ನಾಳೆಯೇ ಅಶ್ವಿನ ವಿನಾಯಕ ಚತುರ್ಥಿ: ಸಂಕಷ್ಟ ನಿವಾರಣೆಗೆ ಈ ಪೂಜೆ ವಿಧಾನ ಅನುಸರಿಸಿ!
ಹಿಂದೂಗಳ ಪ್ರಕಾರ ಚತುರ್ಥಿಯನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಗಣೇಶನನ್ನು ಪೂಜಿಸಲು ಸಮರ್ಪಿಸಲಾಗಿದೆ. ಒಂದು ತಿಂಗಳಲ್ಲಿ ಎರಡು ಚತುರ್ಥಿಗಳು ಬರುತ್ತವೆ. ಒಂದು ಸಂಕಷ್ಟ ಚತುರ್ಥಿ ಮತ್ತು ಇನ್ನೊಂದು ವಿನಾಯಕ ಚತುರ್ಥಿ.
ಸಂಕಷ್ಟ ಚತುರ್ಥಿ ಕೃಷ್ಣ ಪಕ್ಷದಲ್ಲಿ ಬಂದರೆ ವಿನಾಯಕ ಚತುರ್ಥಿ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ದಿನ ಜನರು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಕೆಲವರು ಉಪವಾಸವನ್ನು ಮಾಡುತ್ತಾರೆ. ಈ ಬಾರಿ ವಿನಾಯಕ ಚತುರ್ಥಿಯನ್ನು ಅಶ್ವಿನ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಅಂದರೆ ಅಕ್ಟೋಬರ್ 18, 2023 ರಂದು ಆಚರಿಸಲಾಗುತ್ತದೆ . ಈ ಚತುರ್ಥಿಯನ್ನು ಅಶ್ವಿನ ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನದಂದು ಪೂಜೆ ಉಪವಾಸ ಮಾಡುವ ಮೂಲಕ ಭಕ್ತರು ಗಣೇಶನಲ್ಲಿ ಯಶಸ್ಸು ಮತ್ತು ಅಡೆತಡೆಗಳಿಲ್ಲದ ಜೀವನಕ್ಕಾಗಿ ಬೇಡಿಕೊಳ್ಳುತ್ತಾರೆ.

ಅಶ್ವಿನ ವಿನಾಯಕ ಚತುರ್ಥಿ 2023ಯ ಮಹತ್ವ
ವಿನಾಯಕ ಚತುರ್ಥಿ ಹಿಂದೂಗಳಲ್ಲಿ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಗಣೇಶನನ್ನು ಪೂಜಿಸಲು ಸಮರ್ಪಿಸಲಾಗಿದೆ. ಗಣೇಶನನ್ನು ಪ್ರಥಮ ಪೂಜೆ ಒಪ್ಪಿದವ ಅಂದರೆ ಮೊದಲು ಪೂಜಿಸಿದ ದೇವರು ಎಂದು ಕರೆಯಲಾಗುತ್ತದೆ. ಹೀಗಾಗಿ ಜೀವನದಲ್ಲಿರುವ ಕಷ್ಟಗಳ ನಿರಾರಣೆಗೆ ಮೊದಲು ವಿನಾಯನನ್ನು ಪೂಜಿಸುತ್ತಾರೆ. ಈ ನಿರ್ದಿಷ್ಟ ದಿನದಂದು ಗಣಪತಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸುವ ಭಕ್ತರ ಕಷ್ಟ, ನೋವುಗಳನ್ನು ಗಣಪತಿ ನಿವಾರಿಸುತ್ತಾನೆ ಎಂದು ನಂಬಲಾಗಿದೆ. ಜೊತೆಗೆ ಗಣೇಶನು ಭಕ್ತರಿಗೆ ಯಶಸ್ಸು, ಸಂತೋಷ ಮತ್ತು ಅಡೆತಡೆಗಳಿಲ್ಲದ ಜೀವನವನ್ನು ಅನುಗ್ರಹಿಸುತ್ತಾನೆ ಎನ್ನಲಾಗಿದೆ.
ವಿನಾಯಕ ಚತುರ್ಥಿ ಅಕ್ಟೋಬರ್ 2023 : ದಿನಾಂಕ ಮತ್ತು ಸಮಯ
ಚತುರ್ಥಿ ತಿಥಿ ಆರಂಭ: ಅಕ್ಟೋಬರ್ 18, 2023 01:26 ಬೆಳಗಿನ ಜಾವ ಆರಂಭವಾಗಿ ಅಕ್ಟೋಬರ್ 19, 2023 - 01:12ರ ಬೆಳಗಿನ ಜಾವ ಕೊನೆಗೊಳ್ಳುತ್ತದೆ.

ವಿನಾಯಕ ಚತುರ್ಥಿ 2023: ಪೂಜಾ ವಿಧಿಗಳು
1. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರ ಬಟ್ಟೆಯನ್ನು ಧರಿಸಿ
2. ಸೀಮಿತ ಸ್ಥಳ ಅಂದರೆ ದೇವರ ಕೋಣೆ ಅಥವಾ ದೇವ ಮೂಲೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸಿ. ವಿಗ್ರಹಕ್ಕೆ ಹಳದಿ ಕುಂಕುಮ ತಿಲಕವನ್ನು ಹಚ್ಚಿ. ಹಾರ, ಗರಿಕೆ ಹುಲ್ಲು ಹಾಗೂ ಗಣೇಶನಿಗೆ ಪ್ರಿಯವಾದ ಮೋದಕ, ಲಡ್ಡು ಜೊತೆಗೆ ಇತರ ಸಿಹಿ ತಿಂಡಿಯನ್ನು ಅರ್ಪಿಸಿ.
3. ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಿ ಮತ್ತು ಗಣೇಶ ಮಂತ್ರಗಳನ್ನು ಪಠಿಸಿ
4. ಗಣೇಶನ ವಿಗ್ರಹಕ್ಕೆ ಆರತಿ ಬೆಳಗಿ ಉಪವಾಸ ಆಚರಿಸಬಹುದು.
6. ಸಂಜೆಯ ವೇಳೆಗೆ ಮತ್ತೆ ಗಣೇಶನಿಗೆ ಪೂಜೆ ಸಲ್ಲಿಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ.
7. ಪೂಜಾ ವಿಧಿಗಳನ್ನು ಪೂರ್ಣಗೊಳಿಸಿದ ನಂತರ ಭಕ್ತರು ಉಪವಾಸ ಮುರಿಯಬಹುದು. ಬಳಿಕ ಸಾತ್ವಿಕ ಆಹಾರ ಸೇವಿಸಬಹುದು.
ಪೂಜೆಯ ವೇಳೆ ಗಣೇಶನ ಈ ಮಂತ್ರಗಳನ್ನು ಪಠಿಸಿ
1. ಓಂ ಗಂ ಗಣಪತಯೇ ನಮಃ
2. ಓಂ ಶ್ರೀ ಗಣೇಶಯೇ ನಮಃ
3. ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ
(ಸೂಚನೆ-ಈ ಮೇಲಿನ ವಿಷಯಗಳನ್ನು ಅಂತರ್ಜಾಲದ ಮಾಹಿತಿ ಆಧಾರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪರಿಣಿತರಾದವರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications