Unblock the Notifications