ಎಣ್ಣೆ ತರಲು ನೀವು ಬಾರಿಗೆ ಹೋದಾಗ ನಿಮ್ಮ ತಂದೆ ಅಲ್ಲಿ ಪ್ರತ್ಯಕ್ಷನಾದರೆ ಹೀಗೆ ಆಗೋದು
ವೈರಲ್ ವಿಡಿಯೋಗಳನ್ನು ನೋಡಿ ನಕ್ಕು ನಕ್ಕು ಸಾಕಾಗುತ್ತದೆ. ಇನ್ನು ಕೆಲವು ವಿಡಿಯೋಗಳನ್ನು ನೋಡಿ ಹೀಗೆ ಆದರೆ ಹೇಗಪ್ಪಾ ಎನ್ನುವ ಭಯ ಶುರುವಾಗುತ್ತದೆ. ಇನ್ನು ಕೆಲವು ನಮಗೆ ಹೀಗೆ ಆಗದೆ ಇದ್ದರೆ ಸಾಕಪ್ಪ ಎಂದು ಅನಿಸುತ್ತದೆ. ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ.
ವಿಡಿಯೋದಲ್ಲಿ ಕಾಣುವ ಒಬ್ಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದಾನೆ. ಇದೇ ವೇಳೆ ಪಾರ್ಟಿಗೆ ಎಣ್ಣೆ ತರಲು ಹೋಗಿದ್ದ ಆ ವ್ಯಕ್ತಿ ಬೀಯರ್ ಬಾಟಲ್‌ಗಳನ್ನು ಕೈಯಲ್ಲಿ ಹಿಡಿದಿದ್ದೇ ತಡ, ಮುಂದುಗಡೆ ಬಂದ ವ್ಯಕ್ತಿಯನ್ನು ನೋಡಿ ಜೀವ ಹೋದಂತೆ ಆಗುತ್ತದೆ. ಏನಪ್ಪಾ ಏನ್ ಮಾಡೋದು ಎಂದು ಕೈಯಲ್ಲಿ ಬಿಯರ್ ಹಿಡಿದಿದ್ದ ವ್ಯಕ್ತಿ ಯೋಚನೆ ಮಾಡುವಾಗಲೇ, ಇವನನ್ನು ನೋಡಿದ ವ್ಯಕ್ತಿ ಕಾರ್ಯ ಪ್ರವೃತ್ತನಾಗುತ್ತಾನೆ.

ಆಗಿದ್ದೇನು?
ಒಬ್ಬ ಹುಡುಗ ಬಿಯರ್ ಖರೀದಿಸಲು ಮದ್ಯದಂಗಡಿಯಲ್ಲಿ ನಿಂತಿದ್ದ. ಇದ್ದಕ್ಕಿದ್ದಂತೆ ಅವನ ತಂದೆ ಆ ಅಂಗಡಿಯನ್ನು ಪ್ರವೇಶಿಸಿದ್ದಾರೆ. ಮತ್ತು ಹುಡುಗ ಬಿಯರ್ ಡಬ್ಬವನ್ನು ಖರೀದಿಸುವುದನ್ನು ನೋಡಿದರು. ಒಂದು ಬಾರಿ ಯೋಚನೆ ಮಾಡಿ ಇವನು ನನ್ನ ಮಗನೆ ಎಂದು ತಿಳಿದ ಮೇಲೆ ಕೆಲಸ ಶುರು ಮಾಡಿದ್ದಾರೆ.
ಈ ವಿಡಿಯೋ ಹರಿಯಾಣದ್ದು ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಮಗನ ಕೈಯಲ್ಲಿ ಬಿಯರ್ ಕ್ಯಾನ್‌ಗಳನ್ನು ನೋಡಿದ ತಂದೆ ಕೆಂಡಕಾರಿದ್ದಾರೆ. ಅಲ್ಲದೆ ತಮ್ಮ ಮಗ ಈ ಅಂಗಡಿಯಲ್ಲಿ ಬಿಯರ್ ತೆಗೆದುಕೊಳ್ಳುವುದುನ್ನು ನೋಡಿ ಅಪ್ಪನ ಪಿತ್ತ ನೆಟ್ಟಿಗೆ ಏರಿದೆ. ಕ್ಷಣ ಮಾತ್ರದಲ್ಲಿ ತಂದೆ ತಾನು ಎಲ್ಲಿ ಇದ್ದೇನೆ. ಏನ್ ಮಾಡ್ತಾ ಇದ್ದೇನೆ ಎಂಬ ಪರಿವೇ ಇಲ್ಲದೇ, ಚಪ್ಪಲಿ ತೆಗೆದು ಮಗನಿಗೆ ಸೇವೆ ಪ್ರಾರಂಭಿಸಿದ್ದಾರೆ.
ಸರಿಯಾಗಿ ಏಟು ತಿಂದ ಮಗ
ತಂದೆ ತನ್ನ ಮಗನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಹುಡುಗ ಕೈಯಲ್ಲಿ ಬಿಯರ್ ಕ್ಯಾನ್ ಹಿಡಿದು ಅಪ್ಪಾ ಇದು ನನ್ನದಲ್ಲ ಎನ್ನುತ್ತಿದ್ದಾನೆ. ಆದರೆ ಅವನ ತಂದೆ ಅವನ ಮಾತನ್ನು ಕೇಳದೆ ಚಪ್ಪಲಿಯಿಂದ ಹೊಡೆಯುತ್ತಲೇ ಇದ್ದಾನೆ. ಗೆಳೆಯ ಆರ್ಡರ್ ಮಾಡಿದ್ದೇನೆ ಎಂದು ಹುಡುಗ ತನ್ನ ತಂದೆಗೆ ಪದೇ ಪದೇ ಹೇಳುತ್ತಿದ್ದರು ಮಗನ ಮಾತಿಗೆ ತಂದೆ ಕವಡೆ ಕಾಸಿನ ಕಿಮತ್ತು ನೀಡದೆ ಚಪ್ಪಲಿಗಳಿಂದ ಹೊಡೆಯುತ್ತಿದ್ದಾನೆ. ನಾನು ಕುಡಿಯುವುದಿಲ್ಲ, ನೀವು ನನ್ನನ್ನು ಏಕೆ ಹೊಡೆಯುತ್ತಿದ್ದೀರಿ? ಎಲ್ಲರೂ ನಮ್ಮತ್ತ ನೋಡುತ್ತಿದ್ದಾರೆ ಎಂದು ಮಗ ಹೇಳುತ್ತಿದ್ದರೂ ತಂದೆ ಇದಾವದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಸುಮ್ಮನೆ ತನ್ನಲ್ಲಿರುವ ಸಿಟ್ಟನ್ನು ಹೊರ ಹಾಕುತ್ತಲೇ ಇದ್ದ. ತನ್ನ ಮಗ ಸಹ ಕೆಟ್ಟ ಚಟಗಳಿಗೆ ದಾಸನಾಗಿದ್ದಾನೆ ಎಂದು ಭಾವಿಸಿ ಎರಡು ಏಟು ಹೆಚ್ಚೇ ಕೊಟ್ಟಿದ್ದಾನೆ. ಮಗ ಇದರಲ್ಲಿ ತನ್ನದೇನು ತಪ್ಪಿಲ್ಲ ಎಂದು ಎಷ್ಟು ಬಾರಿ ಹೇಳಿದ್ರೂ ತಂದೆ ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಇರಲಿಲ್ಲ. ಇದನ್ನು ಶೂಟ್ ಮಾಡಿದ ವ್ಯಕ್ತಿ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಜನರು ತಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಶೇರ್ ಮಾಡಿದ್ದಾರೆ. ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ಭಿನ್ನ ವಿಭಿನ್ನ ಕಾಮೆಂಟ್ ಮಾಡಿದ್ದಾರೆ.
ಈ ವೈರಲ್ ವೀಡಿಯೊವನ್ನು Instagram ನಲ್ಲಿ @peddlermedia ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೆ 85 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಲ್ಲದೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ತರಹೇವಾರಿ ಕಮೆಂಟ್ ಮಾಡಿದ್ದಾರೆ.












Click it and Unblock the Notifications