World Heritage Day 2022: ವಿಶ್ವ ಪರಂಪರೆ ದಿನದ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಸ್ಮಾರಕಗಳ ಇತಿಹಾಸ, ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕ ದಿನ ಅಥವಾ ವಿಶ್ವ ಪರಂಪರೆ ದಿನ ಎಂದು ಆಚರಣೆ ಮಾಡಲಾಗುತ್ತದೆ.
ಈ ವಿಶೇಷ ದಿನವು ವಿಶ್ವದಾದ್ಯಂತ ಇರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣ ಗಳನ್ನು ರಕ್ಷಿಸಿ ಕಾಪಾಡುವ ಉದ್ದೇಶದಿಂದ ಪಾರಂಪರಿಕ ದಿನ ಆಚರಣೆ ಮಾಡಲಾಗುತ್ತದೆ. ನಮ್ಮ ಪರಂಪರೆಯನ್ನು ಮುಂದುವರಿಸಲು ಮತ್ತು ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ಯುವ ಪೀಳಿಗೆಗೆ ಮಹತ್ವದ ಸಂದೇಶವನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು, ಭೂಗೋಳಶಾಸ್ತ್ರಜ್ಞರು, ಸಿವಿಲ್ ಇಂಜಿನಿಯರ್‌ಗಳು, ಕಲಾವಿದರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರು, ಪರಂಪರೆಯನ್ನು ಸಂರಕ್ಷಿಸಲು ಕೊಡುಗೆ ನೀಡುವ ಎಲ್ಲಾ ಜನರ ಪ್ರಯತ್ನಗಳನ್ನು ಈ ದಿನದಂದು ಗುರುತಿಸಲಾಗುತ್ತದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) 167 ದೇಶಗಳಲ್ಲಿ ಒಟ್ಟು 1155 ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗೊತ್ತುಪಡಿಸಿದೆ. ಹಾಗಾದರೆ ಈ ದಿನದ ಉದ್ದೇಶವೇನು, ಇದರ ಮಹತ್ವವೇನು, ಇತಿಹಾಸವೇನು ಎಂದು ತಿಳಿಯಲು ಮುಂದ ಓದಿ...

ವಿಶ್ವ ಪಾರಂಪರಿಕ ದಿನ: ಥೀಮ್
ಪ್ರತಿ ವರ್ಷವು ವಿಶ್ವ ಪಾರಂಪರಿಕ ದಿನದ ಥೀಮ್ ಬೇರೆ ಬೇರೆಯೇ ಆಗಿರುತ್ತದೆ. 20220ರಲ್ಲಿ ವಿಶ್ವ ಪಾರಂಪರಿಕ ದಿನದ ಥೀಮ್ ಪರಸ್ಪರ ಸಂಸ್ಕೃತಿ ಹಂಚಿಕೊಳ್ಳಿ, ಪರಂಪರೆ ಹಂಚಿಕೊಳ್ಳಿ, ಜವಾಬ್ದಾರಿ ಹಂಚಿಕೊಳ್ಳಿ ಎಂಬುದಾಗಿತ್ತು. ಈ ವರ್ಷ ಮುಕ್ತ, ರಚನಾತ್ಮಕ ಮತ್ತು ಇಂಟರ್ಜೆನೆರೇಶನಲ್ ಸಂವಾದಗಳ ಮೂಲಕ "ಪರಂಪರೆ ಮತ್ತು ಹವಾಮಾನ" ಎಂಬ ವಿಷಯದ ಅಡಿಯಲ್ಲಿ ದಿನವನ್ನು ಸಮರ್ಪಿಸಲಾಗುತ್ತದೆ.

ವಿಶ್ವ ಪರಂಪರೆ ದಿನ: ಇತಿಹಾಸ
1982 ರಲ್ಲಿ, ಸ್ಮಾರಕಗಳು ಮತ್ತು ತಾಣಗಳ ಇಂಟರ್ನ್ಯಾಷನಲ್ ಕೌನ್ಸಿಲ್ (ICOMOS) ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವಾಗಿ ಆಚರಿಸಬೇಕೆಂದು ಪ್ರಸ್ತಾಪ ಮಾಡಿದೆ. ನಂತರ, ದಿನಾಂಕವನ್ನು ಯುನೆಸ್ಕೋ 1983 ರಲ್ಲಿ 22 ನೇ ಸಾಮಾನ್ಯ ಸಮ್ಮೇಳನದಲ್ಲಿ ಅನುಮೋದನೆ ಮಾಡಿತು. ಇದು ಸಾಂಸ್ಕೃತಿಕ ಪರಂಪರೆ ಮತ್ತು ಸ್ಮಾರಕಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸುವ ಮತ್ತು ಅವುಗಳನ್ನು ಸಂರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ, ಈ ದಿನವನ್ನು ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ದಿನ ಎಂದೂ ಕರೆಯಲಾಗುತ್ತದೆ.

ವಿಶ್ವ ಪರಂಪರೆಯ ದಿನ: ಮಹತ್ವ
ಪ್ರಾಚೀನ ಕಟ್ಟಡಗಳು ಮತ್ತು ಸ್ಮಾರಕಗಳು ಮಾನವ ಜನಾಂಗ ಮತ್ತು ಜಗತ್ತಿಗೆ ಆಸ್ತಿ ಎಂದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಪೂರ್ವಜರು ನಮಗಾಗಿ ಹಲವಾರು ಪಾರಂಪರಿಕ ನೆಲೆಯನ್ನು ಬಿಟ್ಟುಹೋಗಿದ್ದಾರೆ. ವಿಶ್ವ ಪರಂಪರೆಯ ದಿನವು ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ಶ್ರೀಮಂತ ಪರಂಪರೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ದಿನವಾಗಿದೆ. ದಿನದ ಗುರಿ ಮತ್ತು ಮಹತ್ವವು ಕೇವಲ ವಿವಿಧ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಮುದಾಯದ ಸಾಂಸ್ಕೃತಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರಲ್ಲಿಯೂ ಪಾತ್ರವಹಿಸುತ್ತದೆ.

ವಿಶ್ವದ, ಭಾರತದ ಪ್ರಮುಖ ಪಾರಂಪರಿಕ ತಾಣಗಳು ಯಾವುದು?
ವಿಶ್ವದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಭಾರತದ ತಾಜ್ ಮಹಲ್ ಕೂಡಾ ಒಂದಾಗಿದೆ. ಕಾಂಬೋಡಿಯಾದ ಆಂಗ್‌ಕರ್ ವಾಟ್, ಜೋರ್ಡಾನ್‌ನ ಪೆಟ್ರಾ, ಚಿಲಿಯ ರಾಪಾ ನುಯಿ ರಾಷ್ಟ್ರೀಯ ಉದ್ಯಾನವನ, ಪೆರುವಿನ ಮಾಚು ಪಿಚ್ಚು, ಕ್ಯೂಬಾದ ಓಲ್ಡ್ ಹವಾನಾ, ಈಜಿಪ್ಟ್‌ನ ಪಿರಮಿಡ್‌ಗಳು, ಇಸ್ರೇಲ್‌ನಲ್ಲಿರುವ ಜೆರುಸಲೆಮ್‌ನ ಹಳೆಯ ನಗರ ಮತ್ತು ರಾಂಪಾರ್ಟ್‌ಗಳು, ಗ್ರೀಸ್‌ನ ಅಥೆನ್ಸ್‌ನ ಅಕ್ರೊಪೊಲಿಸ್ ಕೂಡಾ ವಿಶ್ವದ ಪ್ರಮುಖ ಪಾರಂಪರಿಕ ತಾಣಗಳಾಗಿದೆ.












Click it and Unblock the Notifications