ಜನವರಿ 14 ರ ಬದಲಿಗೆ ಜನವರಿ 15 ಕ್ಕೆ ಸಂಕ್ರಾಂತಿ ಬಂದಿರುವುದೇಕೆ?

ಬಹು ವರ್ಷಗಳಿಂದ ಜನವರಿ 14 ರಂದೇ ಸಂಕ್ರಾಂತಿ ಆಚರಿಸುವುದು ರೂಢಿ. ತಲ-ತಲಾಂತರಗಳಿಂದ ಜನವರಿ 14 ಕ್ಕೆ ಸಂಕ್ರಾಂತಿ ಆಚರಿಸಿಕೊಂಡು ಬಂದಿದ್ದೇವೆ. ಆದರೆ ಈ ಬಾರಿ ಜನವರಿ 15 ಕ್ಕೆ ಸಂಕ್ರಾಂತಿ ಬಂದಿದೆ. ಇದಕ್ಕೆ ಕಾರಣವೂ ಇದೆ.

ಈ ಬಾರಿ ಮಾತ್ರವಲ್ಲ 2019 ರಲ್ಲೂ ಜನವರಿ 15 ರಂದೇ ಸಂಕ್ರಾಂತಿ ಆಚರಿಸಿದ್ದೆವು. 2015 ರಿಂದಲೂ ಜನವರಿ 15ರಂದೇ ಸಂಕ್ರಾಂತಿ ಆಚರಿಸುತ್ತಿದ್ದೇವೆ. ಇನ್ನೂ ಹಲವು ವರ್ಷ ಜನವರಿ 15 ರಂದೇ ಸಂಕ್ರಾಂತಿ ಆಚರಿಸಲಿದ್ದೇವೆ.

ಹೀಗೆ ದಿನಾಂಕ ಬದಲಾಗಿ ಒಂದು ದಿನ ನಂತರ ಸಂಕ್ರಾಂತಿ ಬಂದದ್ದಿಕ್ಕೆ ಕಾರಣ ಭೂಮಿಯ ಚಲನೆ. ಸೂರ್ಯನು ಜನವರಿ ಮಧ್ಯರಾತ್ರಿ 1.45 ಮಕರ ರಾಶಿ ಪ್ರವೇಶಿಸುತ್ತಾನೆ ಹಾಗಾಗಿ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತದೆ.

Why Sankranthi Celebrating On January 15 Instead Of January 14

ಭೂಮಿಯ ಚಲನೆಯ ಪರಿಣಾಮ ಸೂರ್ಯನ ಮಕರ ಪ್ರವೇಶ ಅಲ್ಪತಡವಾಗಿದೆ. ಮತ್ತೆ ಸಂಕ್ರಾಂತಿಯು ಜನವರಿ 16 ಕ್ಕೆ ಆಚರಿಸಲು ದಶಕಗಳೇ ಕಾಯಬೇಕು.

1000 ವರ್ಷದ ಹಿಂದೆ ಡಿಸೆಂಬರ್ 31 ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿತ್ತಂತೆ ಆದರೆ ಸ್ವಾಭಾವಿಕವಾಗಿ ಭೂಮಿಯ ಚಲನೆ ಬದಲಾಗುತ್ತಲೇ ಇರುವ ಕಾರಣ ಈಗ ಜನವರಿ 15 ಕ್ಕೆ ಸಂಕ್ರಾಂತಿ ಆಚರಿಸಲಾಗುತ್ತಿದೆ.

ಮಕರ ಸಂಕ್ರಾಂತಿ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಬಿಹಾರ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿಂದಂತೆ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆಗೊಳಪಡುತ್ತದೆ. ಆದರೆ ಆಯಾ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹಬ್ಬ ಕರೆಯಲ್ಪಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+