ಮುಂದೊಂದು ಹಿಂದೊಂದು ಹುಡುಗಿ ಬೈಕ್ ಸ್ಟಂಟ್ ಮಾಡಿದವನ ಧಿಮಾಕು ನೋಡಿ

ಮುಂಬೈ ಏಪ್ರಿಲ್ 3: ಈಗಿನ ಕಾಲದ ಹುಡುಗರೇ ಹೀಗೆ.. ಕೈಯ್ಯಲ್ಲೊಂದು ಬೈಕು, ಓಡಿಸೋಕೊಂದು ಜೋಷು ಇದ್ದಬಿಟ್ಟರೆ ಮುಗಿತು. ರಸ್ತೆಯಲ್ಲಿ ಹೋಗೋ ಹುಡಿಗಿಯರನ್ನೂ ಕುಡಿಸಿಕೊಂಟು ಸ್ಟಂಟ್ ಮಾಡಿಬಿಡ್ತಾರೆ. ಹುಡುಗಿಯರಿಗೆ ಹುಡುಗರಷ್ಟೇ ಸ್ಟಂಟ್ ಧೈರ್ಯ ಇದ್ದುಬಿಟ್ಟರಂತೂ ಮುಗಿದೇ ಹೋಯ್ತು. ಅವರನ್ನು ಹಿಡಿಯುವವರೇ ಯಾರು ಇಲ್ಲ ಅಂದುಕೊಂಡು ಬಿಡ್ತಾರೆ. ಹೀಗೆ ನಡು ರಸ್ತೆಯಲ್ಲಿ ತಾನೊಬ್ಬನೇ ಅಲ್ಲದೇ ಮುಂದೊಂದು ಹಿಂದೊಂದು ಹುಡುಗಿಯರನ್ನು ಕೂರಿಸಿಕೊಂಡು ಸ್ಟಂಟ್ ಮಾಡಿದ ಧಿಮಾಕುಗೇಡಿಗೆ ಮುಂಬೈ ಪೊಲೀಸರು ಚಳಿ ಬಿಡಿಸಿದ್ದಾರೆ.

ಇಬ್ಬರು ಹುಡುಗಿಯರೊಂದಿಗೆ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 24 ವರ್ಷದ ಯುವಕನನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಆಂಟೋಪ್ ಹಿಲ್ ಮತ್ತು ವಡಾಲಾ ಟಿಟಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

Young man did a bike stunt with two girls - Video viral

ಆರೋಪಿ ಇಬ್ಬರು ಹುಡುಗಿಯರೊಂದಿಗೆ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪ್ರದೇಶದಲ್ಲಿ ಸಂಭವಿಸಿದೆ. ವಿಡಿಯೊ ವೈರಲ್ ಆದ ಬಳಿಕ ಮುಂಬೈ ಟ್ರಾಫಿಕ್ ಪೊಲೀಸರು ಯುವಕನ ಪತ್ತೆಗೆ ತಂಡವನ್ನು ರಚಿಸಿತ್ತು. ಈ ತಂಡ ಯುವಕನನ್ನು ಪತ್ತೆ ಮಾಡಿ ಆತನ ವಿರುದ್ಧ ಕ್ರಮ ಕೈಗೊಂಡಿದೆ. ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಪೋಲೀಸರ ಪ್ರಕಾರ, ಆತನನ್ನು ಭಾರತೀಯ ದಂಡ ಸಂಹಿತೆಯ (IPC) 308 (ಅಪರಾಧೀಯ ನರಹತ್ಯೆಯ ಪ್ರಯತ್ನ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

ಹೆಂಡತಿಯೊಂದಿಗೆ ಗಂಡ ಬೈಕ್ ಸ್ಟಂಟ್

ಇತ್ತೀಚಿಗೆ ಅಪಾಯಕಾರಿ ಬೈಕ್ ಸ್ಟಂಟ್ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕೆಲ ಪುಂಡರು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದಾರೆ. ಇಂತಹದ್ದೇ ಒಂದು ವಿಡಿಯೋದಲ್ಲಿ ಹಿಂದೊಮ್ಮೆ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ಜಾಲಿ ರೈಡ್ ವೇಳೆ ಅಪಾಯಕಾರಿ ಸ್ಟಂಟ್ ಮಾಡಿರುವುದು ಕಂಡು ಬಂದಿತ್ತು. ಈ ಅಪಾಯಕಾರಿ ಸಾಹಸ ಪ್ರದರ್ಶನದ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗಿತ್ತು. 'ನಿಜವಾದ ಬಾದ್‌ಶಾ ಇದ್ದಾನೆ' ಎಂಬ ಶೀರ್ಷಿಕೆಯೊಂದಿಗೆ ಘಂಟಾ ಹೆಸರಿನ ಇಂಟಾಗ್ರಾಮ್‌ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

Young man did a bike stunt with two girls - Video viral

ವೈರಲ್ ಕ್ಲಿಪ್‌ನಲ್ಲಿ ಪುರುಷನು ಅತ್ಯಂತ ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾನೆ. ಆದರೆ ಅವನ ಹೆಂಡತಿ ತನ್ನ ಘೂಂಗಟ್ ಜೊತೆ ಬೈಕ್‌ನಲ್ಲಿ ಅರಾಮದಾಯವಾಗಿ ಕುಳಿತುಕೊಳ್ಳುವುದನ್ನು ಕಾಣಬಹುದು.

14 ಜನರ ಮೂರು ಬೈಕ್‌ ಸ್ಟಂಟ್

ಈ ಹಿಂದೆ ಉತ್ತರ ಪ್ರದೇಶದ ಬರೇಲಿಯಲ್ಲಿ ಹಲವಾರು ವ್ಯಕ್ತಿಗಳು ಬೈಕ್‌ಗಳಲ್ಲಿ ಸ್ಟಂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೊದಲ್ಲಿ 14 ಜನರು ಮೂರು ಬೈಕ್‌ಗಳಲ್ಲಿ ಸವಾರಿ ಮಾಡುವುದನ್ನು ಕಾಣಬಹುದು. ಒಂದು ಬೈಕ್‌ನಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರು ಆರು ಜನ ಕುಳಿತಿದ್ದಾರೆ. ಇನ್ನೆರೆಡು ಬೈಕ್ ಅಲ್ಲಿ ತಲಾ ನಾಲ್ವರು ಕುಳಿತಿರುವುದು ಕಂಡು ಬಂದಿದೆ.

Young man did a bike stunt with two girls - Video viral

ಈ ಘಟನೆ ಬರೇಲಿಯ ಡಿಯೋರಾನಿಯಾ ಪಿಎಸ್ ಪ್ರದೇಶದಲ್ಲಿ ವರದಿಯಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು. ಇಂತಹ ಘಟನೆಗಳು ಪುನ: ಮರುಕಳಿಸದಂತೆ ತಡೆಯಲು ಬರೇಲಿಯ ಹಿರಿಯ ಪೊಲೀಸ್ ಅಧಿಕಾರಿ ಅಖಿಲೇಶ್ ಕುಮಾರ್ ಚೌರಾಸಿಯಾ ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+