ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀ ಮಲೆ ಮಹದೇಶ್ವರಸ್ವಾಮಿ ಜಾತ್ರಾ ವಿವರ

By Mahesh
|
Google Oneindia Kannada News

MM hills Festivals list
ಕೊಳ್ಳೇಗಾಲ, ಸೆ. 22: ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಮಹದೇಶ್ವರಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ವಿವಿಧ ವಾರ್ಷಿಕ ಜಾತ್ರೆಗಳ ವಿವರ. ದೇವಾಲಯದಲ್ಲಿ 2010-11ನೇ ಸಾಲಿನಲ್ಲಿ ಜರುಗುವ ಜಾತ್ರೆಗಳ ವಿವರ ಇಂತಿದೆ:

ಮಹಾಲಯ ಜಾತ್ರೆಯು ಅಕ್ಟೋಬರ್ 5 ರಿಂದ 7 ರವರೆಗೆ, ದಸರಾ ಜಾತ್ರೆಯು ಅಕ್ಟೋಬರ್ 15 ರಿಂದ 17 ರವರೆಗೆ ಹಾಗೂ ದೀಪಾವಳಿ ಜಾತ್ರೆಯು ನವೆಂಬರ್ 3 ರಿಂದ7 ರವರೆಗೆ ನಡೆಯಲಿದೆ.

ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಬರುವ ಕಾರ್ತೀಕ ಸೋಮವಾರ ಜಾತ್ರೆಗಳು ಇಂತಿವೆ : 1 ನೇ ಕಾರ್ತಿಕ ಸೋಮವಾರ ನವೆಂಬರ್ 8 ರಿಂದ 9 ರವರೆಗೆ, 2ನೇ ಕಾರ್ತೀಕ ಸೋಮವಾರ ನವೆಂಬರ್ 14 ರಿಂದ 16 ರವರೆಗೆ, 3ನೇ ಕಾರ್ತೀಕ ಸೋಮವಾರ - ನವೆಂಬರ್ 21 ರಿಂದ 23 ರವರೆಗೆ, 4ನೇ ಕಾರ್ತೀಕ ಸೋಮವಾರ ನವೆಂಬರ್ 28 ರಿಂದ 30 ರವರೆಗೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಮಹಾಲಯ ಜಾತ್ರೆ: ಮಹಾಲಯ ಜಾತ್ರೆ ಸಂದರ್ಭದಲ್ಲಿ ಅಕ್ಟೋಬರ್ 6 ರಂದು ಚತುರ್ದಶಿ, ಶ್ರೀಸ್ವಾಮಿಯವರಿಗೆ ಎಣ್ಣೆಮಜ್ಜನ ಸೇವೆ, ಉತ್ಸವಾದಿಗಳು, ಅಕ್ಟೋಬರ್ 7 ರಂದು ಮಹಾಲಯ ಅಮಾವಾಸ್ಯೆ, ಉತ್ಸವಾದಿಗಳು ಹಾಗೂ ಅಕ್ಟೋಬರ್ 8 ರಂದು ನವರಾತ್ರಿ ಆರಂಭ, ವಿಶೇಷ ಸೇವೆ ಉಯ್ಯಾಲೋತ್ಸವ ಪ್ರಾರಂಭ.

ದಸರಾ ಪೂಜೆ: ಅಕ್ಟೋಬರ್ 16 ರಂದು ಮಹಾನವಮಿ, ಆಯುಧ ಪೂಜೆ, ಅಕ್ಟೋಬರ್ 17 ರಂದು ವಿಜಯ ದಶಮಿ, ಉತ್ಸವಗಳು, ಕುದುರೆ ವಾಹನೋತ್ಸವ, ರಾತ್ರಿ ನೈವೇದ್ಯದ ನಂತರ ತೆಪ್ಪೋತ್ಸವ.

ದೀಪಾವಳಿ ಜಾತ್ರೆ: ನವೆಂಬರ್ 4 ರಂದು ಶ್ರೀಸ್ವಾಮಿಯವರಿಗೆ ಎಣ್ಣೆಮಜ್ಜನ ಸೇವೆ. ಉತ್ಸವಾದಿಗಳು,ನವೆಂಬರ್ 5 ರಂದು ನರಕಚತುರ್ದಶಿ, ವಿಶೇಷ ಉತ್ಸವಾದಿಗಳು, ನವೆಂಬರ್ 6 ರಂದು ಅಮಾವಾಸ್ಯೆ, ಹಾಲರುವೆ ಉತ್ಸವ, ನವೆಂಬರ್ 7 ರಂದು ದೀಪಾವಳಿ, ಮಹಾರಥೋತ್ಸವ ಬೆಳಿಗ್ಗೆ 10.30 ರಿಂದ 11.15 ಗಂಟೆಯವರೆಗೆ ಹಾಗೂ ರಾತ್ರಿ ನೈವೇದ್ಯದ ನಂತರ ತೆಪ್ಪೋತ್ಸವ.

ಕಾರ್ತೀಕ ಸೋವಾರಗಳು: ನವೆಂಬರ್ 8 ರಂದು ಮೊದಲನೇ ಕಾರ್ತೀಕ ಸೋಮವಾರ. ನವೆಂಬರ್ 15 ರಂದು ಎರಡನೇ ಕಾರ್ತೀಕ ಸೋಮವಾರ, ನವೆಂಬರ್ 22 ರಂದು ಮೂರನೇ ಕಾರ್ತೀಕ ಸೋಮವಾರ ಹಾಗೂ ನವೆಂಬರ್ 29 ರಂದು ನಾಲ್ಕನೇ ಕಾರ್ತೀಕ ಸೋಮವಾರ. ರಾತ್ರಿ 9 ರಿಂದ 10.30 ಗಂಟೆಯವರೆಗೆ ಶ್ರೀ ಮಹದೇಶ್ವ ಜ್ಯೋತಿ ದರ್ಶನ ಹಾಗೂ ರಾತ್ರ ನೈವೇದ್ಯದ ನಂತರ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X