ಸಂಡೇ ಹೊಯಾ ಮಂಡೇ, ರೋಜ್ ಖಾಯೆ ಅಂಡೆ, ಮೊಟ್ಟೆಗೂ ದಿನಾಚರಣೆ

ಬೆಂಗಳೂರು, ಅಕ್ಟೋಬರ್ 11: ಸಂಡೇ ಹೋಯಾ ಮಂಡೇ, ರೋಜ್ ಖಾಯೆ ಅಂಡೇ ಹೀಗೊಂದು ಸ್ಲೋಗನ್ ದಶಕಗಳಿಂದ ಎಲ್ಲರ ಕಿವಿಗೆ ಬಿದ್ದಿರಲೇ ಬೇಕು. ಪ್ರತಿ ವರ್ಷ ಅಕ್ಟೋಬರ್ 12ರಂದು ಜಗತ್ತಿನಾದ್ಯಂತ ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ.

1996ರಲ್ಲಿ ವಿಯೆನ್ನಾದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ಮೊಟ್ಟೆ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಶುಕ್ರವಾರದಂದು ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ. ಶತಮಾನಗಳಿಂದ ಮಾನವನ ಪ್ರಮುಖ ಆಹಾರ ಪದಾರ್ಥಗಳಲ್ಲಿ ಸ್ಥಾನ ಪಡೆದಿರುವ ಕೋಳಿ ಮೊಟ್ಟೆ ಹಾಗೂ ಕೋಳಿ ಜಾತಿಯ ಪಕ್ಷಿಯ ಮೊಟ್ಟೆಗಳು ಮಾನವನ ಆಹಾರ ಪದ್ಧತಿಯ ಭಾಗವೇ ಆಗಿದೆ.

ಬಡವನಿಂದ ಶ್ರೀಮಂತರವರೆಗೂ ಅತ್ಯಂತ ಕೈಗೆಟುಕುವ ದರದಲ್ಲಿ ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿ ಮಾಂಸಾಹಾರಿ ಎಂದು ಆರೋಪಿಸಿದರೂ ಸಸ್ಯಾಹಾರಿಗಳು ಕೂಡ ಸವಿಯುವ ರುಚಿಕಟ್ಟಾದ ಆಹಾರ ಪದಾರ್ಥವಾಗಿ ಮೊಟ್ಟೆ ಮನುಕುಲದೊಂದಿಗೆ ನಡೆದು ಬಂದಿದೆ.

World celebrating Egg Day on this Friday

ಅತ್ಯಂತ ಪೋಷಕಾಂಶ ಅಂಶಗಳನ್ನು ಒಳಗೊಂಡ ಮಾನವನ ಆರೋಗ್ಯಕ್ಕೆ ಅದರಲ್ಲೂ ಮೆದುಳು ಹಾಗೂ ಮಾಂಸಖಂಡಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುವ ಮೊಟ್ಟೆ ರೋಗ ನಿರೋಧಕ ಶಕ್ತಿಯಾಗಿಯೂ ಕೆಲಸ ಮಾಡುತ್ತದೆ.

ಬೆಂಗಳೂರಲ್ಲಿ ಕೂಡ ಮೊಟ್ಟೆ ದಿನದ ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಸಹಕಾರ ಒಕ್ಕೂಟ ಮಹಾಮಂಡಳಿಯಿಂದ ಹೆಬ್ಬಾಳದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪರಿಷತ್ ನಲ್ಲಿ ಆಯೋಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+