466642mysore dasaraನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ.../literature/articles/2009/0408-doll-history-culture-and-lifestyle.htmlಬಾಲ್ಯಾವಸ್ಥೆಯಲಿ ನಾನೂ ನಿಮ್ಹಾಗೆ ಗೊಂಬೆನೆ ಕಣ್ರೊ ಎಂದು ನಲಿದು, ಯೌವನದಲಿ ಅವಳು ಕರ್ಪೂರದ ಗೊಂಬೆ, ಚಂದನದ ಗೊಂಬೆ, ಬೊಂಬೆ ನೀನೇ ನನ್ನ ರಂಭೆ ಎಂದೊಲಿದು, ಮಧ್ಯಾವಸ್ಥೆಯಲಿ ಕಾಲದ ಕೈಪಿಡಿಯಲಿ ಸಮಯದ ಗೊಂಬೆಗಳಾಗಿ, ಪರಿಸ್ಥಿತಿಯ ಗೊಂಬೆಗಳಾಗಿ ಮಾರ್ಪಡುವ ನಮ್ಮ ಜೀವನವೂ ಬೊಂಬೆಯಾಟವಯ್ಯಾ...ಆ ದೇವನಾಡುವಾ ಬೊಂಬೆ ಆಟವಯ್ಯಾ...* ವಾಣಿ ರಾಮದಾಸ್, ಸಿಂಗಪುರ 'ಮಮ್ಮೀ, ಮೈ ಬೇಬಿ ಇಸ್ ನಾಟ್ ಸ್ಲೀಪಿಂಗ್, 35831http://kannada.oneindia.com/img/2009/04/08-baby-doll1.jpg466642mysore dasaraದಸರಾ: ಒಡೆಯರ್ ಗೆ ಸರಕಾರದ ಅಧಿಕೃತ ಆಹ್ವಾನ/festivals/dasara/2009/0831-dasara-govt-extends-invitation-to-wodeyar.htmlಬೆಂಗಳೂರು, ಆ. 31 : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸರಕಾರದ ವತಿಯಿಂದ ಆಯೋಜಿಸಲಾಗುವ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಮಹಾರಾಜರ ವಂಶಸ್ಥ ಶ್ರೀಕಂಠದತ್ತ ರಾಜ ಒಡೆಯರ ಮತ್ತು ಅವರ ಪ್ರಮೋದಿನಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಅಲ್ಲದೇ 38937http://kannada.oneindia.com/img/2009/08/31-wodeyar-shobha1.jpg547950dasara festivalಸೆ. 15ರೊಳಗೆ ಮೈಸೂರು ವಿಮಾನ ನಿಲ್ದಾಣ/news/2009/08/06/mysore-airport-to-be-operational-by-sept-15-bsy.htmlಮೈಸೂರು, ಆ. 6 : ಮೈಸೂರು ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದಿಲ್ಲಿ ಸೂಚಿಸಿದರು. ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಈ ವರ್ಷದ ದಸರಾ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣ ಸಜ್ಜುಗೊಂಡು ಪ್ರವಾಸಿಗರಿಗೆ ವಿಮಾನಯಾನ ಸೇವೆ 38455http://kannada.oneindia.com/img/2009/08/06-bsy-mysore-airport-meet1.jpg547950dasara festivalದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ/festivals/dasara/2009/0811-mysore-readies-itself-for-gajapayana-aug13.htmlಮೈಸೂರು, ಆ. 11 : ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಅದ್ದೂರಿಯ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.ದಿನಾಂಕ 13.8.09 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಗಜಪಯಣಕ್ಕೆ 38567http://kannada.oneindia.com/img/2009/08/11-elephant-balarama1.jpg547950dasara festivalರವಿಶಂಕರ್ ಗುರೂಜಿಯಿಂದ ದಸರಾ ಉದ್ಘಾಟನೆ/festivals/dasara/2009/0902-ravishankar-guruji-to-inaugurate-dasara-2009.htmlಮೈಸೂರು, ಸೆ. 2 : ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಬಾ ಕರಂದ್ಲಾಜೆ ತಿಳಿಸಿದರು. ನಗರದ ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ ಮತ್ತು ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದ ನಂತರ ಮಾಧ್ಯಮ 38959http://kannada.oneindia.com/img/2009/09/02-ravishankar2.jpg547950dasara festivalದಸರಾ ಹಬ್ಬ : ಖಾಸಗಿ ಪ್ರಾಯೋಜಕತ್ವಕ್ಕೆ ಅಸ್ತು/festivals/dasara/2009/0906-private-sponsorship-for-dasara-manivannan.htmlಮೈಸೂರು, ಸೆ. 6 : ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆಸಿರುವ ಜಿಲ್ಲಾಡಳಿತ ಸರಕಾರದ ಅನುದಾನದ ಜೊತೆಗೆ ಖಾಸಗಿ ಪ್ರಾಯೋಜಕರನ್ನು ಆಹ್ವಾನಿಯಲಾಯಿತು. ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ವಿವಿಧ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಅಹ್ವಾನ ನೀಡಿದರು. ದಸರಾ ಅಂಗವಾಗಿ ನಡೆಯಲಿರುವ ಅರಮನೆ ಕಾರ್ಯಕ್ರಮ, ಯುವ ದಸರಾ, ಕ್ರೀಡಾಕೂಟ, ಗ್ರಾಮೀಣ ದಸರಾ ಸೇರಿದಂತೆ 39030http://kannada.oneindia.com/img/2009/09/06-manivannan-mysore-dc.jpg547950dasara festivalಈ ದಸರೆಯಲ್ಲಿ 35 ಸ್ತಬ್ದ ಚಿತ್ರ ಮೆರವಣಿಗೆ/festivals/dasara/2009/0909-mysore-dasara-procession-35-tableau-limit.htmlಮೈಸೂರು, ಸೆ. 9 : ದಸರಾ ಸ್ಥಬ್ದಚಿತ್ರ ಉಪಸಮಿತಿ ಸಭೆಯನ್ನು ದಸರಾ ಸ್ತಬ್ದಚಿತ್ರ ಉಪಸಮಿತಿ ಅದ್ಯಕ್ಷರಾದ ಎಂ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಮಣಿವಣ್ಣನ್ ಹಾಗೂ ದಸರಾ ಉಪವಿಶೇಷಾಧಿಕಾರಿಗಳು ಹಾಗೂ ಪೋಲೀಸ್ ಆಯುಕ್ತರಾದ ಸುನಿಲ್ ಅಗರವಾಲ್ ನೇತೃತ್ವದಲ್ಲಿ ಸಭೆ ನಡೆಯಿತು.ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು, ಇತರೆ ಇಲಾಖಾ ಅಧಿಕಾರಿಗಳ ಸಭೆಯನ್ನು 39094http://kannada.oneindia.com/img/2009/09/09-shobha-karandlaje1e.jpg208259shobha karandlajeಗಣಿಗಾರಿಕೆಗೆ ಪರವಾನಗಿ ನೀಡಿದ್ದೇ ಕಾಂಗ್ರೆಸ್: ಬಿಎಸ್ ವೈ/news/2009/04/26/yeddyurappa-taunts-against-congress-in-mysuru.htmlಮೈಸೂರು, ಏ.26: ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾಗಾಂಧಿ ಅವರ ಕನಸು ಈ ಚುನಾವಣೆಗಳ ನಂತರ ನನಸಾಗಲಿದೆ ಎಂದು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಚುನಾವಣಾ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಇಲ್ಲಿನ 36222http://kannada.oneindia.com/img/2009/04/26-yediyurappa2.jpg208259shobha karandlajeಕೋಕಾ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ /news/2009/05/08/karnataka-cabinet-approves-amendments-to-kcoca-act.htmlಬೆಂಗಳೂರು, ಮೇ. 8 : ಇತ್ತೀಚೆಗೆ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೆ ತರಲು ನಿರ್ಧರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ವಾನುಮತದ ಒಪ್ಪಿಗೆ ದೊರೆತಿದ್ದು, ಕೋಕಾ ಕಾಯ್ದೆಯನ್ನು ಜಾರಿಗೆ ತರಲು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 36495http://kannada.oneindia.com/img/2009/05/08-shobha-karandlaje1e.jpg208259shobha karandlajeರಾಜ್ಯದ ಮೆಗಾ ರಸ್ತೆಗಳಿಗೆ ಟೋಲ್ ಶುಲ್ಕ ನಿಗದಿ/news/2009/05/23/karnataka-plans-to-develop-200-toll-roads.htmlಬೆಂಗಳೂರು, ಮೇ.23: ರಾಜ್ಯದಲ್ಲಿನ ಸುಮಾರು 200 ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳನ್ನು (ನಾಲ್ಕು ಹಾಗೂ ಎರಡು ಪಥದ ರಸ್ತೆ) ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ರಸ್ತೆಗಳನ್ನು ಬಳಸುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಇದರಂತೆ ನಾಲ್ಕು ಪಥದ ರಸ್ತೆಗಳಲ್ಲಿ ಸಂಚರಿಸುವ ಕಾರು, ಜೀಪು, ವ್ಯಾನ್ 36840http://kannada.oneindia.com/img/2009/05/23-karnatka-road2.jpg208259shobha karandlajeಕನ್ನಡ ಚಲನಚಿತ್ರ ಅಕಾಡೆಮಿ ಜೂನ್ 5ಕ್ಕೆ ಆರಂಭ/movies/headlines/2009/06/02-kannada-film-academy-to-start-function-june5.htmlಬೆಂಗಳೂರು, ಜೂ.2:ಕನ್ನಡ ಚಲನಚಿತ್ರರಂಗ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿ 2009 ರ ಜೂನ್ 5 ರಿಂದ ಕಾರ್ಯಾರಂಭಗೊಳ್ಳಲಿದೆ. ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವರು ಅಕಾಡೆಮಿಗೆ ಚಾಲನೆ ನೀಡಲಿದ್ದಾರೆ. ಸಚಿವರುಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್. ಅಶೋಕ್, ಶೋಭಾ ಕರಂದ್ಲಾಜೆ ಹಾಗೂ ಚಿತ್ರರಂಗದ ಗಣ್ಯರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಚಲನಚಿತ್ರ ಅಕಾಡೆಮಿಯು ಸರ್ಕಾರ ಹಾಗೂ ಚಲನಚಿತ್ರ ಮಾಧ್ಯಮಗಳ 37048http://kannada.oneindia.com/img/2009/06/02-amrutha-mahotsava1e.jpg208259shobha karandlajeಮೈಸೂರು ಉಸ್ತುವಾರಿ ಒಲ್ಲೆ ಎಂದ ಶೋಭಾ /news/2009/06/07/minister-shobha-offers-to-step-down-mysore.htmlಬೆಂಗಳೂರು, ಜೂ. 7 : ಸರಕಾರದೊಳಗೆ ಎದ್ದಿರುವ ಆಂತರಿಕ ಭಿನ್ನಮತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಶೋಭಾ ಅವರ ಮಾತನ್ನು ನಿರಾಕರಿಸಿದ್ದು, ಶೋಭಾ ಅವರನ್ನೇ ಮುಂದುವರೆಸಿ ಶಾಸಕ ಎಸ್ ರಾಮದಾಸ್ ಸಿಎಂ 37176http://kannada.oneindia.com/img/2009/06/07-shobha-karandlaje3e.jpgnews"> ಮೈಸೂರು ದಸರಾಕ್ಕೆ ಜಗಮಗಿಸುವ ದೀಪಾಲಂಕಾರ | Mysore Dasara | Dasara Festival | Shobha Karandlaje | Lighting Arrangemnt | ಮೈಸೂರು ದಸರಾಕ್ಕೆ ಜಗಮಗಿಸುವ ದೀಪಾಲಂಕಾರ - Kannada Oneindia

ಮೈಸೂರು ದಸರಾಕ್ಕೆ ಜಗಮಗಿಸುವ ದೀಪಾಲಂಕಾರ

Mysore Palace
ಬೆಂಗಳೂರು, ಸೆ. 18 : ಮೈಸೂರು ದಸರಾ ಎಂದಾಕ್ಷಣ ಜಗಜಗಿಸುವ ವಿದ್ಯತ್ ದೀಪಗಳ ಸರಮಾಲೆ, ಅಲಂಕೃತಗೊಂಡ ಉದ್ಯಾನವನಗಳು, ಸಿಂಗರಿಸಿದ ಕಟ್ಟಡಗಳು, ವೃತ್ತಗಳು ಹಾಗೂ ರಸ್ತೆಗಳು ನೆನಪಾಗುತ್ತವೆ. ನವರಾತ್ರಿಯ ಸಂಭ್ರಮದಲ್ಲಿ ಮೈಸೂರು ನಗರ ಕಿನ್ನರ ಲೋಕವಾಗಿ ಮಾರ್ಪಾಡಾಗುವುದನ್ನು ನೋಡುವುದೇ ಸೊಬಗು.

ಪ್ರತಿವರ್ಷವೂ ಅಲಂಕೃತಗೊಳ್ಳುವ ಹೊಸ ಸಯ್ಯಾಜಿರಾವ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ಚೌಕ, ಆಯಕಟ್ಟಿನ ವೃತ್ತಗಳು, ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ಬೆಟ್ಟದ ಮೇಲೆ ಪ್ರವಾಸಿಗರನ್ನು ಆಕರ್ಷಿಸುವ 'ಸುಸ್ವಾಗತ', ನಂಜನಗೂಡು ರಸ್ತೆ, ಬೆಂಗಳೂರು ರಸ್ತೆ, ಹರ್ಷ ರಸ್ತೆಯಲ್ಲಿನ ಕರ್ಜನ್ ಪಾರ್ಕ್-3, ಕೆ.ಆರ್.ವೃತ್ತದಿಂದ ಬಸವೇಶ್ವರ ವೃತ್ತದವರೆರೆಗಿನ ರಸ್ತೆ, ಮಹದೇಶ್ವರ ರಸ್ತೆ (ಹಾರ್ಡಿಂಜ್ ವೃತ್ತದಿಂದ ಟೆರಿಷಿಯನ್ ಕಾಲೇಜ್‌ವರೆವಿಗೆ).

ಹರ್ಷ ರಸ್ತೆ ಮತ್ತು ಹಳೇ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಹೊಂದಿರುವ ಅಶೋಕ ರಸ್ತೆ, ಅರಮನೆಯಿಂದ ಪೌಂಟೆನ್ ವೃತ್ತ, ಹುಣಸೂರು ರಸ್ತೆ, ಇರ್ವಿನ್ ರಸ್ತೆ, ಜೆ.ಎಲ್.ಬಿ.ರಸ್ತೆ, ನ್ಯೂ ಮೈಸೂರು ಬೆಂಗಳೂರು ರಸ್ತೆ, ಮೈಸೂರು ಮೃಗಾಲಯದ ಸುತ್ತಮುತ್ತ, ಎಸ್.ಪಿ.ಕಛೇರಿ ಸುತ್ತ ಮುತ್ತ, ಉತ್ತನಹಳ್ಳಿ, ದೇವಸ್ತಾನ, ಚೆಲುವಾಂಬ ಉದ್ಯಾನವನ, ಸ್ವಾತಂತ್ಯ್ರ ಹೋರಾಟಗಾಋಆರ ಉದ್ಯಾನವನ (ಸುಬ್ಬರಾಯನ ಕೆರೆ ಉದ್ಯಾನವನ), ಜಗನ್ಮೋಹನ ಅರಮನೆ, ಶಿವರಾಂಪೇಟೆ, ವಿನೋಬಾ ರಸ್ತೆ, ಪೂರ್ವ, ಪಶ್ಚಿಮ ಕಾಂತರಾಜೇ ಅರಸ್ ರಸ್ತೆ, ಅಗ್ರಹಾರ ವೃತ್ತ, ಮಿಲಾದ್ ಉದ್ಯಾನವನ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ರಾಮಲಿಂಗೇಶ್ವರ ಉದ್ಯಾನವನ (ವಿದ್ಯಾರಣ್ಯಪುರಂ), ಮಹಾತ್ಮಗಾಂಧಿ ರಸ್ತೆ, ಅಂಬೇಡ್ಕರ್ ಉದ್ಯಾನವನ, ನಟನಾ ರಂಗಮಂಟಪ, ಇವುಗಳೆಲ್ಲವೂ ದೀಪಾಲಂಕಾರಗೊಳ್ಳಲಿವೆ.

ವಿಶೇಷವಾಗಿ ದಿವಂಗತ ಜಯಚಾಮರಾಜೇಂದ್ರ ಒಡೆಯರ್‌ರವರ ಆಕೃತಿಯನ್ನು ವಿದ್ಯತ್ ದೀಪಗಳೊಂದಿಗೆ ಬಿಂಬಿಸಲಾಗುತ್ತಿದೆ. ನಗರದ ರೈಲು ನಿಲ್ದಾನದಿಂದ ಇರ್ವಿನ್ ರಸ್ತೆ ಮೂಲಕ ಹಾರ್ಡಿಂಜ್ ವೃತ್ತದವರೆಗಿನ ರಸ್ತೆ, ಮಿಲೇನಿಯಮ್ ವೃತ್ತದಿಂದ ಜೆ.ಎಸ್.ಎಸ್. ದಂತ ಕಾಲೇಜು ಮೂಲಕ ಬೆಂಗಳೂರು ರಸ್ತೆಯ ಟೋಲ್ಗೆಟ್‌ವರೆಗಿನ ರಸ್ತೆ, ಬಿ,ಎನ್.ರಸ್ತೆಯ ಫೈವ್ ಲೈಟ್ ವೃತ್ತದಿಂದ ನಗರ ಬಸ್ ನಿಲ್ದಾಣದವರೆಗಿನ ರಸ್ತೆ, ರಾಮಸ್ವಾಮಿ ವೃತ್ತದಿಂದ ಚಾiರಾಜ ಜೋಡಿರಸ್ತೆಯ ಮೂಲಕ ಜೆ.ಎಸ್.ಎಸ್. ವೃತ್ತದ ವರೆಗಿನ ರಸ್ತೆ, ಜಿಲ್ಲಾ ಪಂಚಾಯತ್ ಕಛೇರಿಯಿಂದ ಕೃಷ್ಣರಾಜೇಂದ್ರ ಬೂಲ್ವಾರ್ಡ ಮೂಲಕ ವಿನೋಬಾ ರಸ್ತೆಯಲ್ಲಿರುವ ಕಮಾನಿನವರೆಗಿನ ರಸ್ತೆಗಳು ಅಲಂಕಾರಗೊಳ್ಳಲಿವೆ.

ವಿಶೇಷತೆಗಳು

ಮಾತೃಮಂಡಳಿ ವೃತ್ತ, ಸುಭಾಷ್‌ನಗರ ಪಾರ್ಕ್, ಸಿದ್ಧಿಕ್ ನಗರ ಪಾರ್ಕ್, ವಿಶ್ವಮಾನವ ಪಾರ್ಕ್, ಮಾರುತಿ ವೃತ್ತ, ನ್ಯೂ ಕಾಂತರಾಜ್ ಅರಸ್ ರಸ್ತೆ, ಕೆ.ಜಿ.ಕೊಪ್ಪಲ್, ವಿಶ್ವಮಾನವ ಜೋಡಿ ರಸ್ತೆ, ಕುಕ್ಕರಹಳ್ಳಿ ಟ್ಯಾಂಕ್ ರಸ್ತೆಯ ಮರಗಳಿಗೆ ದೀಪಾಲಂಕಾರ, ನೆಹರು ಪಾರ್ಕ್ ಉದಯಗಿರಿ, ಕೆ.ಆರ್.ಪಾರ್ಕ್ ಮಂಡಿಮೊಹಲ್ಲಾ, ದಸರಾ ದೀಪಾಲಂಕಾರ ಇತಿಹಾಸದಲ್ಲೇ ಕಳೆದ ವರ್ಷದಲ್ಲೇ ಬನ್ನಿಮಂಟಪ ಹಾಗೂ ಜಂಬೂ ಸವಾರಿ ಮಾರ್ಗದ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಚಾಮುಂಡಿ ಬೆಟ್ಟದ ದೇಗುಲದ ಬಳಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ, 14 ಸಂಖ್ಯೆ ವಿದ್ಯುತ್ ಜನರೇಟರ್‌ಗಳನ್ನು ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಸೊಬಗು ಮೂಡಿಸುವ ಸಲುವಾಗಿ, ಸಾಲುಮರಗಳು ಬಹುವರ್ಣಗಳ, ಹೆಚ್ಚಿನ ಮೆಟಲ್ ಹ್ಯಾಲೈಡ್ ದೀಪಗಳೊಂದಿಗೆ ಮತ್ತು ದೀಪಗಳ ಸರಮಾಲೆಗಳೊಂದಿಗೆ ಆಕರ್ಷಣೀಯವಾಗಲಿವೆ. ದಸರಾ ದೀಪಾಲಂಕಾರ ಉಪಸಮಿತಿ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಗಳ ಸಹಯೋಗದಲ್ಲಿನ ಈ ಬಾರಿಯ ಪ್ರಯತ್ನ, ಪ್ರವಾಸಿಗರು ಮತ್ತು ಮೈಸೂರು ಜನತೆಯ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ. ಈ ಬಾರಿ ಒಟ್ಟು 1,63,000 ಬಲ್ಬ್‌ಗಳು, 3250 ಮೆಟಲ್ ಅಲೈಡ್ ಲ್ಯಾಂಪ್ಸ್, ಮತ್ತು 12 ವಿಶೇಷ ಬೆಳಕಿನ ಗಣಕೀಕೃತ ದೀಪಗಳನ್ನು ಉಪಯೋಗಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+