ಕರಾವಳಿಯ ತುಂಬಾ ವೇಷಗಳದೇ ಗುಂಗು... ಬಣ್ಣಗಳ ರಂಗು.

*ರಾಜ-ಲ-ಕ್ಷ್ಮಿ ಕೆ. ರಾವ್‌

ಹುಲಿ ವೇಷದ ಗುಂಪಿನಲ್ಲಿ ಏಳೆಂಟು ಹುಲಿಗಳಿರುತ್ತವೆ. ಒಂದೊಂದು ಗುಂಪಿನ ಕುಣಿತವೂ ಒಂದೊಂದು ಶೈಲಿಯ-ದು. ಮನೆಯವರು ಕೊಡುವ ಹಣವನ್ನು ನೆಲದ ಮೇಲೆ ಹಾಕಿ, ಚಕ್ರಾಸನದ ಮೂಲಕ ನಾಲಿಗೆಯಿಂದ ಹಣ ತೆಗೆಯುತ್ತಾರೆ. ಹೀಗೆ ಊಟದ ತಟ್ಟೆ (ಬಟ್ಟಲು)ಯಲ್ಲಿ ಹಾಲಿನೊಳಗೆ ನಾಣ್ಯಗಳನ್ನು ಹಾಕಿ ಹಿಂದಕ್ಕೆ ಬಗ್ಗಿ ನಾಲಿಗೆಯಲ್ಲಿ ಅದನ್ನು ಎತ್ತಿಕೊಳ್ಳುತ್ತಾರೆ. ಹೀಗೆ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಬೇರೆ ಬೇರೆ ತಂಡಗಳಿರುತ್ತವೆ. ಆಯಾ ಊರುಗಳಲ್ಲಿ ಅವು ತಮ್ಮದೇ ಆದ ವೈಶಿಷ್ಟ್ಯಗಳಿಂದ ಪ್ರಸಿದ್ಧಿ ಪಡೆದಿರುತ್ತವೆ.

ಕರಡಿ, ಶಾರ್ದೂಲದಂತಹ ವೇಷಗಳು ತುಂಬಾ ಸರಳ. ಕರಡಿಯ ಮುಖವಾಡ, ಮೈ ತುಂಬಾ ಕೂದಲಿರುವ ಕಪ್ಪು ಅಂಗಿಯನ್ನು ಹಾಕಿಕೊಂಡರಾಯಿತು. ಬಣ್ಣ ಬಳಿಯುವ ಉಸಾಬರಿ ಇರುವುದಿಲ್ಲ. ಅನಾರ್ಕಲಿ ನೃತ್ಯ ಆಧುನಿಕ ಡಿಸ್ಕೋ ಡ್ಯಾನ್ಸ್‌ನ್ನು ಹೋಲುತ್ತದೆ. ವಾದ್ಯದ ಹಿನ್ನೆಲೆಯಲ್ಲಿ ಬಣ್ಣ ಬಣ್ಣದ ಹುಡುಗ ಹುಡುಗಿಯರ ವೇಷ ತೊಟ್ಟ ಹುಡುಗರು ಪ್ರತಿ ಮನೆ ಮುಂದೆ ನರ್ತಿಸುತ್ತಾರೆ. ಈ ಗುಂಪಿನ ಹಿಂದೆ ಊರ ಹುಡುಗರ ಪುಂಡೊಂದು ಓಡುತ್ತಿರುತ್ತದೆ. ಮನೆಯವರೆಲ್ಲ ಯಾವಕಡೆಯಿಂದ ಯಾವ ವೇಷ ಬಂತು ಎಂದು ಕಿವಿ ನಿಮಿರಿಸಿಕೊಂಡೇ ಈಗಷ್ಟೇ ಅಂಗಳದಲ್ಲಿ ಕುಣಿದು ಹೋದ ವೇಷಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಇನ್ನು ಕೆಲವರು ಕೊಡುವುದಕ್ಕೆ ಹಣವಿಲ್ಲ, ನಾವಿಲ್ಲ ಎಂದು ಬಿಡಿ ಅಂತ ಬಾಗಿಲು ಹಾಕಿಕೊಂಡು ಅವಿತಿರುತ್ತಾರೆ. ಮನೆಯ ಗಂಡಸರು ಊರಿನಲ್ಲಿ ಆ ಬಾರಿ ಬರುವ ವಿಶೇಷತೆಗಳ ಬಗೆಗೆ ಮಾತನಾಡುತ್ತಿರುತ್ತಾರೆ. ಕರಾವಳಿಯ ತುಂಬಾ ವೇಷಗಳದೇ ಗುಂಗು... ಬಣ್ಣ... ರಂಗು.

ಹುಲಿವೇಷದ ಹಿಂದಿರುವ ಕತೆ ದೇವಿ ಮಹಾತ್ಮೆ. ದೇವಿ, ಮಹಿಷಾಸುರ ಮತ್ತು ಇತರ ದುಷ್ಟ ಕೂಟವನ್ನು ಸಂಹರಿಸುವಾಗ ಇಂದ್ರಾದಿಗಳು ಅವಿತುಕೊಂಡಿದ್ದರಂತೆ. ದೇವಿ, ಸಿಂಹ ವಾಹಿನಿ ಆದುದರಿಂದ ಹುಲಿ ಮತ್ತು ಸಿಂಹ, ಶಾರ್ದೂಲಗಳ ವೇಷಗಳನ್ನು ಮಂದಿ ಹರಕೆ ಹೊತ್ತು ಖುಷಿಯಿಂದ ಹಾಕಿಕೊಳ್ಳುತ್ತಾರೆ. ಈ ವೇಷ ಹಾಕಿಕೊಳ್ಳುವ ಪದ್ಧತಿ ಇತ್ತೀಚೆಗೆ ಹಣ ಮಾಡಲು ಒಂದು ಅವಕಾಶವಾಗಿಬಿಟ್ಟಿದೆ. ಹರಕೆ ಹೊತ್ತಿದ್ದಾರೋ ಅಥವಾ ಸುಮ್ಮನೇ ಮುಖಕ್ಕಷ್ಟು ಬಣ್ಣ ಬಳಿದು ಮನೆ ಮನೆ ಸುತ್ತುತ್ತಾರೋ ಎನ್ನುವುದನ್ನು ಕಂಡು ಹಿಡಿಯುವುದು ಕಷ್ಟ. ಆದರೂ ಕರಾವಳಿಯ ನವರಾತ್ರಿಯ ತುಂಬಾ ಜಾತ್ರೆಯ ಗುಂಗು, ವೇಷದ ರಂಗು. ಮನೆ ಮನೆಯಲ್ಲಿಯೂ ಸಡಗರ.

ಮುಖಪುಟ / ಮೈಸೂರು ದಸರಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+