Airbag jeans: ವಿಶ್ವದ ಮೊದಲ ಏರ್‌ಬ್ಯಾಗ್ ಜೀನ್ಸ್ ಘೋಷಣೆ, ಬೆಲೆ, ತೂಕದ ವಿವರಗಳು ಇಲ್ಲಿವೆ
ಏರ್ ಬ್ಯಾಗ್ ಅಳವಡಿಸಿರುವ ಈ ಜೀನ್ಸ್ ಸಾಮಾನ್ಯ ಪ್ಯಾಂಟ್ ಗಳಂತೆಯೇ ಇದ್ದರೂ ಅದರಲ್ಲಿ ವಿಶೇಷವಾದ ಬಟ್ಟೆಯನ್ನು ಬಳಸಲಾಗಿದೆ.
ಅಪಘಾತ ಪ್ರಕರಣಗಳಲ್ಲಿ ಹೆಚ್ಚು ಸಿಲುಕುವ ವಾಹನ ಬೈಕ್. ಸಾಮಾನ್ಯವಾಗಿ, ಕಾರು ಚಾಲನೆ ಮಾಡುವಾಗ ಅಪಘಾತ ಸಂಭವಿಸಿದರೆ, ಪ್ರಯಾಣಿಕರು ಮತ್ತು ಕಾರಿನೊಳಗೆ ಕುಳಿತಿರುವ ಚಾಲಕ ಹೆಚ್ಚಿನ ಮಟ್ಟಿಗೆ ಸುರಕ್ಷಿತವಾಗಿರುತ್ತಾರೆ. ಆದರೆ ದ್ವಿಚಕ್ರ ವಾಹನ ಸವಾರರ ಅಪಘಾತದಲ್ಲಿ ಹೆಚ್ಚಿನ ಹಾನಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಸ್ವೀಡಿಷ್ ಕಂಪನಿಯೊಂದು ಬೈಕ್ ಸವಾರರಿಗಾಗಿ ಏರ್ ಬ್ಯಾಗ್ ಜೀನ್ಸ್ ಅನ್ನು ಬಿಡುಗಡೆ ಮಾಡಿದೆ.
What do you think of Airbag jeans? pic.twitter.com/2LW2wMrJES
— Dr. Kash Sirinanda (@kashthefuturist) February 19, 2023
ಹೌದು, ಬೈಕ್ ಓಡಿಸುವಾಗ ಸುರಕ್ಷತೆಯೇ ದೊಡ್ಡ ಕಾಳಜಿ, ಕಾರುಗಳು ಏರ್‌ಬ್ಯಾಗ್‌ಗಳಂತಹ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ ಬೈಕ್‌ಗಳಿಗೆ ಏರ್‌ಬ್ಯಾಗ್‌ಗಳನ್ನು ಫಿಕ್ಸ್ ಮಾಡಲು ಆಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಸ್ವೀಡಿಷ್ ಕಂಪನಿಯೊಂದು ಬೈಕ್ ಚಾಲಕರಿಗಾಗಿ ಏರ್ ಬ್ಯಾಗ್ ಜೀನ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಜೀನ್ಸ್ ಯಾವುದೇ ತುರ್ತು ಅಥವಾ ಅಪಘಾತದ ಸಮಯದಲ್ಲಿ ಚಾಲಕನ ಸುರಕ್ಷತೆಯನ್ನು ಖಾತರಿಪಡಿಸುತ್ತದೆ.

ಸ್ವೀಡಿಶ್ ಬ್ರ್ಯಾಂಡ್ ಮೊಟರ್ ಸೈಕಲ್ ಒಂದು ಜೋಡಿ ಜೀನ್ಸ್ ಅನ್ನು ವಿನ್ಯಾಸಗೊಳಿಸಿದ್ದು ಅದು ಏರ್‌ಬ್ಯಾಗ್ ವೈಶಿಷ್ಟ್ಯವನ್ನು ಹೊಂದಿದೆ. ಅಪಘಾತದ ಸಂದರ್ಭದಲ್ಲಿ ದೇಹದ ಕೆಳಭಾಗಕ್ಕೆ ರಕ್ಷಣೆ ನೀಡಲು ಬೈಕ್ ಸವಾರ ಕೆಳಗೆ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಈ ಜೀನ್ಸ್ ಊದಿಕೊಳ್ಳುತ್ತದೆ. ಈ ಮೂಲಕ ಬೈಕ್ ಸವಾರ ಹೆಚ್ಚಿನ ಹಾನಿಯಿಂದ ತಪ್ಪಿಸಿಕೊಳ್ಳಬಹುದು.
ಏರ್ ಬ್ಯಾಗ್ ಅಳವಡಿಸಿರುವ ಈ ಜೀನ್ಸ್ ಸಾಮಾನ್ಯ ಪ್ಯಾಂಟ್ ಗಳಂತೆಯೇ ಇದ್ದರೂ ಅದರಲ್ಲಿ ವಿಶೇಷವಾದ ಬಟ್ಟೆಯನ್ನು ಬಳಸಲಾಗಿದೆ. ಧರಿಸುವಾಗ ಉತ್ತಮ ರಕ್ಷಣೆಯನ್ನು ಒದಗಿಸುವಾಗ ಇದು ದೇಹಕ್ಕೆ ಆರಾಮದಾಯಕ ಕೂಡ.
ಮೊದಲನೆಯದಾಗಿ, ಈ ಜೀನ್ಸ್‌ನಲ್ಲಿ CO2 (ಕಾರ್ಬನ್ ಡೈಆಕ್ಸೈಡ್) ಕಾರ್ಟ್ರಿಡ್ಜ್ ಅನ್ನು ನೀಡಲಾಗಿದೆ. ಹೀಗಾಗಿ ಒಮ್ಮೆ ಬಳಸಿದ ನಂತರ ಅದನ್ನು ಮತ್ತೆ ಬದಲಾಯಿಸಬೇಕಾಗುತ್ತದೆ.

*ಈ ಏರ್‌ಬ್ಯಾಗ್ ಜೀನ್ಸ್ ಹೇಗೆ ಕೆಲಸ ಮಾಡುತ್ತದೆ?*
ಈ ಜೀನ್ಸ್ ಹೇಗೆ ಕೆಲಸ ಮಾಡುತ್ತದೆ ಎಂದರೆ, ಜೀನ್ಸ್ ಧರಿಸಿದ ನಂತರ, ಅದರಲ್ಲಿ ನೀಡಲಾದ ಸ್ಟ್ರಿಪ್ ಅನ್ನು ಶಾಕರ್, ಫ್ರೇಮ್ ಅಥವಾ ಫುಟ್‌ರೆಸ್ಟ್ ಮುಂತಾದ ಬೈಕ್‌ನ ಯಾವುದೇ ಭಾಗಕ್ಕೆ ಕಟ್ಟಬೇಕು. ಬೈಕ್ ಸವಾರ ಚಾಲನೆ ಮಾಡುವಾಗ ಮತ್ತು ಅಪಘಾತದಿಂದ ಕೆಳಗೆ ಬಿದ್ದ ತಕ್ಷಣವೇ, ಸ್ಟ್ರಿಪ್ ಎಲೆದು ಜೀನ್ಸ್ ಊದಿಕೊಳ್ಳುತ್ತದೆ. ಮೊಣಕಾಲುಗಳ ಸುರಕ್ಷತೆಯನ್ನು ಸುಧಾರಿಸಲು, ಕಂಪನಿಯು ಈ ಏರ್‌ಬ್ಯಾಗ್‌ನಲ್ಲಿ ವಿಶೇಷ ಮೊಣಕಾಲು ಪ್ರೊಟೆಕ್ಟರ್‌ಗಳನ್ನು ಬಳಸಿದೆ.
ಏರ್‌ಬ್ಯಾಗ್ ಜೀನ್ಸ್ ಅನ್ನು ಎರಡು ಭಾಗಗಳಲ್ಲಿ ತಯಾರಿಸಲಾಗಿದ್ದು, ಮೊದಲ ಭಾಗವು ನಾವು ಬಳಸಿದಂತೆ ಸಾಮಾನ್ಯ, ಹಿಗ್ಗಿಸುವ ಮತ್ತು ಗಾಳಿಯಾಡುವ ಜೀನ್ಸ್ ಆಗಿದೆ ಅದರ ಫ್ಯಾಬ್ರಿಕ್ ಸ್ವಲ್ಪ ವಿಭಿನ್ನವಾಗಿದೆ. ಎರಡನೇ ಭಾಗವು ಏರ್‌ಬ್ಯಾಗ್ ಮಾಡ್ಯೂಲ್ ಆಗಿದೆ. ಇದನ್ನು ಜೀನ್ಸ್ ಒಳಗೆ ಇರಿಸಲಾಗುತ್ತದೆ. ಜೀನ್ಸ್ ಅನ್ನು ತೊಳೆಯಲು, ಏರ್‌ಬ್ಯಾಗ್ ಮಾಡ್ಯೂಲ್ ಅನ್ನು ಹೊರತೆಗೆಯಬೇಕು, ನಂತರ ಅದನ್ನು ಸಾಮಾನ್ಯ ಡೆನಿಮ್ ಜೀನ್ಸ್‌ನಂತೆ ತೊಳೆಯಬಹುದು.
*ಈ ಏರ್‌ಬ್ಯಾಗ್ ಜೀನ್ಸ್‌ನ ತೂಕ ಮತ್ತು ಬೆಲೆ ಎಷ್ಟು?*
ಏರ್‌ಬ್ಯಾಗ್ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸರಿಸುಮಾರು 88 ಪೌಂಡ್‌ಗಳ (40 ಕೆಜಿ) ಬಲದ ಅಗತ್ಯವಿದೆ. ಇನ್ನು, ಇದರ ಬೆಲೆಯನ್ನು 499 ಡಾಲರ್‌ಗೆ ನಿಗದಿಪಡಿಸಲಾಗಿದೆ. ಭಾರತೀಯ ರೂಪಾಯಿಗೆ ಪರಿವರ್ತಿಸಿದರೇ ಸುಮಾರು 41,317 ರೂ.ಪಾಯಿಯಾಗಲಿದೆ. ಕಂಪನಿಯು ಈ ಏರ್ ಬ್ಯಾಗ್ ಜೀನ್ಸ್ ಅನ್ನು ಮುಂದಿನ ತಿಂಗಳಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ . ಏರ್ ಬ್ಯಾಗ್ ಜೀನ್ಸ್ ಕಪ್ಪು ಮತ್ತು ನೀಲಿ ಎರಡು ಬಣ್ಣಗಳಲ್ಲಿ ಲಭ್ಯವಿದೆ.












Click it and Unblock the Notifications