ಸಿನಿಮಾಗಳನ್ನು ನೋಡಿ ಮತ್ತು ಗೆಲ್ಲಿ ಬರೋಬ್ಬರಿ 1,60,000 ರೂಪಾಯಿ!
ನವದೆಹಲಿ, ನವೆಂಬರ್ 16: ದುಡ್ಡು ಕೊಟ್ಟು ಸಿನೆಮಾ ನೋಡುವುದು ವಾಡಿಕೆ. ಆದರೆ ಸಿನೆಮಾ ನೋಡಿದ್ದಕ್ಕೆ ಕಾಸು ಕೊಟ್ಟರೆ ಹೇಗಿರಬೇಡ. ಅದೂ 1,60,000 ರೂಪಾಯಿ.
ಹೌದು ಈ ಸುದ್ದಿ ನಿಜ, ಇದುವರೆಗೂ ಯಾರು ಎಣಿಸದಂತಹ ಆಫರ್ ಒಂದನ್ನು ಈ ಕಂಪೆನಿ ಜನರಿಗೆ ನೀಡಿದೆ. ಅಮೇರಿಕನ್ ಕಂಪನಿ BloomsyBox 12 ಹಾಲ್‌ಮಾರ್ಕ್ ಕ್ರಿಸ್ಮಸ್ ಚಲನಚಿತ್ರಗಳನ್ನು ವೀಕ್ಷಿಸಿದರೆ ಬರೋಬ್ಬರಿ 2,000 ಡಾಲರ್ ಹಣ ನೀಡುವುದಾಗಿ ಘೋಷಿಸಿದೆ. ಇದಕ್ಕಾಗಿ ಸಿನೆಮಾ ಪ್ರೇಮಿಗಳನ್ನು ಹುಡುಕುತ್ತಿದೆ.

ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೆ. ಅವರು ನೀಡಿರುವ ಪಟ್ಟಿಯಲ್ಲಿ ಸಿನೆಮಾಗಳನ್ನು ನೋಡುವುದು. ಸಿನೆಮಾ ನೋಡಲು ಆಯ್ಕೆಯಾದ ಚಿತ್ರ ವಿಮರ್ಶಕರು ಪ್ರತಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ. ಗೊತ್ತುಪಡಿಸಿದ ರಜಾದಿನದಂದು ಚಲನಚಿತ್ರ ವಿಮರ್ಶಕರು ಸಿನೆಮಾದ ಅಂಶ, ಕೆಮಿಸ್ಟ್ರಿ ಪರಿಶೀಲನೆ ಮುಂತಾದ ಮಾನದಂಡಗಳ ಪ್ರಕಾರ ಚಲನಚಿತ್ರಗಳನ್ನು ನಿರ್ಣಯಿಸುತ್ತಾರೆ.
ಇದಕ್ಕಾಗಿ ವಿತ್ತೀಯ ಪರಿಹಾರದ ಜೊತೆಗೆ ಕಂಪನಿಯು ಹಾಲಿಡೇ ಸಿನೆಮಾ ವಿಮರ್ಶಕರಿಗೆ ಬಿಸಿ ಕೋಕೋ, ಎರಡು ಜೋಡಿ ಯುಜಿಜಿ ಸಾಕ್ಸ್, ಪೀಕಾಕ್‌ಗೆ ಒಂದು ವರ್ಷದ ಚಂದಾದಾರಿಕೆ ಮತ್ತು 12 ತಿಂಗಳ ಫ್ಲವರ್ ಚಂದಾದಾರಿಕೆಯನ್ನು ಒದಗಿಸುತ್ತದೆ ಇದು ಪ್ರತಿ ತಿಂಗಳು ತಾಜಾ ಪುಷ್ಪಗುಚ್ಛವನ್ನು ತಲುಪಿಸುತ್ತದೆ.
"ನಾವು ಕಠಿಣ ರೇಟಿಂಗ್ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಇದು ಅತ್ಯಂತ ಸೂಕ್ಷ್ಮ ವಿಷಯಗಳ ಪರಿಶೀಲನೆಗೆ ನಿಲುಕುವಂತೆ ಮಾಡಲಾಗಿದೆ. ನಾಸ್ಟಾಲ್ಜಿಯಾ ಮತ್ತು ಇತ್ತೀಚಿನ ಪಕ್ಷಪಾತವನ್ನು ನಿಯಂತ್ರಿಸಲು ನಮ್ಮ ವೀಕ್ಷಕರು ಹಾಲ್‌ಮಾರ್ಕ್ ಕ್ರಿಸ್‌ಮಸ್ ಚಲನಚಿತ್ರ ವೀಕ್ಷಣೆಯ ಅನುಭವದಲ್ಲಿ ಸಂಪೂರ್ಣವಾಗಿ ಮುಳುಗಿರುವುದನ್ನು ನಾವು ಬಯಸುತ್ತೇವೆ ಎಂದು ತಿಳಿಸಿದೆ.
ಇದಕ್ಕಾಗಿ ಅವರಿಗೆ $2,000 ಪಾವತಿಸುತ್ತೇವೆ. ಅಲ್ಲದೆ ಯುಜಿಜಿಯಿಂದ ಎರಡು ಜೋಡಿ ಅಲ್ಟ್ರಾ-ಕಾಸಿ ಚೆನಿಲ್ಲೆ ಸಾಕ್ಸ್‌ಗಳ ಜೊತೆಗೆ ಘಿರಾರ್ಡೆಲ್ಲಿ ಬಿಸಿ ಕೋಕೋದ ಪೂರೈಕೆಯನ್ನು ಮಾಡುತ್ತೇವೆ. ನೀವು ಎಲ್ಲಾ ಚಲನಚಿತ್ರಗಳಿಗೆ ಅನುಕೂಲಕರ ಪ್ರವೇಶವನ್ನು ಹೊಂದಿದ್ದೀರಿ ಮತ್ತು ಒಂದು ವರ್ಷದ ಪೀಕಾಕ್ ಚಂದಾದಾರಿಕೆಯನ್ನು ಪಡೆಯಲು ಹಣ ಕೂಡ ಪಡೆಯುತ್ತೀರಿ" ಎಂದು ವೆಬ್‌ಸೈಟ್ ಹೇಳಿದೆ.
"ಕ್ರಿಸ್ಮಸ್ ನಂತರದ ಅಂತಿಮ ಬೋನಸ್ ಆಗಿ ಬ್ಲೂಮ್ಸಿಬಾಕ್ಸ್ ನಮ್ಮ ವಿಜೇತರಿಗೆ 12 ತಿಂಗಳ ಹೂವಿನ ಚಂದಾದಾರಿಕೆಯನ್ನು ಒದಗಿಸುತ್ತದೆ, ಅವರಿಗೆ ತಾಜಾ ಪುಷ್ಪಗುಚ್ಛವನ್ನು ಪ್ರತಿ ತಿಂಗಳು ನೇರವಾಗಿ ಅವರ ಮನೆ ಬಾಗಿಲಿಗೆ ತಲುಪಿಸುತ್ತದೆ" ಎಂದು ಕಂಪನಿಯ ಆಫರ್ ನೀಡಿದೆ.
ಆ 12 ಚಲನಚಿತ್ರಗಳ ಹೆಸರುಗಳು ಇಲ್ಲಿವೆ
1. ದಿ ಮೋಸ್ಟ್ ವಂಡರ್‌ಫುಲ್ ಟೈಮ್ ಆಫ್ ದ ಹಿಯರ್ (2008)
2. ಕ್ರೈನ್ ಫಾರ್ ಕ್ರಿಸ್ಮಸ್ (2015)
3. ದಿ ನೈನ್ ಲೈವ್ಸ್ ಆಫ್ ಕ್ರಿಸ್ಮಸ್ (2014)
4. ಕ್ರಿಸ್ಮಸ್ ಗೇಟ್‌ವೇ (2017)
5. ಜರ್ನಿ ಬ್ಯಾಕ್ ಟೂ ಕ್ರಿಸ್ಮಸ್ (2016)
6. ಗೋಸ್ಟ್ ಆಫ್ ಕ್ರಿಸ್ಮಸ್ ಆಲ್‌ವೇಸ್ (2022)
7. ಫ್ಯಾಮಿಲಿ ಫಾರ್ ಕ್ರಿಸ್ಮಸ್ (2015)
8. ಕ್ರಿಸ್ಮಸ್ ಅಂಡರ್ ರಾಪ್ಸ್ (2014)
9. ತ್ರಿ ವೈಸ್ ಮೆನ್ ಆಂಡ್ ಎ ಬೇಬಿ (2022)
10. ಎ ರಾಯಲ್ ಕ್ರಿಸ್ಮಸ್ (2014)
11. ನಾರ್ಥ್‌ಫೋಲ್ (2014)
12. ದಿ ಕ್ರಿಸ್ಮಸ್ ಟ್ರೈನ್ (2017)












Click it and Unblock the Notifications