ಗರ್ಭಿಣಿ ಪತ್ನಿಯರ ಮೇಲೆ ಕೈ ಮಾಡಿದ ಯೂಟ್ಯೂಬರ್ ಅರ್ಮಾನ್ ಮಲಿಕ್: ವಿಡಿಯೋ
ಈ ಕಾರಣಕ್ಕಾಗಿ ಯೂಟ್ಯೂಬರ್ ಅರ್ಮಾನ್ ಮಲಿಕ್ ತನ್ನ ಗರ್ಭಿಣಿ ಪತ್ನಿಯರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ.
ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್ ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಸೆಳೆಯುತ್ತಲೇ ಇರುತ್ತಾರೆ. ಅವರು ನಿರಂತರವಾಗಿ ವಿವಾದಗಳು ಮತ್ತು ಟ್ರೋಲ್‌ಗಳಿಗೆ ಒಳಗಾಗುತ್ತಲೇ ಇರುತ್ತಾರೆ. ಆದರೆ ಅವರು ಅವುಗಳಿಂದ ವಿಚಲಿತರಾಗುವುದಿಲ್ಲ. ಮತ್ತೊಮ್ಮೆ ಅವರು ತಮ್ಮ ಇಬ್ಬರು ಗರ್ಭಿಣಿ ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಅವರೊಂದಿಗಿನ ಇತ್ತೀಚಿನ ವೈರಲ್ ವಿಡಿಯೊದಿಂದಾಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಬೇಬಿ ಶವರ್ ಸಮಾರಂಭದ ಬಳಿಕ ವಿಡಿಯೊಯೊಂದರಲ್ಲಿ ಪಾಯಲ್ ಮತ್ತು ಕೃತಿಕಾ ಜಗಳವಾಡುವುದು ವೈರಲ್ ಆಗಿದೆ. ಇಬ್ಬರು ಗರ್ಭಿಣಿಯರು ತುಂಬಾ ಹಿಂಸಾತ್ಮಕವಾಗಿ ಜಗಳವಾಡಿದ್ದರಿಂದ ಅರ್ಮಾನ್ ಮಲಿಕ್ ಕೋಪಗೊಂಡಿದ್ದರು. ಈ ವೇಳೆ ಅರ್ಮಾನ್ ತನ್ನ ಇಬ್ಬರು ಹೆಂಡತಿಯರ ಮೇಲೆ ಕೈ ಎತ್ತುವ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಅರ್ಮಾನ್ ಮಲಿಕ್ ಅವರ ಇಬ್ಬರು ಹೆಂಡತಿಯರ ಮೇಲೆ ಕೈ ಮಾಡಿದ್ದಾರೆ. ಅವರು ಅವರ ಪತ್ನಿಯರ ಮೇಲೆ ಕೈ ಮಾಡುವ ವಿಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ ವಿಡಿಯೋದ ಅಸಲಿಯತ್ತೇ ಬೇರೆಯಾಗಿದೆ. ವಿಡಿಯೊದ ಕೊನೆಯಲ್ಲಿ ಯೂಟ್ಯೂಬರ್ ಕುಟುಂಬ ಪ್ರೇಕ್ಷಕರಿಗೆ ಎಲ್ಲವೂ ತಮಾಷೆಯಾಗಿ ಮಾಡಿರುವುದಾಗಿ ತಿಳಿಸುತ್ತದೆ.

ಅರ್ಮಾನ್ ಇತ್ತೀಚೆಗೆ ತನ್ನ ಗರ್ಭಿಣಿ ಪತ್ನಿಯರಾದ ಕೃತಿಕಾ ಮತ್ತು ಪಾಯಲ್ ಮಲಿಕ್ ಅವರಿಗೆ ಅದ್ದೂರಿ ಬೇಬಿ ಶವರ್ ಆಯೋಜಿಸಿದ್ದರು. ಕುಟುಂಬಸ್ಥರು ಸೀಮಂತ ಕಾರ್ಯಕ್ರಮವನ್ನು ಪ್ರೀತಿಯಿಂದ ಆಚರಿಸಿ ಸಂಭ್ರಮಿಸಿದ್ದಾರೆ. ಅರ್ಮಾನ್ ವಾಸ್ತವವಾಗಿ ತನ್ನ ಹೆಂಡತಿಯರಿಗಾಗಿ ಮೂರು ದಿನಗಳ ಸೀಮಂತ ಆಚರಣೆಯನ್ನು ಆಯೋಜಿಸಿದ್ದರು. ಮತ್ತೊಂದೆಡೆ ಕೃತಿಕಾ ಮತ್ತು ಪಾಯಲ್ ಅವರ ಗ್ರ್ಯಾಂಡ್ ಬೇಬಿ ಶವರ್ ಫೋಟೋ ಮತ್ತು ವಿಡಿಯೋಗಳನ್ನೂ ಹಂಚಿಕೊಂಡಿದ್ದಾರೆ.

ಅರ್ಮಾನ್ ಮಲಿಕ್ ಯಾರು?
ಹೈದರಾಬಾದ್ ಮೂಲದ ಯೂಟ್ಯೂಬರ್ ತನ್ನ ಅಭಿಮಾನಿಗಳಿಗೆ ಮನರಂಜನೆ ಣಿಡಲು ನಿಯಮಿತವಾಗಿ ವೀಡಿಯೊಗಳು ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಅವರು 2011 ರಲ್ಲಿ ಪಾಯಲ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಚಿರಾಯು ಮಲಿಕ್ ಎಂಬ ಮಗನಿದ್ದಾನೆ. ಅದೇ ವರ್ಷದ ನಂತರ, ಅರ್ಮಾನ್ ತನ್ನ ಮೊದಲ ಹೆಂಡತಿಯ ಆತ್ಮೀಯ ಸ್ನೇಹಿತೆ ಕೃತಿಕಾಳನ್ನು ವಿವಾಹವಾದರು.












Click it and Unblock the Notifications