• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹವಾಮಾನ ವೈಪರಿತ್ಯ : ಭವಿಷ್ಯದಲ್ಲಿ ಹನಿ ನೀರಿಗೂ ಸಂಕಷ್ಟ

|

ಮಾನವನಿಗೆ ಭೂಮಿ ಅನೇಕ ಕೊಡುಗೆಗಳನ್ನು ನೀಡುತ್ತಿದೆ. ಭೂಮಿಯಿಂದ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಜನರು, ಹವಾಮಾನ ವೈಪರಿತ್ಯವನ್ನು ತಡೆಯಲು ತಮ್ಮ ಕೊಡುಗೆಯನ್ನು ನೀಡಬೇಕಿದೆ.

2030ರ ವೇಳೆಗೆ ಮಾಲಿನ್ಯದಿಂದಾಗಿ ಭೂಮಿಯ ಮೇಲ್ಪದರಕ್ಕೆ ಹಾನಿಯಾಗಲಿದೆ ಮತ್ತು ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂದು ಅಧ್ಯಯನ ವರದಿಯ ಮೂಲಕ ಎಚ್ಚರಿಕೆ ನೀಡಲಾಗಿದೆ. ಹಲವಾರು ಸರ್ಕಾರಗಳು ಮಾಲಿನ್ಯವನ್ನು ಶೇ 20ರಷ್ಟು ಕಡಿಮೆ ಮಾಡಲು ಕೈಗೊಳ್ಳುವ ಕ್ರಮಗಳ ಬಗ್ಗೆ ಈಗಾಗಲೇ ಘೋಷಣೆ ಮಾಡಿವೆ.

ಮನೆಯ ಮೇಲೆ ಕೈತೋಟ ಬೆಳೆಸಿದ ಕೃಷಿ ನಗರದ ಕುಮಾರಯ್ಯ!

ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಒಪ್ಪಂದವನ್ನು ಅನುಷ್ಠಾನಗೊಳಿಸಲು ಹಲವು ದೇಶಗಳು ದಿಟ್ಟ ಕ್ರಮಗಳನ್ನು ಕೈಗೊಂಡಿವೆ. 2030ರ ವೇಳೆಗೆ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡುವುದು ಒಪ್ಪಂದದ ಪ್ರಮುಖ ಗುರಿಯಾಗಿದೆ.

ಮೊಳಕೆಯೊಡೆದು ಗಿಡವಾಗುತ್ತೆ ಈ ಯೂಸ್ ಅಂಡ್ ಥ್ರೋ ಪೆನ್

ಆದರೆ, ಪರಿಸರದ ಮೇಲಿನ ಮಾನವನ ಅತಿಯಾದ ಅವಲಂಬನೆ ನೈಸರ್ಗಿಕ ಸಂಪನ್ಮೂಲಗಳ ಹಾನಿಗೆ ಕಾರಣವಾಗಿದೆ. ಭೂಮಿಯ ಮೇಲೆ ಮಾನವನ ದೌರ್ಜನ್ಯ ಹೆಚ್ಚಾದಷ್ಟು ಹವಾಮಾನದ ಮೇಲೆ ವೈಪರಿತ್ಯ ಉಂಟಾಗಲಿದೆ.

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2

ಹವಾಮಾನ ಬದಲಾವಣೆಯ ಅಂತರ್ ಸರ್ಕಾರ ಸಮಿತಿ (ಐಪಿಸಿಸಿ) ಪ್ರಸ್ತುತ ಸನ್ನಿವೇಶದ ಹವಾಮಾನ ಬದಲಾವಣೆ ಬಗ್ಗೆ ವರದಿ ತಯಾರು ಮಾಡಿದೆ. ಭವಿಷ್ಯದಲ್ಲಿ ಭೂಮಿ ಮತ್ತು ಮಾನವ ಸಂಪನ್ಮೂಲದ ಮೇಲೆ ಆಗುವ ಪರಿಣಾಮವನ್ನು ವರದಿಯಲ್ಲಿ ಹೇಳಿದೆ. ಭೂಮಿಯನ್ನು ನಾವು ಹೇಗೆ ರಕ್ಷಣೆ ಮಾಡಬೇಕು ಎಂದು ವರದಿ ಹಲವು ಅಂಶಗಳನ್ನು ಮುಂದಿಟ್ಟಿದೆ.

ನೀರಿಗಾಗಿ ಸಂಕಷ್ಟ : ಭೂಮಿಯ ಬಹುಭಾಗ ನೀರಿಲ್ಲದ ಪ್ರದೇಶವಾಗಿದೆ. ಸುಮಾರು 45.4ರಷ್ಟು ಜಾಗವಿದ್ದು ಇವುಗಳಲ್ಲಿ 2.7 ಬಿಲಿಯನ್ ಜನರು ವಾಸ್ತವ್ಯ ಹೂಡಿದ್ದಾರೆ. ಇದು ಮರುಭೂಮಿ, ಹುಲ್ಲುಗಾವಲು, ಕಡಿಮೆ ಮಳೆಯಾಗುವ ಪ್ರದೇಶವಾಗಿದೆ. ಈ ಭಾಗಗಳನ್ನು ಕಡಿಮೆ ಮಳೆಯಾಗುವ ಪ್ರದೇಶ ಎಂದು ವಿಂಗಡನೆ ಮಾಡಲಾಗಿದೆ.

ನೀರಿಲ್ಲದ ಈ ಪ್ರದೇಶಗಳು ಹವಾಮಾನ ವೈಪರಿತ್ಯಕ್ಕೆ ಹೆಚ್ಚು ಕೊಡುಗೆಯನ್ನು ನೀಡುತ್ತದೆ. ಭೂಮಿಯ ಮೇಲ್ಪದರ ಮೇಲಿನ ನೀರು ಬರಿದಾದದರೆ ನೇರವಾಗಿ 250 ಮಿಲಿಯನ್ ಜನರ ಮೇಲೆ ಪರಿಣಾಮ ಉಂಟಾಗಲಿದೆ. ಮರುಭೂಮಿಕರಣ ನೇರವಾಗಿ ಆಫ್ರಿಕ, ಏಷ್ಯಾ, ಮೆಡಿಟರೇನಿಯನ್ ಪ್ರದೇಶ, ಲ್ಯಾಟಿನ್ ಅಮೆರಿಕ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ.

ಜಾಗತಿಕ ತಾಪಮಾನ ಹೆಚ್ಚಳ ನೀರಿನ ವ್ಯವಸ್ಥೆ ಮೇಲೆ ನೇರವಾದ ಪರಿಣಾಮ ಬೀರಲಿದೆ. ಈ ದಶಕದ ಅಂತ್ಯಕ್ಕೆ ಕಡಿಮೆ ನೀರಿನ ಲಭ್ಯತೆ ಹೊಂದಿರುವ ಪ್ರದೇಶಗಳು ಶೇ 10ರಷ್ಟು ವಿಸ್ತರಣೆಯಾಗಲಿವೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಅಭಿವೃದ್ಧಿ ಹೊಂದುತ್ತಿರು ಶೇ 80ರಷ್ಟು ದೇಶಗಳಲ್ಲಿ ಹೆಚ್ಚಾಗಿ ಕಡಿಮೆ ನೀರನ ಲಭ್ಯತೆ ಇರುವ ಪ್ರದೇಶಗಳು ಸೃಷ್ಟಿಯಾಗುತ್ತಿವೆ. ಈ ದಶಕದ ಅಂತ್ಯಕ್ಕೆ ಏಷ್ಯಾ ಮತ್ತು ಆಫ್ರಿಕಾದ ಸುಮಾರು 7000 ಮಿಲಿಯನ್ ಜನರು ಕಡಿಮೆ ನೀರಿನ ಲಭ್ಯತೆ ಪ್ರದೇಶದಲ್ಲಿ ವಾಸ ಮಾಡುತ್ತಾರೆ.

ಭಾರತದ ಮೇಲೆ ಪರಿಣಾಮ : ಮರುಭೂಮಿಕರಣ ಏಷ್ಯಾ ಖಂಡದ 38 ರಿಂದ 48 ದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಬರಪೀಡಿತ ಪ್ರದೇಶಗಳ ಸಂಖ್ಯೆ 1972 ರಿಂದ 2004ರ ತನಕ ಹೆಚ್ಚಾಗುತ್ತಲೇ ಸಾಗಿದೆ. ಅದರಲ್ಲೂ ಕೃಷಿ ಭೂಮಿಯನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳು ಬರಕ್ಕೆ ತುತ್ತಾಗುತ್ತಿವೆ.

ಉತ್ತರ ಭಾರತದ ಹಲವು ರಾಜ್ಯಗಳು ಕಳೆದ ಮೂರು ದಶಕದಿಂದ ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇದರಿಂದಾಗಿ ಆಹಾರ ಉತ್ಪಾದನೆ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಉಂಟಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಗೋಧಿಯಂತಹ ಪ್ರಮುಖ ಬೆಳೆಯ ಉತ್ಪಾದನೆಗೆ ಹೊಡೆತ ಬಿದ್ದಿದೆ.

English summary
Desertification and water scarcity. Many governments have already made pledges about how they will use land to address climate change. Human demands are driving unprecedented depletion of natural land resources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X