ರಂಜಾನ್ ಕದಿರೊವ್ ಯಾರು? ಉಕ್ರೇನ್‌ ಯುದ್ಧಕ್ಕೆ ಎಂಟ್ರಿ ಕೊಟ್ರೆ ಏನಾದೀತು?

ಕೀವ್‌, ಮಾರ್ಚ್ 29: ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ಪ್ರಾರಂಭಿಸಿದ ಕೇವಲ ಎರಡು ದಿನಗಳ ನಂತರ, ರಷ್ಯಾದ ಚೆಚೆನ್ ಗಣರಾಜ್ಯದ ಅಧ್ಯಕ್ಷ ರಂಜಾನ್ ಕದಿರೊವ್ ತನ್ನ ಪಡೆಗಳನ್ನು ಯುದ್ಧಭೂಮಿಗೆ ನಿಯೋಜಿಸಲಾಗಿದೆ ಎಂದು ಘೋಷಣೆ ಮಾಡಿದರು. ಅಂದಿನಿಂದ ಉಕ್ರೇನ್‌ನಲ್ಲಿ ತನ್ನ ಪಡೆಯ ವಿಡಿಯೋವನ್ನು ರಂಜಾನ್ ಕದಿರೊವ್ ಪೋಸ್ಟ್‌ ಮಾಡುತ್ತಾ ಬಂದಿದ್ದಾರೆ.

ಮಾರ್ಚ್ 14 ರಂದು ರಂಜಾನ್ ಕದಿರೊವ್ ಸೈನಿಕರಿಂದ ತುಂಬಿದ ಕೋಣೆ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದರು. ಹಾಗೆಯೇ ತಾನು ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಚೆಚೆನ್ ಪಡೆಗಳೊಂದಿಗೆ ಇರುವುದಾಗಿ ಹೇಳಿದರು. ಈ ಬಗ್ಗೆ ಬೇರೆ ಯಾವುದೇ ಅಧಿಕಾರಿಗಳು ಮಾಹಿತಿಯನ್ನು ನೀಡಿಲ್ಲ. ಇನ್ನು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಕದಿರೊವ್ ಉಕ್ರೇನ್‌ನಲ್ಲಿರುವ ಬಗ್ಗೆ "ಯಾವುದೇ ಮಾಹಿತಿ" ಇಲ್ಲ ಎಂದು ಹೇಳಿದ್ದಾರೆ.

ಅಷ್ಟಕ್ಕೂ ರಷ್ಯಾವು ಎಲ್ಲಿ ಯುದ್ಧ ಮಾಡುತ್ತದೋ ಅಲ್ಲಿ ಚೆಚೆನ್ ಪಡೆಗಳನ್ನು ಕೂಡಾ ನಿಯೋಜನೆ ಮಾಡುವುದು ಇದೇ ಮೊದಲ ಬಾರಿ ಏನಲ್ಲ. ಜಾರ್ಜಿಯಾದಲ್ಲಿ 2008 ರ ಯುದ್ಧ, 2014-15ರಲ್ಲಿ ಉಕ್ರೇನ್‌ನಲ್ಲಿನ ಮೊದಲ ಹಂತದ ಸಂಘರ್ಷ ಮತ್ತು ಸಿರಿಯನ್ ಯುದ್ಧದಲ್ಲಿ ಚೆಚೆನ್ ಪಡೆಗಳು ಭಾಗವಹಿಸಿದ್ದವು. ಉಗ್ರ ಹೋರಾಟಗಾರರು ಎಂದೇ ಖ್ಯಾತಿಯನ್ನು ಪಡೆದಿರುವ ಚೆಚೆನ್ ಪಡೆಗಳು ಉಕ್ರೇನ್‌ ಯುದ್ಧ ಭೂಮಿಯಲ್ಲಿ ಮಾತ್ರ ಈವರೆಗೆ ಯಾವುದೇ ಮಹತ್ವದ ಪಾತ್ರವನ್ನು ವಹಿಸಿಲ್ಲ. ಅಷ್ಟಕ್ಕೂ ಈ ರಂಜಾನ್ ಕದಿರೊವ್ ಯಾರು? ಉಕ್ರೇನ್‌ ಯುದ್ಧದ ಕಣಕ್ಕೆ ರಂಜಾನ್ ಕದಿರೊವ್ ಎಂಟ್ರಿ ಕೊಟ್ರೆ ಏನಾಗಬಹುದು? ಇಲ್ಲಿದೆ ಮಾಹಿತಿ ಮುಂದೆ ಓದಿ..

 ರಂಜಾನ್ ಕದಿರೊವ್ ಯಾರು?

ರಂಜಾನ್ ಕದಿರೊವ್ ಯಾರು?

ರಂಜಾನ್ ಕದಿರೊವ್ ತನ್ನ ತಂದೆ ಮಾಜಿ ಚೆಚೆನ್ ಅಧ್ಯಕ್ಷ ಅಖ್ಮದ್ ಕದಿರೊವ್ ಹತ್ಯೆಯಾದ ಮೂರು ವರ್ಷಗಳ ನಂತರ ಚೆಚೆನ್‌ನಲ್ಲಿ 2007 ರಲ್ಲಿ ಅಧಿಕಾರಕ್ಕೆ ಬಂದರು. ಇಬ್ಬರೂ ಮೊದಲ ಚೆಚೆನ್ ಯುದ್ಧದಲ್ಲಿ (1994-96) ಸ್ವಾತಂತ್ರ್ಯ ಪರ ಪಡೆಗಳ ಪರವಾಗಿ ಹೋರಾಡಿದರು. ಆದರೆ ಎರಡನೇ ಚೆಚೆನ್ ಯುದ್ಧದಲ್ಲಿ (1999-2000) ಪಕ್ಷಗಳನ್ನು ಬದಲಾಯಿಸಿದರು ಮತ್ತು ರಷ್ಯಾದ ಸೈನ್ಯವು ಎದುರಾಳಿಗಳನ್ನು ಸೋಲಿಸಲು ಸಹಾಯ ಮಾಡಿದರು. ಇದರ ಪರಿಣಾಮವಾಗಿ ಚೆಚೆನ್ಯಾ ತನ್ನ ಅಲ್ಪಾವಧಿಯ ಸ್ವಾತಂತ್ರ್ಯವನ್ನು ಕಳೆದುಕೊಂಡಿತು. ರಷ್ಯಾದ ಒಕ್ಕೂಟದ ಪ್ರದೇಶಗಳಲ್ಲಿ ಒಂದಾಯಿತು. ಅಧಿಕಾರಕ್ಕೆ ಬಂದ ನಂತರ, ಕದಿರೊವ್ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಿದ್ದು, ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿಗ್ರಹಿಸಿದ್ದಾರೆ. ಚಿತ್ರಹಿಂಸೆ ಮತ್ತು ಕಾನೂನುಬಾಹಿರ ಹತ್ಯೆಗಳಿಗೆ ಆದೇಶ ನೀಡಿದ ಆರೋಪವೂ ಇದೆ. 2017 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಚೆಚೆನ್ ಅಧ್ಯಕ್ಷರ ಮಾನವ ಹಕ್ಕುಗಳ ದಾಖಲೆಯ ಮೇಲೆ ನಿರ್ಬಂಧಗಳನ್ನು ವಿಧಿಸಿತು. ಈತ ಯುದ್ಧ ಭೂಮಿಗೆ ಇಳಿದರೆ, ಉಕ್ರೇನ್‌ನಲ್ಲಿ ಮಾರಣಹೋಮ ನಡೆಯುವ ಸಾಧ್ಯತೆ ಇದೆ ಎಂಬ ಆತಂಕವು ಇದೆ.

 ರಷ್ಯಾದ ಮೇಲೆ ಕದಿರೊವ್ ನಿಷ್ಠೆ ಅಷ್ಟಿಷ್ಟಲ್ಲ!

ರಷ್ಯಾದ ಮೇಲೆ ಕದಿರೊವ್ ನಿಷ್ಠೆ ಅಷ್ಟಿಷ್ಟಲ್ಲ!

ಚೆಚೆನ್ ಗಣರಾಜ್ಯದ ಅಧ್ಯಕ್ಷ ರಂಜಾನ್ ಕದಿರೊವ್ ರಷ್ಯಾದ ಮೇಲೆ ಭಾರೀ ನಿಷ್ಠೆಯನ್ನು ಹೊಂದಿದ್ದಾರೆ. ಕ್ರೆಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಳ್ಳಲು, ಪೂರ್ವ ಉಕ್ರೇನ್‌ನಲ್ಲಿ ಪುಟಿನ್ ಪರ ಬಂಡುಕೋರರಿಗೆ ರಂಜಾನ್ ಕದಿರೊವ್ ಬೆಂಬಲವನ್ನು ನೀಡಿದ್ದರು. ರಷ್ಯಾ ಅಧ್ಯಕ್ಷ ಪುಟಿನ್‌ನ ಸಹವರ್ತಿಗಳಿಗೆ ಹಲವಾರು ರಾಷ್ಟ್ರಗಳು ಈಗಾಗಲೇ ನಿರ್ಬಂಧವನ್ನು ಹೇರಿದೆ, ಈ ಪೈಕಿ ಯುಎಸ್‌ ಹಾಗೂ ಇಯು ಪಟ್ಟಿಯಲ್ಲಿ ರಂಜಾನ್ ಕದಿರೊವ್ ಹೆಸರು ಕೂಡಾ ಇದೆ. ಈ ತಿಂಗಳ ಆರಂಭದಲ್ಲಿ ಫೇಸ್‌ಬುಕ್ ಯುಎಸ್ ನಿರ್ಬಂಧಗಳನ್ನು ಉಲ್ಲೇಖಿಸಿ ಕದಿರೊವ್‌ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಿದೆ. ರಂಜಾನ್ ಕದಿರೊವ್ ಇನ್ಸ್ಟಾ ಗ್ರಾಂನಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರ ಫೇಸ್‌ಬುಕ್ ಖಾತೆಯನ್ನು 2017 ರಲ್ಲಿ ನಿರ್ಬಂಧಿಸಲಾಗಿದೆ. 2007 ರಲ್ಲಿ, ಚೆಚೆನ್ ಅಧ್ಯಕ್ಷರನ್ನಾಗಿ ಕದಿರೊವ್‌ರನ್ನು ನೇಮಕ ಮಾಡಿದ್ದು ರಷ್ಯಾ ಅಧ್ಯ‌ಕ್ಷ ಪುಟಿನ್‌. ಅಷ್ಟಕ್ಕೂ ಕದಿರೊವ್ ಯಾವಾಗಲೂ ಮಾಸ್ಕೋ ನಾಯಕತ್ವವನ್ನು ಬೆಂಬಲಿಸಲಿಲ್ಲ. 1990 ರ ದಶಕದ ಆರಂಭದಲ್ಲಿ, ಅವರು ಮತ್ತು ಅವರ ತಂದೆ ಸ್ವಾತಂತ್ರ್ಯಕ್ಕಾಗಿ ಮೊದಲ ಯುದ್ಧದಲ್ಲಿ ರಷ್ಯಾದ ಪಡೆಗಳೊಂದಿಗೆ ಹೋರಾಡುವ ಬಂಡುಕೋರರ ಜೊತೆಯಾಗಿದ್ದರು. ಎರಡನೇ ಯುದ್ಧದಲ್ಲಿ ಪಕ್ಷಾಂತರ ಮಾಡಿಕೊಂಡರು.

 ಚೆಚೆನ್ಯಾ ಆಡಳಿತವನ್ನು ಟೀಕೆ ಮಾಡಿದರೆ ಏನಾಗುತ್ತಿತ್ತು?

ಚೆಚೆನ್ಯಾ ಆಡಳಿತವನ್ನು ಟೀಕೆ ಮಾಡಿದರೆ ಏನಾಗುತ್ತಿತ್ತು?

ಚೆಚೆನ್ಯಾ ಆಡಳಿತದಲ್ಲಿನ ನ್ಯೂನತೆಗಳನ್ನು ಟೀಕಿಸುವವರನ್ನು ಕೆಲವೊಮ್ಮೆ ಮೆರವಣಿಗೆ ಮಾಡಿ ಅದನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ವರದಿ ಉಲ್ಲೇಖ ಮಾಡಿದೆ. ಈ ತಿಂಗಳಿನಲ್ಲಿ ಕೊರೊನಾ ವೈರಸ್‌ ಬಿಕ್ಕಟ್ಟಿನಲ್ಲಿ ರಕ್ಷಣಾತ್ಮಕ ಕಿಟ್‌ನ ಕೊರತೆಯ ಬಗ್ಗೆ ದೂರು ನೀಡಿದ ಕೆಲವು ವೈದ್ಯರು ಮತ್ತೆ ತಾವು ತಪ್ಪಾಗಿ ಹೇಳಿದ್ದೇವೆ ಎಂದು ಒಪ್ಪಿಕೊಂಡಿರುವ ಸುದ್ದಿಯನ್ನು ಕೂಡಾ ಬಲವಂತವಾಗಿ ಪ್ರಸಾರ ಮಾಡಲಾಗಿದೆ. 2018 ರಲ್ಲಿ ಬಿಬಿಸಿಯ ಸ್ಟೀವ್ ರೋಸೆನ್‌ಬರ್ಗ್ ಅವರು ಕದಿರೊವ್‌ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕದಿರೊವ್‌, "ನಾಯಿ ಬೊಗಳುತ್ತದೆ, ಆದರೆ ಕಾರವಾನ್ ಮುಂದುವರಿಯುತ್ತದೆ. ನಮ್ಮ ಬಗ್ಗೆ ಈ ವಿಷಯಗಳನ್ನು ಬರೆಯುವ ಜನರನ್ನು ನಾನು ಲೆಕ್ಕಕ್ಕೆ ತೆಗೆದುಕೊಳ್ಳಲ್ಲ," ಎಂದು ಹೇಳಿದ್ದರು.

 ರಂಜಾನ್ ಕದಿರೊವ್‌ನ ಈ ಹಿಂದಿನ ಹತ್ಯೆಗಳು

ರಂಜಾನ್ ಕದಿರೊವ್‌ನ ಈ ಹಿಂದಿನ ಹತ್ಯೆಗಳು

ಚೆಚೆನ್ ಗಣರಾಜ್ಯದ ಅಧ್ಯಕ್ಷ ರಂಜಾನ್ ಕದಿರೊವ್ ತನ್ನ ಅಧಿಕಾರವಧಿಯಲ್ಲಿ ತನ್ನ ವಿಧಾನಗಳನ್ನು ಖಂಡನೆ ಮಾಡಿದವರನ್ನು ಹತ್ಯೆ ಮಾಡಲಾಗುತ್ತಿತ್ತು ಎಂದು ವರದಿ ಹೇಳಿದೆ. ಕದಿರೊವ್ ವಿರುದ್ಧ ವರದಿ ಮಾಡಿದ ಉನ್ನತ ತನಿಖಾ ಪತ್ರಕರ್ತೆ ಅನ್ನಾ ಪೊಲಿಟ್ಕೊವ್ಸ್ಕಯಾ ಅವರ 2006 ರಲ್ಲಿ ಅವರ ಮಾಸ್ಕೋ ಅಪಾರ್ಟ್ಮೆಂಟ್ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಜೀವಾವಧಿಗೆ ಜೈಲಿಗೆ ಹಾಕಲಾಗಿದೆ. 2009 ರಲ್ಲಿ, ರಷ್ಯಾದ ಮಾನವ ಹಕ್ಕುಗಳ ಪ್ರಚಾರಕಿ ನಟಾಲಿಯಾ ಎಸ್ಟೆಮಿರೋವಾ ಅವರನ್ನು ಉತ್ತರ ಕಾಕಸಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ವಿಯೆನ್ನಾದಲ್ಲಿ ಮಾಜಿ ಅಂಗರಕ್ಷಕ ಉಮರ್ ಇಸ್ರೈಲೋವ್ ಮತ್ತು ದುಬೈನಲ್ಲಿ ಸುಲಿಮ್ ಯಮಡೇವ್ ಅವರಂತಹ ಕದಿರೊವ್ ಮಾಜಿ ಸಹಚರರನ್ನು ವಿದೇಶದಲ್ಲಿ ಹತ್ಯೆಗೈದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+