ವಿಶ್ವ ಗ್ರಾಹಕ ಹಕ್ಕುಗಳ ದಿನ: ನಿಮ್ಮ ಮಾಹಿತಿ ತಿಳಿದುಕೊಳ್ಳುವುದು ನಿಮ್ಮ ಹಕ್ಕು; ಕೂ
ಬೆಂಗಳೂರು, ಮಾರ್ಚ್ 15: ವಿಶ್ವ ಗ್ರಾಹಕರ ಹಕ್ಕುಗಳ ದಿನ-2022 ಸಂದರ್ಭದಲ್ಲಿ ಬಳಕೆದಾರ ರಕ್ಷಣೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆಯ ಮಹತ್ವವನ್ನು ಕೂ ಅಪ್ಲಿಕೇಶನ್ ಪುನರುಚ್ಚರಿಸುತ್ತಿದ್ದು, ಸಾಮಾಜಿಕ ಬಳಕೆದಾರನ ಹಕ್ಕುಗಳನ್ನು ವಿವರಿಸಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಬಲೀಕರಣಗೊಳಿಸುವಲ್ಲಿ, ಸೃಜನಶೀಲತೆಯನ್ನು ಬೆಳೆಸುವಲ್ಲಿ, ಸಕಾರಾತ್ಮಕ ಮತ್ತು ಪ್ರಗತಿಪರ ಡಿಜಿಟಲ್ ಪರಿಸರ ನಿರ್ಮಿಸುವಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಕೂ ಒತ್ತಿ ಹೇಳುತ್ತದೆ.
ಈ ಬಗ್ಗೆ @KooPolicy ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದ್ದು, ವೇದಿಕೆ ಬಳಕೆದಾರರಿಗೆ ಅವರ ಗೌಪ್ಯತೆ ಮತ್ತು ರಕ್ಷಣೆಯ ಹಕ್ಕನ್ನು ನೆನಪಿಸುತ್ತದೆ. "ಕೂ'ನ ಪಾರದರ್ಶಕ ಗೌಪ್ಯತೆ ನೀತಿಯು ಪ್ಲಾಟ್‌ಫಾರ್ಮ್‌ನಲ್ಲಿ ಸಂವಹನ ನಡೆಸುವಾಗ ಬಳಕೆದಾರರಿಗೆ ಅರ್ಹವಾಗಿರುವ ಹಕ್ಕುಗಳ ಕುರಿತು ವಿವರಗಳನ್ನು ನೀಡುತ್ತದೆ. ಇದರಲ್ಲಿ ಬಳಕೆದಾರರ ಬಗ್ಗೆ ಪ್ಲಾಟ್‌ಫಾರ್ಮ್ ಹೊಂದಿರುವ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಸಹ ಒಳಗೊಂಡಿವೆ. ಅಸಮರ್ಪಕ ಅಥವಾ ಅನಗತ್ಯವಾದಾಗ ವೈಯಕ್ತಿಕ ಮಾಹಿತಿಯನ್ನು ರದ್ದುಗೊಳಿಸುವ ಅಥವಾ ಅಳಿಸುವ ಹಕ್ಕನ್ನು ಒಳಗೊಂಡಿರುತ್ತದೆ.

ಏತನ್ಮಧ್ಯೆ ಆನ್‌ಲೈನ್‌ನಲ್ಲಿ ಬಳಕೆದಾರರ ಸುರಕ್ಷತೆ ಮತ್ತು ಭದ್ರತೆ ಹೆಚ್ಚಿಸಲು, ಕೂ ರಚನಾತ್ಮಕವಾದ ಸಮುದಾಯ ಮಾರ್ಗಸೂಚಿಗಳು ಮತ್ತು ವಿಷಯ ಮಾಡರೇಶನ್ ಗೈಡ್ ಅನ್ನು ಹೊಂದಿದೆ. ಬಳಕೆದಾರರಿಗೆ ಮತ್ತು ಮೊದಲ ಬಾರಿ ಸಾಮಾಜಿಕ ಮಾಧ್ಯಮ ಬಳಸುವವರಿಗೆ ಆನ್‌ಲೈನ್‌ನಲ್ಲಿ ಅನುಮತಿಸುವ ಅಥವಾ ನಿಷೇಧಕ್ಕೊಳಗಾಗುವ ವಿಷಯಗಳ ಕುರಿತು ಮಾರ್ಗದರ್ಶನ ನೀಡುವ ಮೂಲಕ ಆರೋಗ್ಯಕರ ವಿಷಯವನ್ನು ರಚಿಸಲು ಅನುವು ಮಾಡಿಕೊಡುತ್ತದೆ.
ಕುಂದುಕೊರತೆ ಪರಿಹಾರವು ಬಳಕೆದಾರರ ಹಕ್ಕುಗಳ ಮತ್ತೊಂದು ನಿರ್ಣಾಯಕ ಅಂಶವಾಗಿರುವುದರಿಂದ, ತ್ವರಿತವಾಗಿ ಕಾಳಜಿ ವಹಿಸುವ ಕುಂದುಕೊರತೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಅನುಸರಣೆ ಅಧಿಕಾರಿಯನ್ನು ಒಳಗೊಂಡ ದೃಢವಾದ ಪ್ರಕ್ರಿಯೆಯನ್ನು ಕೂ ಹೊಂದಿದೆ.

ಬಳಕೆದಾರರು ತಮ್ಮ ಸಮಸ್ಯೆಗಳಿಗಾಗಿ [email protected] ಅಥವಾ [email protected] ಗೆ ಬರೆಯಬಹುದು, ವಿವಿಧ ವಿಷಯಗಳ ಕುರಿತು ವರದಿ ಮಾಡಲು ಮತ್ತು ಪರಿಹಾರಕ್ಕಾಗಿ ಸಂಪನ್ಮೂಲ ಕೇಂದ್ರದಲ್ಲಿನ ವರದಿ ಮತ್ತು ಪರಿಹಾರ ಅರ್ಜಿ ಕುರಿತ ಪೇಜ್‌ಗೆ ಭೇಟಿ ನೀಡಿ.
ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಸ್ವಯಂ-ಅಭಿವ್ಯಕ್ತಿಗೆ ಅತಿ ದೊಡ್ಡ ವೇದಿಕೆಯಾದ ಕೂ, ಇದು 20 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಮತ್ತು ಸೂಕ್ಷ್ಮಗ್ರಾಹಿಯಾಗಿಸಿ ಬಳಕೆದಾರರನ್ನು ರಕ್ಷಿಸಲು ಮತ್ತು ಸಂವೇದನಾಶೀಲಗೊಳಿಸಲು ನಿಯಮಿತವಾಗಿ ಉಪಕ್ರಮಗಳನ್ನು ಹೊರತರುತ್ತಿರುತ್ತದೆ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications