ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year Ender 2022 : ಕಣಿವೆ ರಾಜ್ಯದಲ್ಲಿ ಹತ್ಯೆಯಾದ ಉಗ್ರರು ಎಷ್ಟು?

|
Google Oneindia Kannada News

ಭದ್ರತೆಯ ವಿಚಾರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. 2022ರಲ್ಲಿ ಭದ್ರತಾ ಪಡೆಗಳು ಹಲವು ಎನ್‌ಕೌಂಟರ್‌ ನಡೆಸಿ, ಉಗ್ರರನ್ನು ಕೊಂದು ಹಾಕಿದೆ. ಕಾಣಿವೆ ರಾಜ್ಯದಲ್ಲಿ ನಿಧಾನವಾಗಿ ಶಾಂತಿ, ಸುವ್ಯವಸ್ಥೆ ಕಂಡುಬರುತ್ತಿದೆ.

ಈ ವರ್ಷ ಸೇನೆ ಮತ್ತು ಪೊಲೀಸರು ತಳಮಟ್ಟದಲ್ಲಿ ಅಪಾರ ಹಿಡಿತ ಸಾಧಿಸಿದ್ದಾರೆ. ಅಂತರಾಷ್ಟ್ರೀಯ ಗಡಿಯ ಮೂಲಕ ಒಳನುಸುಳುವ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿದ್ದು, ಅದು ಸುದ್ದಿಯೂ ಆಗಿದೆ.

Year Ender 2022: ಸಾಮಾಜಿಕ ಸಂದೇಶ ಸಾರಿದ ಟಾಪ್-5 ಸಿನಿಮಾಗಳು Year Ender 2022: ಸಾಮಾಜಿಕ ಸಂದೇಶ ಸಾರಿದ ಟಾಪ್-5 ಸಿನಿಮಾಗಳು

ಡಿಜಿಪಿ ದಿಲ್‌ಬಾಗ್ ಸಿಂಗ್ ಈ ವರ್ಷ ನಡೆದ ಎನ್‌ಕೌಂಟರ್‌ಗಳ ಬಗ್ಗೆ ಮಾಹಿತಿ ನೀಡಿದ್ದಾರೆ, "2022ರಲ್ಲಿ 56 ವಿದೇಶಿ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಉಗ್ರ ಸಂಘಟನೆ ಸೇರಿದ್ದ 102 ಸ್ಥಳೀಯ ಯುವಕರನ್ನು ಸಹ ಕೊಂದು ಹಾಕಲಾಗಿದೆ" ಎಂದು ಹೇಳಿದ್ದಾರೆ.

Year end 2022; ಕರ್ನಾಟಕಕ್ಕೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುYear end 2022; ಕರ್ನಾಟಕಕ್ಕೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

Year end 2022 In Jammu And Kashmir 56 Terrorists Killed

"ಭಯೋತ್ಪಾದನೆ ಮಾರ್ಗ ಆಯ್ಕೆ ಮಾಡಿಕೊಳ್ಳುವ ಯುವಕರಿಗೆ ಹೆಚ್ಚು ದಿನ ಬದುಕುವ ಅವಕಾಶವಿಲ್ಲ. ಶಾಂತಿ ಮತ್ತು ಸಹಭಾಳ್ವೆಯ ಮಾರ್ಗವನ್ನು ಯುವಕರು ಆಯ್ಕೆ ಮಾಡಿಕೊಳ್ಳಬೇಕು. ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ 86 ಜನರನ್ನು ಈ ವರ್ಷ ಹತ್ಯೆ ಮಾಡಲಾಗಿದೆ" ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.

Year Ender 2022: ಸಿನಿರಂಗದಿಂದ ಮರೆಯಾದ ಅಮೂಲ್ಯ ರತ್ನಗಳು Year Ender 2022: ಸಿನಿರಂಗದಿಂದ ಮರೆಯಾದ ಅಮೂಲ್ಯ ರತ್ನಗಳು

ಆನ್‌ಲೈನ್‌ನಲ್ಲಿನ ಮಾಹಿತಿ; 2022ರಲ್ಲಿ ಉಗ್ರರು ಆನ್‌ಲೈನ್‌ನಲ್ಲಿ ತಮ್ಮ ಹೋರಾಟದ ಸ್ವರೂಪ ಸ್ವಲ್ಪ ಬದಲಿಸಿದ್ದಾರೆ. 'ಕಾಶ್ಮೀರ ಫೈಟ್' ಎಂಬ ಹೊಸ ಬ್ಲಾಗ್ ರಚನೆಯಾಗಿದೆ. ಲಷ್ಕರ್-ಎ-ತೋಯ್ಬಾದಿಂದ ಬೇರೆಯಾದ ಬಣ ಇದನ್ನು ಬರೆಯುತ್ತಿದೆ ಎಂದು ಅಂದಾಜಿಸಲಾಗಿದೆ.

ತನ್ನ ಬ್ಲಾಗ್‌ನಲ್ಲಿ ಪತ್ರಕರ್ತರು, ಪೊಲೀಸರು ತನ್ನ ಗುರಿ ಎಂದು ಹೇಳಿಕೊಂಡಿದೆ. ಕೆಲವು ಕಾಶ್ಮೀರಿ ಪಂಡಿತರು ಸಹ ನಮ್ಮ ಗುರಿಯಾಗಿದ್ದಾರೆ ಎಂದು ಹೇಳಿದೆ. ಆದರೆ ಕಣಿವೆ ರಾಜ್ಯದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸಹ ಬ್ಲಾಗ್ ಬರಹದಲ್ಲಿ ತಿಳಿಸಲಾಗಿದೆ. ಈ ಬ್ಲಾಗ್ ವಿರುದ್ಧವೂ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

Year end 2022 In Jammu And Kashmir 56 Terrorists Killed

ಟರ್ಕಿಯಲ್ಲಿರುವ ಮುಖ್ತಾರ್ ಬಾಬಾ ಈ ಬ್ಲಾಗ್ ನಿರ್ವಹಣೆ ಮಾಡುತ್ತಿದ್ದಾನೆ. ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಇದಕ್ಕೆ ವಿಷಯಗಳನ್ನು ನೀಡಲಾಗುತ್ತದೆ. ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ಬಯಸದ ಕೆಲವು ಸಂಘಟನೆಗಳು ಸಹ ಇದಕ್ಕೆ ಬೆಂಬಲವನ್ನು ನೀಡುತ್ತಿವೆ.

ನಿರ್ದಿಷ್ಟ ಸಮುದಾಯದ ಮೇಲೆ ದಾಳಿ; 2021ರ ಜನವರಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇದರಲ್ಲಿ ಕಾಶ್ಮೀರಿ ಪಂಡಿತರು, ಇತರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರು ಸೇರಿದ್ದಾರೆ.

ಅಕ್ಟೋಬರ್‌ನಲ್ಲಿ 5 ದಿನದಲ್ಲಿ 7 ಜನಸಾಮಾನ್ಯರನ್ನು ಹತ್ಯೆ ಮಾಡಲಾಗಿತ್ತು. ಇವರಲ್ಲಿ ಕಾಶ್ಮೀರಿ ಪಂಡಿತರು, ಸಿಖ್ಖರು, ವಲಸೆ ಕಾರ್ಮಿಕರು ಸೇರಿದ್ದರು. 36 ವರ್ಷದ ತಹಶೀಲ್ದಾರ್ ರಾಹುಲ್ ಭಟ್ ಹತ್ಯೆ ಸಹ ಇದೇ ವರ್ಷ ನಡೆದಿದೆ.

ಕೇಂದ್ರ ಗೃಹ ಸಚಿವಾಲಯ ತನ್ನ ವಾರ್ಷಿಕ ವರದಿಯಲ್ಲಿ ಅಂತರಾಷ್ಟ್ರೀಯ ಗಡಿಯಿಂದ ಒಳನುಸುಳುವ 73 ಪ್ರಯತ್ನಗಳನ್ನು ತಡೆಯಲಾಗಿದೆ ಎಂದು ಹೇಳಿದೆ. ಕಳೆದ 5 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತಿ ಕಡಿಮೆ ಎಂದು ತಿಳಿಸಿದೆ.

2017ರಲ್ಲಿ 419 ಇಂತಹ ಪ್ರಕರಣ ನಡೆದಿತ್ತು. ಮುಂದಿನ ವರ್ಷ ಅದು 328ಕ್ಕೆ ಕಡಿಮೆಯಾಗಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸೇನೆ ದಾಳಿಗಳಿಗೆ ತಕ್ಕದಾದ ಪ್ರತ್ಯುತ್ತರ ನೀಡುತ್ತಿದೆ ಎಂದು ಸಚಿವಾಲಯದ ವರದಿ ಹೇಳಿದೆ.

ಒಳನುಸುಳುವ ಪ್ರಯತ್ನ ತಡೆಯುವುದು. ಉಗ್ರರ ಹತ್ಯೆ, ಸೇನೆಯ ಕಾರ್ಯಾಚರಣೆಯಿಂದ ಉಗ್ರರ ಗುಂಪುಗಳು ಆತಂಕಗೊಂಡಿವೆ. 2023 ಭಯೋತ್ಪಾದಕ ದಾಳಿ ರಹಿತ ವರ್ಷವಾಗುವ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.

English summary
Year end 2022; The security situation in Jammu and Kashmir has been a mixed one in 2022. 56 terrorists had been killed by the security forces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X