Walking Tips: ವಾಕಿಂಗ್ ಮಾಡುವಾಗ ಈ ತಪ್ಪುಗಳನ್ನು ಮಾಡಲೇ ಬೇಡಿ!
ವಾಕಿಂಗ್ ಮಾಡುವುದಉ ದೇಹಕ್ಕೆ ಉತ್ತಮ. ಎಲ್ಲ ವಯಸ್ಸಿನ ಜನರು ಯಾವುದೇ ಪರಿಶ್ರಮ ಇಲ್ಲದೇ ಮಾಡಬಹುದಾದ ಸರಳ ವ್ಯಾಯಾಮ. ಈ ವ್ಯಾಯಮವನ್ನು ಮಾಡಲು ನಿಮಗೆ ಯಾವುದೇ ಉಪಕರಣಗಳ ಅವಶ್ಯಕತೆ ಇಲ್ಲವೇ ಇಲ್ಲ. ದಿನದಲ್ಲಿ ಬೆಳಗ್ಗೆ ಅಥವಾ ಸಂಜೆ ನಿಮಗೆ ಅನುಕೂಲವಾಗುವ ಸಮಯದಲ್ಲಿ ನೀವು ಬಿಡುವು ಮಾಡಿಕೊಂಡು ಅರ್ಧ ಗಂಟೆ ವಾಕಿಂಗ್ ಮಾಡುವುದು ಬೆಸ್ಟ್. ವಾಕಿಂಗ್ ಮಾಡುವಾಗ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಹಾಗಿದ್ದರೆ ವಾಕಿಂಗ್ ಮಾಡುವಾಗ ಏನೆಲ್ಲಾ ಮಾಡಬಾರದು ಇಲ್ಲದೆ ವರದಿ.
ಬೆಳಗ್ಗೆ ಚುಮುಚು ಚಳಿಯಲ್ಲಿ ಪ್ರಕೃತಿಯ ಮಡಿಲಲ್ಲಿ ಒಂದು ವಾಕ್ ಮಾಡುವ ಅಭ್ಯಸವನ್ನು ಸಾಮಾನ್ಯವಾಗಿ ಬೆಳಿಸಿಕೊಂಡಿರುತ್ತಾರೆ. ಹಳ್ಳಿಗಳ ಕಡೆ ತಮ್ಮದೇ ಗದ್ದೆ, ತೋಟದಲ್ಲಿ ವಾಕ್ ಮಾಡುತ್ತಾರೆ. ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳು ಇವೆ. ಹೀಗಾಗಿ ಈ ಸುಲಭ ವ್ಯಾಯಾಮವನ್ನು ಲಘುವಾಗಿ ಪರಿಗಣಿಸಲೇ ಬೇಡಿ. ಈ ಕೆಲಸವನ್ನು ಸಹ ನೀವು ಸಮಚಿತ್ತದಿಂದ ಮಾಡಿದ್ದೇ ಆದಲ್ಲಿ ಇದರ ಲಾಭವನ್ನು ಪಡೆಯ ಬಹುದು. ಇನ್ನು ವಾಕಿಂಗ್ ಮಾಡುವಾಗ ಏನೆಲ್ಲಾ ಮಾಡಬಾರದು ಎಂಬುದನ್ನು ನೋಡೋಣ.

ಉತ್ತಮ ನಡಿಗೆ
ನಡಿಗೆಯ ಸಮಯದಲ್ಲಿ ನಿಮ್ಮ ಭಂಗಿ ಸರಿಯಾಗಿರುವುದು ಬಹಳ ಮುಖ್ಯ. ನಿಮ್ಮ ಸೊಂಟ ನೇರವಾಗಿರಬೇಕು. ಬಾಗುವ ಬದಲು ನೇರವಾಗಿ ನಡೆಯಬೇಕು. ನಡೆಯುವಾಗ ಸಾಮಾನ್ಯವಾಗಿ ಜನ ಕೆಳಗೆ ನೋಡುವುದನ್ನು ಮಾಡುತ್ತಾರೆ. ಇದರಿಂದ ಕುತ್ತಿಗೆ ಹಾಗೂ ಬೆನ್ನಿನ ಮೇಲೆ ಒತ್ತಡ ಉಂಟಾಗಬಹುದು. ವೇಗವಾಗಿ ನಡೆಯುವುದರಿಂದ ಬೇಗನೇ ಸುಸ್ತು ಆಗುತ್ತದೆ. ಅಲ್ಲದೆ ಇದರಿಂದ ನೋವನ್ನು ಉಂಟು ಮಾಡುತ್ತದೆ. ಆದ್ದರಿಂದ ಹೀಗೆ ಮಾಡುವುದನ್ನು ತಪ್ಪಿಸಿ.
ಸಾಕು ಪ್ರಾಣಿಗಳನ್ನು ಒಯ್ಯಬೇಡಿ
ಬೆಳೆಯುತ್ತಿರುವ ನಗರಗಳಲ್ಲಿ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ನಾಯಿ, ಬೆಕ್ಕುಗಳನ್ನು ಸಾಕಿರುತ್ತಾರೆ. ನೀವು ವಾಕಿಂಗ್ ಹೋಗುವಾಗ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹೋಗಬೇಡಿ. ಇದರಿಂದ ಅಲ್ಲಿ ವಾಕಿಂಗ್ ಮಾಡುವವರಿಗೆ ತೊಂದರೆ ಆಗುತ್ತದೆ. ಅಲ್ಲದೆ ಬೇರೆ ಪ್ರಾಣಿಗಳು ನಿಮ್ಮ ಸಾಕು ಪ್ರಾಣಿಯ ಮೇಲೆ ಅಟ್ಯಾಕ್ ಮಾಡಬಹುದು. ಆಗ ನೀವು ನಿಮ್ಮ ವಾಕಿಂಗ್ ಮೊಟಕು ಗೊಳಿಸಿ ಅದರತ್ತ ಗಮನ ಹರಿಸಬೇಕಾಗುತ್ತದೆ.

ಮೊಬೈಲ್ ಬಳಸಬೇಡಿ
ಇನ್ನು ಹಲವು ಜನ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವುದನ್ನು ನಾವು ನೋಡಿದ್ದೇವೆ. ಹೀಗೆ ಮಾಡುವುದರಿಂದ ಪ್ರಕೃತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ನಾವು ಏಕಾಗ್ರತೆಯಿಂದ ವಾಕ್ ಮಾಡಿದರೆ ಅದರ ಪರಿಣಾಮ ಹೆಚ್ಚು.
ಹಲವು ಜನ ವೈದ್ಯರು ವಾಕಿಂಗ್ ಮಾಡಲು ಹೇಳಿದ್ದಾರೆ ಎಂದು ಫೋನ್‌ನಲ್ಲಿ ಮಾತನಾಡುತ್ತಾ ನಡೆಯುತ್ತಾರೆ. ಹೀಗೆ ಮಾಡುವುದು ಸಹ ತಪ್ಪು. ವೈದ್ಯರು ನಿಮಗೆ ವಾಕ್ ಮಾಡಲು ಸಲಹೆ ನೀಡಿರುತ್ತಾರೆ. ಆದರೆ ಫೋನ್‌ನಲ್ಲಿ ಮಾತನಾಡುತ್ತಾ ವಾಕ್ ಮಾಡುವ ಸಲಹೆ ನೀಡಿರುವುದಿಲ್ಲ. ಹೀಗಾಗಿ ವಾಕ್ ಮಾಡುವಾಗು ತದೇಕ ಚಿತ್ತದಿಂದ ಸುತ್ತಮುತ್ತಲ ಪರಿಸ್ವರವನ್ನು ಆಸ್ವಾದಿಸುತ್ತಾ ವಾಕ್ ಮಾಡಿ
ಹಲವರು ವಾಕ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಳ್ಳುತ್ತಾರೆ. ಇದನ್ನು ಸಹ ಮಾಡದೇ ಇರುವುದು ಒಳ್ಳೆಯದು.
ಕಡಿಮೆ ನೀರು ಸೇವಿಸಿ
ವಾಕ್ ಮಾಡುವ ಮುನ್ನ ಕಡಿಮೆ ನೀರನ್ನು ಸೇವಿಸಿ ಇದರಿಂದ ನಿಮಗೆ ಅನುಕೂಲ. ಇನ್ನು ನಿಮಗೆ ವಾಕ್ ಮಾಡುವಾಗ ದಾಹ ಆಗುತ್ತಿದ್ದರೆ, ಒಂದು ಅಥವಾ ಎರಡು ಗುಟುಕು ನೀರನ್ನು ಕುಡಿದರೆ ಉತ್ತಮ. ಇದನ್ನು ಬಿಟ್ಟು ಹೆಚ್ಚಾಗಿ ನೀರನ್ನು ಕುಡಿದು ವಾಕ್ ಮಾಡುವುದು ಒಳ್ಳೆಯ ಅಭ್ಯಾಸವಲ್ಲ.
ಕೈಗಳಿಗೂ ಕೆಲಸ ನೀಡಿ
ವಾಕಿಂಗ್ ಮಾಡುವಾಗ ನಡೆಗಯಷ್ಟೇ ಕೈಗಳನ್ನು ಅಲುಗಾಡಿಸುತ್ತಾ ವಾಕ್ ಮಾಡುವುದು ಮುಖ್ಯ. ಇದರಿಂದ ನಿಮಗೆ ಸಂಪೂರ್ಣ ವ್ಯಾಯಮದ ಲಾಭ ಸಿಗುತ್ತದೆ. ಅಲ್ಲದೆ ರಕ್ತವು ದೇಹದಾದ್ಯಂತ ಚೆನ್ನಾಗಿ ಪರಿಚಲನೆಯಾಗುತ್ತದೆ.
ವಾಕಿಂಗ್ ಮಡುವ ಸ್ಥಳದ ಬಗ್ಗೆಯೂ ನಿಮ್ಮ ಗಮನವಿರಲಿ. ನೀವು ವಾಕ್ ಮಾಡುವ ಸ್ಥಳ ಶಾಂತವಾಗಿರಬೇಕು. ನಿಮಗೆ ವಯಸ್ಸಾಗಿದ್ದು ಮನೆ ಬಿಟ್ಟು ಹೊರಗಡೆ ಹೋಗಲು ಆಗದೇ ಇದ್ದಾಗ, ನೀವು ಮನೆಯಲ್ಲಿಯೇ ವಾಕ್ ಮಾಡಬಹುದು. ಆದರೆ, ನೀವು ವಾಕ್ ಮಾಡುವ ಸಮಯದಲ್ಲಿ ಕೆಲವನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಹೊರಗಡೆ ವಾಕ್ ಮಾಡುವಾಗ ಸಿಗುವ ಲಾಭ ಸಿಗಬಹುದು.












Click it and Unblock the Notifications