• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಪಾರ್ಶ್ವವಾಯು ದಿನ 2021: ಲಕ್ಷಣಗಳು, ತಡೆಯುವ ಕ್ರಮಗಳು

|
Google Oneindia Kannada News

ಜಗತ್ತಿನಾದ್ಯಂತ ಕಿಲ್ಲರ್ ಡಿಸೀಸ್ ಎಂದು ಕರೆಸಿಕೊಂಡಿರುವ ಪಾರ್ಶ್ವವಾಯುವಿನ ಬಗ್ಗೆ ಹಲವು ಮಿಥ್ಯಗಳು ಕೂಡ ಇವೆ. ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನಾಗಿ ಆಚರಿಸಲಾಗುತ್ತದೆ.

ಮಿಥ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆತರೆ ಪಾರ್ಶ್ವವಾಯುವಿಗೆ ತುತ್ತಾದವರು ಬದುಕುಳಿಯುತ್ತಾರೆ ಎನ್ನುವ ಸತ್ಯವನ್ನು ತಿಳಿಸಲಾಗುತ್ತದೆ.

ಪಾರ್ಶ್ವವಾಯು ಒಂದು ಗಂಭೀರ ಅನಾರೋಗ್ಯ ಸ್ಥಿತಿ. ಪ್ರಪಂಚದಾದ್ಯಂತ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣಗಳಲ್ಲೂ ಒಂದು. ಇದು ಆತಂಕಕಾರಿ ವಿಚಾರವಾಗಿದ್ದು, ವಿಶ್ವದಾದ್ಯಂತ ಜನಜಾಗೃತಿಯ ಅವಶ್ಯಕತೆ ಇದೆ.

ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕವಾಗಿ ವಿಶ್ವದಾದ್ಯಂತ 15 ಮಿಲಿಯನ್ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದೆ. ಈ ಪೈಕಿ 5 ಮಿಲಿಯನ್ ಜನರು ಸಾವನ್ನಪ್ಪಿದರೆ, ಇನ್ನೂ 5 ಮಿಲಿಯನ್ ಜನರು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ.

40 ವರ್ಷದೊಳಗಿನ ಜನರಲ್ಲಿ ಪಾರ್ಶ್ವವಾಯು ಅಸಾಮಾನ್ಯವಾಗಿದೆ. ಸುಮಾರು ಶೇ. 8ರಷ್ಟು ಮಕ್ಕಳಲ್ಲಿ ಪಾರ್ಶ್ವವಾಯು ಸಂಭವಿಸುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡ ಮತ್ತು ತಂಬಾಕು ಸೇವನೆಯು ಅತ್ಯಂತ ಅಪಾಯಕಾರಿ ಅಂಶವಾಗಿದ್ದು, ಇದನ್ನು ನಿಯಂತ್ರಿಸಿದರೆ ಸಮಸ್ಯೆ ತೊಲಗಿಸಬಹುದಾಗಿದೆ. ರಕ್ತದೊತ್ತಡ ಮತ್ತು ಮಾದಕ ವ್ಯಸನ ತ್ಯಜಿಸಿದರೆ ಪಾರ್ಶ್ವವಾಯು ಮುಕ್ತವಾಗಿ ಸ್ವಾಸ್ಥ್ಯ ಸಮಾಜ ಸೃಷ್ಟಿಯಾಗುತ್ತದೆ.

ಮೆದುಳು ಸ್ಟ್ರೋಕ್ ಎಂದರೇನು?:
ಪಾರ್ಶ್ವವಾಯುವನ್ನು ಮೆದುಳು ಸ್ಟ್ರೋಕ್ ಎಂದೂ ಕರೆಯಲಾಗುತ್ತದೆ. ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಅಥವಾ ಮೆದುಳಿನಲ್ಲಿನ ರಕ್ತನಾಳ ಒಡೆದಾಗ ಬ್ರೈನ್‌ ಅಟ್ಯಾಕ್ ಸಂಭವಿಸುತ್ತದೆ. ಈ ವೇಳೆ ಮೆದುಳಿನ ಭಾಗಗಳು ಹಾನಿಗೊಳಗಾಗುತ್ತವೆ. ಪಾರ್ಶ್ವವಾಯು ಶಾಶ್ವತ ಮೆದುಳಿನ ಹಾನಿ, ದೀರ್ಘಾವಧಿ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು ಎಂದು ಸೆಂಟರ್​ ಫಾರ್​​ ಡಿಸೀಸ್​ ಕಂಟ್ರೋಲ್​​ ಆ್ಯಂಡ್​ ಪ್ರಿವೆಂಶನ್ಸ್​ (CDC) ಹೇಳಿದೆ.

ವಿಧಗಳೇನು?
ರಕ್ತಕೊರತೆಯ ಸ್ಟ್ರೋಕ್: ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸಂಚಲನೆ ಆಗದಿದ್ದಾಗ ರಕ್ತಕೊರತೆಯ ಸ್ಟ್ರೋಕ್ ಸಂಭವಿಸುತ್ತದೆ. ಪ್ಲೇಕ್ ಎಂದು ಕರೆಯಲ್ಪಡುವ ಕೊಬ್ಬು ರಕ್ತಸಂಚಾರಕ್ಕೆ ಅಡೆತಡೆ ಉಂಟುಮಾಡಬಹುದು.

ಹೆಮೊರಾಜಿಕ್ ಸ್ಟ್ರೋಕ್: ಮೆದುಳಿನಲ್ಲಿ ರಕ್ತನಾಳ ಸಿಡಿದಾಗ/ಒಡೆದಾಗ ಹೆಮೊರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.

ಕಾರಣಗಳೇನು?: ಸಕ್ಕರೆ ಕಾಯಿಲೆ, ಅತಿ ರಕ್ತದೊತ್ತಡ ಮತ್ತು ಕೊಬ್ಬಿನಂಶಗಳು ಸ್ಟ್ರೋಕ್‌ಗೆ ಪ್ರಮುಖ ಕಾರಣಗಳಾಗಿವೆ. ಈ ಮೂರು ಅಂಶಗಳನ್ನು ಹೆಚ್ಚಿಸುವ ಧೂಮ್ರಪಾನ, ಮದ್ಯವ್ಯಸನ, ಡ್ರಗ್ಸ್‌ ಹಾಗೂ ಒತ್ತಡಯುಕ್ತ ಜೀವನಶೈಲಿ, ಕೊಬ್ಬಿನ ಆಹಾರ ಸೇವನೆ ಎರಡನೇ ಕಾರಣಗಳು.

ಸ್ಟ್ರೋಕ್​ ತಡೆಗಟ್ಟುವ ಕ್ರಮಗಳಿವು..
ಪಾರ್ಶ್ವವಾಯು ತಡೆಗಟ್ಟುವ ಅನೇಕ ಕ್ರಮಗಳು ಹೃದ್ರೋಗವನ್ನು ತಡೆಗಟ್ಟುವ ರೀತಿಯೇ ಇರುತ್ತವೆ.

*ತಂಬಾಕು ಸೇವನೆ ತ್ಯಜಿಸುವುದು.
*ಮಧುಮೇಹ ನಿಯಂತ್ರಿಸುವುದು.
*ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು.
*ಅಧಿಕ ರಕ್ತದೊತ್ತಡ ನಿಯಂತ್ರಣ
*ಆಹಾರದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವುದು.
*ಹಣ್ಣುಗಳು ಮತ್ತು ತರಕಾರಿಗಳ ಹೆಚ್ಚು ಸೇವನೆ.
*ನಿಯಮಿತವಾಗಿ ವ್ಯಾಯಾಮ ಮಾಡುವುದು.
*ಆಲ್ಕೋಹಾಲ್ ಮಿತವಾಗಿ ಸೇವನೆ.

ಲಕ್ಷಣಗಳು ಯಾವುವು?
ಗೊಂದಲ, ಮಾತನಾಡಲು ಕಷ್ಟ ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ತೊಂದರೆ ಆಗುವುದು, ಕಣ್ಣುಗಳಲ್ಲಿ ಸಮಸ್ಯೆ, ತಲೆತಿರುಗುವಿಕೆ, ಯಾವುದೇ ಕಾರಣವಿಲ್ಲದೆ ತೀವ್ರ ತಲೆನೋವು . ಮುಖದಲ್ಲಿ ಬದಲಾವಣೆ ಅಥವಾ ಸುಕ್ಕುಗಟ್ಟುವಿಕೆ. ತೋಳಿನ ಬಲ ಕುಂದುವಿಕೆ. ನಿಶ್ಯಕ್ತಿ. ಮಾತನಾಡಲು ತೊಂದರೆ ಆಗುವುದು. ಮುಖ, ತೋಳು, ಕಾಲಿನ ಬಲ ಕ್ಷೀಣಿಸುವುದು. ಅದರಲ್ಲೂ ದೇಹದ ಒಂದು ಬದಿಯ ಅಂಗಾಗದ ಬಲ ಕ್ಷೀಣಿಸುವುದು ಮೊದಲಾದವು.

English summary
World Stroke Day is celebrated on October 29, every year to raise awareness on the serious nature and high rates of stroke and talk about ways in which we can reduce the burden of stroke through better public awareness of the risk factors and signs of stroke.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion