ಮದ್ಯದಂಗಡಿ ಬಿಸಿನೆಸ್‌ನಲ್ಲಿ ಮಹಿಳೆಯರೇ ಮುಂದು; ಎಲ್ಲಿ ಗೊತ್ತಾ?

ಸಾಮಾನ್ಯವಾಗಿ ನಮ್‌ ಕಡೆ ಎಲ್ಲ ಮದ್ಯದ ಅಂಗಡಿ ಅಂದ್ರೆ ಮಹಿಳೆಯರು ಮುಜುಗರ ಪಡೋದನ್ನ ನೋಡಿರ್ತೀವಿ. ಮದ್ಯ ಸೇವಿಸಿ ಮನೆಗೆ ಬಂದ್ರೆ ಅವರಿಗೆ ಮಹಾಮಂಗಳಾರತಿ ಆಗೋದನ್ನೂ ನೋಡಿರುತ್ತೀವಿ. ಹೀಗಿರುವಾಗ ಮದ್ಯದ ಅಂಗಡಿಯಲ್ಲಿ ಮಹಿಳೆಯರು ವ್ಯಾಪಾರ ಮಾಡೋದು ಅಂದ್ರೆ ಬಹುತೇಕರು ಶಾಕ್‌ ಆಗೋದು ಗ್ಯಾರಂಟಿ. ಆದರೆ ಪಕ್ಕದ ಕೇರಳದಲ್ಲಿ ಇದು ಒಂದು ಟ್ರೆಂಡ್‌ ಸೃಷ್ಟಿಸಿದೆ.

ಮಹಿಳೆಯರು ಪುರುಷರಷ್ಟೇ ಸಮಾನರು ಎಂದು ಹೇಳಲಾಗುತ್ತದೆ. ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಪುರುಷರನ್ನು ಮೀರಿಸುವಷ್ಟು ಸಮಾನ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ, ಮದ್ಯದ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ತುಸು ಕಡಿಮೆಯೇ ಇತ್ತು. ಈಗ ಕೇರಳದಲ್ಲಿ ಈ ಕ್ಷೇತ್ರಕ್ಕೂ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ಪುರುಷರಂತೆ ಮದ್ಯ ಮಳಿಗೆಗಳನ್ನು ಮಹಿಳೆಯರೇ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

Women Are In Large Numbers In Government Liquor Stores In Kerala

ಕೇರಳದಲ್ಲಿ ಸರ್ಕಾರಿ‌ ಸ್ವಾಮ್ಯದ ಮದ್ಯದಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪೈಕಿ ಶೇ 50ಕ್ಕೂ ಹೆಚ್ಚು ಮಹಿಳೆಯರೇ ಇದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಬಹುತೇಕ ಸರ್ಕಾರಿ ಮದ್ಯದ ಅಂಗಡಿಗಳಲ್ಲಿ ಮುಖ್ಯಸ್ಥಿಕೆಗೆ ಮಹಿಳೆಯರನ್ನೇ ನಿಯೋಜಿಸಲಾಗಿದೆ. ಇಡೀ ದೇಶದಲ್ಲಿ ಈ ರೀತಿ ಮಹಿಳೆಯರು ಮದ್ಯದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವುದು ಕೇರಳದಲ್ಲಿ ಮಾತ್ರವೇ ಎಂದು ಹೇಳಲಾಗಿದೆ.

ಈ ಹಿಂದೆ ಕೇರಳ ಸರ್ಕಾರದ ಬಿಇವಿಸಿಒ ಮಳಿಗೆಗಳಲ್ಲಿ ಕೆಲಸ ಮಾಡಲು ನಮಗೂ ಹಕ್ಕಿದೆ ಎಂದು ಕೆಲ ಮಹಿಳೆಯರು ಕೋರ್ಟ್‌ ಮೆಟ್ಟಿಲೇರಿದ್ದರು. ಅದರಂತೆ ಈ ವಿಚಾರವು ಎಲ್ಲೆಡೆ ಗಮನ ಸೆಳೆದಿತ್ತು. ಬಳಿಕ ಕೋರ್ಟ್‌ ಕೂಡ ಈ ಕ್ಷೇತ್ರದಲ್ಲಿ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ನಿರ್ದೇಶಿಸಿತ್ತು ಎನ್ನಲಾಗಿದೆ.

Women Are In Large Numbers In Government Liquor Stores In Kerala

ಅದರಂತೆ ಸದ್ಯ ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳಲ್ಲಿ ಮಹಿಳೆಯರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳು ಅರ್ಧಕ್ಕಿಂತ ಹೆಚ್ಚು ಮಹಿಳಯರೇ ಇದ್ದಾರೆ ಎಂದು ಕೇರಳ ಸರ್ಕಾರ ಪಾನೀಯ ನಿಗಮದ (ಕೆಎಸ್‌ಬಿಸಿ) ಮ್ಯಾನೇಜಿಂಗ್‌ ಡೈರೆಕ್ಟರ್‌ ಹರ್ಷಿತಾ ಅಟ್ಟಲು ತಿಳಿಸಿದ್ದಾರೆ.

ಮಹಿಳೆಯರನ್ನು ಕೇವಲ ಮದ್ಯ ಮಾರಾಟ ಮಳಿಗೆಗಳಲ್ಲಿ ಅಷ್ಟೇ ಅಲ್ಲದೆ, ಸಂಸ್ಥೆಯ ಗೋಡೌನ್‌ ಹಾಗೂ ಆಡಳಿತ ಕಚೇರಿಗಳಲ್ಲೂ ನಿಯೋಜನೆ ಮಾಡಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಎಜಿಎಂ ಸೇರಿದಂತೆ ಉನ್ನತ ಹುದ್ದೆಗಳನ್ನೂ ಮಹಿಳೆಯರೇ ಅಲಂಕರಿಸಿದ್ದಾರೆ. ಇನ್ನು ಈ ರೀತಿ ಮದ್ಯದ ಕ್ಷೇತ್ರದಲ್ಲೂ ಹೆಚ್ಚಿನ ಮಹಿಳೆಯರ ನಿಯೋಜನೆ ಕುರಿತಂತೆ ಸರ್ಕಾರದ ಇನ್ನಿತರ ಇಲಾಖೆಗಳಿಗೂ ಮಾದರಿ ಆಗಬೇಕು ಎಂದು ಹರ್ಷಿತಾ ಹೇಳಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ಎಲ್ಲೆಡೆ ಚರ್ಚೆಗಳು ಶುರುವಾಗಿದ್ದು, ಮಹಿಳೆಯರು ನಾವು ಯಾರ್ಗೂ ಕಮ್ಮಿ ಇಲ್ಲ ಎಂದೆಲ್ಲ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+