ರಾಜ್ ಕಂಠದಲ್ಲಿ ಮಾತೆ ಚಾಮುಂಡಿ ಗೀತೆ
ಧ್ವನಿಮುದ್ರಿಕೆ: ಬೆದಗಾರ ನಂಜುಂಡು ಮಾಯಗಾತಿ ಚಾಮುಂಡಿ
ಗಾಯನ: ಡಾ.ರಾಜ್‍ಕುಮಾರ್
ಸಾಹಿತ್ಯ ಮತ್ತು ಸಂಗೀತ: ಜಯಶ್ರೀ ಅರವಿಂದ್
ಬೆಟ್ಟದ ಮ್ಯಾಲೆ ಮುತ್ತಿನ ರಂಗೋಲಿ
ಚುಕ್ಕಿಯನಿಟ್ಟೋಳು ಚಾಮುಂಡಿ ಮಾಯಗಾತಿ
ಕಟ್ಟಾಣಿ ಚೆಲುವೆ ನಂಜುಂಡ್ನ ಕಣ್ಮಣಿ
ಗುಟ್ಟಾಗಿ ಒಲಿದೋಳು ಮಾದತ್ತಿ ಮಾಯಕಾರಿ
ಚಿನ್ನದ್ ಹೂವಿನ ಸೀರೆ
ಬಣ್ಣದ್ ಮುತ್ತಿನ ರವಿಕೆ
ಸಣ್ಣನೆ ನಡುವಿನ ಚಾಮುಂಡಿ
ಮುತ್ತಿನೋಲೆ ನವರತ್ನದ್ವಾಲೆ ತೊಟ್ಟ
ಬೆಟ್ಟದ ಚೆಲುವೆ ಚಾಮುಂಡಿ
||ಬೆಟ್ಟದ ಮ್ಯಾಲೆ||
ಮರುಗ ಮಲ್ಲಿಗೆ ಜವನ
ಸುರಗ ಸಂಪಿಗೆ ದವನ
ಶಿರದಲ್ಲಿ ಮೆರೆದಂತ ಚಾಮುಂಡಿ
ಮಹಿಷಾಸುರನ ಮೆಟ್ಟಿ ಅಹಿಷಾಸುರನ ಕುಟ್ಟಿ
ಮೈಸೂರಲ್ಲಿ ನಿಂತ ಚಾಮುಂಡಿ
||ಬೆಟ್ಟದ ಮ್ಯಾಲೆ||
ನಂದ್ಯಾದ ಗಿರಿ ಒಡಯ
ನಡುಗಾಡ್ ನಂಜುಂಡನ
ಮಡದಿ ಮಾಯಕಾತಿ ಚಾಮುಂಡಿ
ಮುತ್ತಿನ ಹಟ್ಟಿಯಲ್ಲಿ ಚಿತ್ತಾರದ ಮಂಚದಲ್ಲಿ
ಒತ್ತಿ ಮಲಗವ್ಳೆ ಚಾಮುಂಡಿ
||ಬೆಟ್ಟದ ಮ್ಯಾಲೆ||
****
ಬೋನಸ್ ಹಾಡು
ಚಾಮುಂಡೆ ದೇವಿ ಸ್ತುತಿ
ರಚನೆ : ಮಹಾರಾಜ ಜಯಚಾಮರಾಜ ಒಡೆಯರ್ ಕೃತಿ:
ರಾಗ: ಕನ್ನಡ ; ಆದಿ ತಾಳ
|| ಪಲ್ಲವಿ ||
|| ಶ್ರೀ ಚಾಮುಂಡೇಶ್ವರಿ ದೇವಿ ತವ ಪಾದ ಭಕ್ತಿಂ ದೇಹಿ ||
|| ವಾಚಾಮ ಗೋಚರೆ ವಾಂಛಿತ ಪ್ರದಕರೇ ಮೇ ಮುದಂ ದೇಹಿ ||
|| ಅನುಪಲ್ಲವಿ ||
|| ರಾಜ ರಾಜೇಶ್ವರೀತಿ ವಿಖ್ಯಾತೆ ಶ್ರೀ ವಿದ್ಯೆ ಸುಗುಣ ಭರಿತೇ ||
|| ವಿಜಯ ಕಾಂಚಿಪುರ ವರನಿಲಯೇ ||
|| ಶ್ರೀ ಮಹಾತ್ರಿಪುರ ಸುಂದರಿ ಶ್ರೀ ಮಚ್ಚಕ್ರೇಶ್ವರಿ ಶ್ರೀ ಮಂತ್ರೇಶ್ವರಿ ||
|| ಚರಣ ||
|| ಮದನ ಮೋಹನಕರ ಸುಂದರವದನೇ ||
|| ಮದನವೈರಿ ಮಾನಸ ಸದನೇ ||
|| ತಾದಾತ್ಮ್ಯಭಾವಯುತ ಯೋಗಿ ಹ್ರುತ್ಕಮಲ ಭವನೇ ಮಂದಹಸನೇ ||
|| ಮಹಾದೇವ ಸಮ್ಮೋಹನಕರ ಶಿವಶಕ್ತಿ ರೂಪಿಣಿ ||
|| ಮಹಾದಾದಿ ಷಟ್ತ್ರಿಂಶತ್ತತ್ತ್ವ ಸ್ವರೂಪಿಣಿ ವರ ಕನ್ನಡರಾಗ ಸಂತೋಷಿಣಿ||
|| ಅಹಂ ಬ್ರಂಹಾಸ್ಮೀತಿ ತತ್ತ್ವ ಮಂತ್ರೋಪಾಸಿತೇ ||
|| ಅಹರ್ನಿಶಂ ಊರ್ಧ್ವರೇತೋ ಯೋಗಿ ವರೇಣ್ಯೇ ಚಿಂತಿತೇ ||
|| ಮಹಾಮಹಿಮ ವಿದಿತ ಶುಭ ಚರಿತೇ ||ಚ||
(ದಟ್ಸ್ ಕನ್ನಡ ಗೀತಸಾಹಿತ್ಯ)












Click it and Unblock the Notifications