Get Updates
Get notified of breaking news, exclusive insights, and must-see stories!

Profile: ಕೇರಳದಲ್ಲಿ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ವ್ಯಕ್ತಿಚಿತ್ರ

ತಿರುವನಂತಪುರಂ, ಮೇ 20: ಕೇರಳದಲ್ಲಿ 2018ರಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಹಾಗೂ ಪ್ರಸ್ತುತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಸಮರ್ಥವಾಗಿ ನಿಭಾಯಿಸಿದ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಸ್ಥಾನವನ್ನು ಪಡೆಯುವಲ್ಲಿ ವೀಣಾ ಜಾರ್ಜ್ ಯಶಸ್ವಿಯಾಗಿದ್ದಾರೆ.

ಕೇರಳದಲ್ಲಿ ಆರೋಗ್ಯ ಸಚಿವೆ ಸ್ಥಾನಕ್ಕೆ ಏರಿದ ಚೊಚ್ಚಲ ಪತ್ರಕರ್ತೆ ಎಂಬ ಖ್ಯಾತಿಗೆ ವೀಣಾ ಜಾರ್ಜ್ ಒಳಗಾಗಿದ್ದಾರೆ. ರಾಜ್ಯದ ಹಲವು ಸುದ್ದಿವಾಹಿನಿಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ವೀಣಾ ಜಾರ್ಜ್ ಸಿಪಿಐ(ಎಂ) ಪಕ್ಷದಲ್ಲಿ ಗುರುತಿಸಿಕೊಂಡರು.

ಪತ್ರಕರ್ತರಾಗಿ ತಮ್ಮ ಬದುಕು ಆರಂಭಿಸಿದ 45 ವರ್ಷದ ವೀಣಾ ಜಾರ್ಜ್, ಕೇರಳದ ಕೈರಾಲಿ ಟಿವಿ, ಮನೋರಮಾ ನ್ಯೂಸ್ ಮತ್ತು ರಿಪೋರ್ಟರ್ ಟಿವಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಅರಾನಮುಲಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

 Who is Veena George, The Ex-Journo To Become Keralas New Health Minister

ಹುಟ್ಟು ಮತ್ತು ಬೆಳವಣಿಗೆ:

ಕೇರಳದ ತಿರುವನಂತಪುರಂನಲ್ಲಿ 1976, ಆಗಸ್ಟ್ 3ರಂದು ವೀಣಾ ಜಾರ್ಜ್ ಜನಿಸಿದರು. ಎಂಎಸ್ಸಿ ಪದವಿ ಹಾಗೂ ಬಿ.ಎಡ್ ವ್ಯಾಸಂಗ ಮಾಡಿರುವ ವೀಣಾ ಜಾರ್ಜ್, ಕಾಲೇಜು ಮಟ್ಟದಲ್ಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಬಂದವರು. ಕಾಲೇಜು ಹಂತದಲ್ಲಿ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಸಿಪಿಐ(ಎಂ) ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜಾರ್ಜ್ ಜೋಸೆಫ್ ಅವರನ್ನು ವಿವಾಹವಾಗಿರುವ ವೀಣಾ ಜಾರ್ಜ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ರಾಜಕೀಯ ಬದುಕು:

2016ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ ವೀಣಾ ಜಾರ್ಜ್ ಅರನಮುಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಿವದಾಸನ್ ನಾಯರ್ ವಿರುದ್ಧ ಗೆಲುವು ಸಾಧಿಸಿದರು. ಐದು ವರ್ಷಗಳ ನಂತರ ಮತ್ತೆ ಅದೇ ಕ್ಷೇತ್ರದಲ್ಲಿ 7646 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ವೀಣಾ ಜಾರ್ಜ್ ಸೋಲು ಕಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+