year ender 2024: ಭಾರತದಲ್ಲಿ ಈ ವರ್ಷ ಇತಿಹಾಸ ಸೃಷ್ಟಿಸಿದ 5 ಮಹಿಳೆಯರು
ಮಹಿಳೆಯರು ಇಂದು ಆರ್ಥಿಕ, ರಾಜಕೀಯ, ಸಾಮಾಜಿಕ, ಕ್ರೀಡೆ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆಯ ಮೈಲುಗಲ್ಲು ಸಾಧಿಸಿದ್ದಾರೆ. ಈ ವರ್ಷ ಕೂಡ ದೇಶದ ಮಹಿಳೆಯರು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರು ಮಾಡಿದ ಸಾಧನೆ ಪ್ರಪಂಚದಾದ್ಯಂತ ಹೆಸರು ಮಾಡಿದೆ. ಹಾಗಾದರೆ 2024ರಲ್ಲಿ ದೇಶಕ್ಕೆ ಕೀರ್ತಿ ತಂದ ಮತ್ತು ಇತಿಹಾಸವನ್ನು ಸೃಷ್ಟಿಸಿದ ಭಾರತೀಯ ಮಹಿಳೆಯರ ಬಗ್ಗೆ ತಿಳಿದುಕೊಳ್ಳೋಣ.
ಮನು ಭಾಕರ್ (Manu Bhaker)
ಈ ವರ್ಷ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024ನಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರು ಅನೇಕ ಪದಕಗಳನ್ನು ಗೆದ್ದಿದ್ದಾರೆ. ಈ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ ಕೀರ್ತಿ ಮನು ಭಾಕರ್ ಅವರಿಗೆ ಸಲ್ಲುತ್ತದೆ. ಮನು ಭಾಕರ್ 22ನೇ ವಯಸ್ಸಿನಲ್ಲಿ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಕಂಚಿನ ಪದಕ ಗೆದ್ದ ಸಾಧಕಿ. ಮನು ಭಾಕರ್ ಅವರು ಈ ಐತಿಹಾಸಿಕ ವಿಜಯದ ಮೂಲಕ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.

ಅವನಿ ಲೇಖನಾ (Avani Lekhara)
ಭಾರತದ ರೈಫಲ್ ಶೂಟರ್ ಅವನಿ ಲೇಖರಾ ಪ್ಯಾರಾಲಿಂಪಿಕ್ ಗೇಮ್ಸ್ 2024ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಅವನಿ ಎರಡು ಪದಕಗಳನ್ನು ಗೆದ್ದು ಬೀಗಿದ್ದಾರೆ. ಅಲ್ಲದೆ ಅವನಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಪ್ಯಾರಾಲಿಂಪಿಕ್ ಮಹಿಳಾ ಆಟಗಾರ್ತಿ ಅವನಿ ಆಗಿದ್ದಾರೆ.

ನ್ಯಾನ್ಸಿ ತ್ಯಾಗಿ (Nancy Tyagi)
ಉತ್ತರ ಪ್ರದೇಶದ ಬಾಗ್ಪತ್-ಬರೌತ್ ಜಿಲ್ಲೆಯ ನಿವಾಸಿ ನ್ಯಾನ್ಸಿ ತ್ಯಾಗಿ ಫ್ಯಾಷನ್ ಪ್ರಭಾವಿಯಾಗಿದ್ದಾರೆ. ನ್ಯಾನ್ಸಿ ತ್ಯಾಗಿ 2024ರ 77ನೇ ಚಲನಚಿತ್ರೋತ್ಸವದಲ್ಲಿ ತಾನೇ ವಿನ್ಯಾಸಗೊಳಿಸಿ ಹೊಲಿದ ಗುಲಾಬಿ ಬಣ್ಣದ ಗೌನ್ ಮೂಲಕ ಪದಾರ್ಪಣೆ ಮಾಡಿದರು. ಈ ಗುಲಾಭಿ ಬಣ್ಣದ ರಫಲ್ಡ್ ಗೌನ್ 20 ಕೆಜಿ ತೂಗವಿದ್ದು, 1000 ಮೀಟರ್ ಫ್ಯಾಬ್ರಿಕ್‌ನಿಂದ ಮಾಡಲ್ಪಟ್ಟಿದೆ.

ರೆಡ್ ಕಾರ್ಪೆಟ್ ಮೇಲೆ ತನ್ನ ಕೈಯಿಂದ ಮಾಡಿದ ಉಡುಪನ್ನು ಧರಿಸಿದ್ದಕ್ಕಾಗಿ ಅವರು ಸಾಕಷ್ಟು ಪ್ರಶಂಸೆಯನ್ನು ಗಳಿಸಿದರು. ಈ ವರ್ಷ ಅವರ ಹೆಸರು ಫೋರ್ಬ್ಸ್ ಇಂಡಿಯಾ ಟಾಪ್ 100 ಡಿಜಿಟಲ್ ಸ್ಟಾರ್ಸ್ 2024 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ಉಡುಪುಗಳನ್ನು ವಿನ್ಯಾಸಗೊಳಿಸಲು ನ್ಯಾನ್ಸಿಗೆ ಅವಕಾಶವನ್ನು ನೀಡಿದ್ದಾರೆ.

ಮೋಹನ ಸಿಂಗ್ (Mohana Singh)
ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ಅವರು ವಾಯುಪಡೆಯ ತೇಜಸ್ ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋಹನ ಸಿಂಗ್ ಅವರಿಗೆ ಗುಜರಾತ್ ನ ನಲಿಯಾದಲ್ಲಿ ನಂ.18 ಫ್ಲೈಯಿಂಗ್ ಬುಲೆಟ್ಸ್ ಸ್ಕ್ವಾಡ್ರನ್ ನ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೋಹನ ಸಿಂಗ್ ಅವರು ಜೋಧ್‌ಪುರದಲ್ಲಿ ತರಂಗ್ ಶಕ್ತಿಯ ವ್ಯಾಯಾಮದ ಭಾಗವಾಗಿ ಮೂರು ಸೇವೆಗಳ ಮೂವರು ಉಪ ಮುಖ್ಯಸ್ಥರೊಂದಿಗೆ ಐತಿಹಾಸಿಕ ಯುದ್ಧ ವಿಮಾನವನ್ನು ಚಲಾಯಿಸಿದರು.

ಸಾಧನಾ ಸಕ್ಸೇನಾ (Sadhna Saxena Nair)
2024 ರಲ್ಲಿ ಲೆಫ್ಟಿನೆಂಟ್ ಜನರಲ್ ಸಾಧನಾ ಸಕ್ಸೇನಾ ನಾಯರ್ ವೈದ್ಯಕೀಯ ಸೇವೆಗಳ ಮೊದಲ ಮಹಿಳಾ ಡೈರೆಕ್ಟರ್ ಜನರಲ್ ಆದರು. ಅವರು ಜನರಲ್ ಹಾಸ್ಪಿಟಲ್ ಸರ್ವಿಸ್ (ಸಶಸ್ತ್ರ ಪಡೆಗಳು) ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಮತ್ತು ವೆಸ್ಟರ್ನ್ ಏರ್ ಕಮಾಂಡ್‌ನ ಪ್ರಧಾನ ವೈದ್ಯಕೀಯ ಅಧಿಕಾರಿಯಾದ ಮೊದಲ ಮಹಿಳೆಯಾಗಿದ್ದಾರೆ. ಇದರಿಂದಾಗಿ ಸಾಧನಾ ಸಕ್ಸೇನಾ ಅವರಿಗೆ ರಾಷ್ಟ್ರಪತಿಗಳಿಂದ ವಿಶಿಷ್ಟ ಸೇವಾ ಪದಕವನ್ನು ನೀಡಲಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications