ಒಂದು ಬಾರಿ ರಿಚಾರ್ಜ್ ಮಾಡಿ, ವರ್ಷ ಪೂರ್ತಿ ಓಟಿಟಿ, ಡೇಟಾ ಲಾಭ ಪಡೆಯಿರಿ
ಈಗಾಗಲೇ ಭಾರತೀಯ ಮಾರುಕಟ್ಟೆಗೆ ಏರಟೇಲ್, ಬಿಎಸ್‌ಎನ್‌ಎಲ್ ಹಾಗೂ ಜಿಯೋ ಹೊಸ ರಿಚಾರ್ಜ್ ಆಫರ್‌ಗಳನ್ನು ಬಿಟ್ಟಿವೆ. ವೋಡಾಫೋನ್ ಅಳೆದು ತೂಗಿ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ವೊಡಾಫೋನ್ ಐಡಿಯಾ ದೇಶದ ಮೂರನೇ ಅತಿದೊಡ್ಡ ಕಂಪನಿಯಾಗಿದೆ. ದೇಶದಲ್ಲಿ ಈ ಕಂಪನಿ 21 ಕೋಟಿ ಬಳಕೆ ದಾರರನ್ನು ಹೊಂದಿದೆ. ಇವರ ಮುಖದಲ್ಲಿ ಮಂದಹಾಸ ಮೂಡಿಸುವ ಕಾರ್ಯಕ್ಕೆ ಕಂಪನಿ ಮುಂದಾಗಿದೆ.
Vi ಅಗ್ಗದಿಂದ ದುಬಾರಿ ಮತ್ತು ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ರಿಚಾರ್ಜ್ ಪ್ಲ್ಯಾನ್ ಲಾಂಚ್ ಮಾಡಿದೆ. ನೀವು ಈ ಸಿಮ್ ಬಳಸುತ್ತಿದ್ದರೆ, ಅಗ್ಗದ ದರದಲ್ಲಿ ನೀವು ದೊಡ್ಡ ಕೊಡುಗೆಗಳನ್ನು ಪಡೆಯಬಹುದು. ಅಲ್ಲದೆ ಉಚಿತವಾಗಿ ಓಟಿಟಿ ಚಂದಾರರಾಗಲೂ ಬಹುದು. ಇದರೊಂದಿಗೆ ಉತ್ತಮವಾದ ಡೇಟಾ ಸೌಲಭ್ಯವನ್ನು ಸಹ ನೀಡುತ್ತಿದೆ.

ವೋಡಾಫೋನ್ ಹಾಗೂ ಐಡಿಯಾ ಕಂಪನಿ ತನ್ನ ಗ್ರಾಹಕರಿಗೆ ಪದೆ ಪದೇ ರಿಚಾರ್ಜ್ ಮಾಡುವ ಕಿರಿಕಿರಿ ತಪ್ಪಿಸುವ ಮಹತ್ವದ ಪ್ಲ್ಯಾನ್ ಪರಿಚಯಿಸಿದೆ. ಇದರ ಅಡಿಯಲ್ಲಿ ಬಳಕೆದಾರ 3199 ರೂ. ನೀಡಿ ರಿಚಾರ್ಜ್ ಮಾಡಿಸಿಕೊಂಡಲ್ಲಿ, 365 ದಿನಗಳ ವರೆಗೆ ಇದರ ಲಾಭವನ್ನು ಪಡೆಯಬಹುದ. ಒಮ್ಮೆ ನೀವು ಯೋಜನೆಯನ್ನು ಖರೀದಿಸಿದರೆ, ನೀವು ಇಡೀ ವರ್ಷ ರೀಚಾರ್ಜ್‌ನ ತೊಂದರೆಯಿಂದ ಮುಕ್ತರಾಗುತ್ತೀರಿ.
ಈ ರಿಚಾರ್ಜ್ ಮಾಡಿಸಿಕೊಂಡರೆ ಏನು ಲಾಭ?
ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದಾಗ ನಿಮಗೆ ಹೆಚ್ಚಿನ ಡೇಟಾ ಬೇಕಾಗುತ್ತದೆ. ಅಂತಹ ಬಳಕೆದಾರರಿಗೆ ಈ ಯೋಜನೆ ಹೇಳಿ ಮಾಡಿಸಿದ ಹಾಗೆ ಇದೆ. ಈ ರಿಚಾರ್ಜ್ ಮಾಡಿಸಿಕೊಂಡಾಗ ಕಂಪನಿಯು ನಿಮಗೆ ವರ್ಷಪೂರ್ತಿ 730GB ಡೇಟಾವನ್ನು ನೀಡುತ್ತದೆ. ಇದರಲ್ಲಿ ನೀವು ಪ್ರತಿದಿನ 2GB ಡೇಟಾವನ್ನು ಬಳಸಬಹುದು. Vi ನ ಈ ಯೋಜನೆಯಲ್ಲಿ, ನೀವು ನಿಯಮಿತ ಡೇಟಾವನ್ನು ಪಡೆಯುವುದು ಮಾತ್ರವಲ್ಲದೆ ಕಂಪನಿಯು ಗ್ರಾಹಕರಿಗೆ ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ಈ ಯೋಜನೆಯಲ್ಲಿ ನೀವು 50GB ಹೆಚ್ಚುವರಿ ಡೇಟಾ ಲಾಭ ಪಡೆಯಬಹುದು.
ನೈಟ್ ಫ್ರೀ ಡೇಟಾ
Binge All Night ಯೋಜನೆಯಡಿ ಈ ಆಫರ್‌ನೊಂದಿಗೆ ವಿಐ ಬರುತ್ತದೆ. ಇದರಲ್ಲಿ ನೀವು ಪ್ರತಿದಿನ ಮಧ್ಯರಾತ್ರಿಯಿಂದ 12 ರಿಂದ ಬೆಳಗ್ಗೆ 6 ಗಂಟೆಯವರೆಗೆ ಉಚಿತ ಅನಿಯಮಿತ ಡೇಟಾ ಲಾಭ ಪಡೆಯಬಹುದು. ನೀವು ಬಯಸಿದರೆ, ನೀವು ಎಷ್ಟು ಬೇಕಾದರೂ ಇಂಟರ್ನೆಟ್ ಅನ್ನು ಉಚಿತವಾಗಿ ಬಳಸಬಹುದು.

Vi ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ನೀಡುತ್ತದೆ. Vi ತನ್ನ ಗ್ರಾಹಕರಿಗೆ ಇಡೀ ವರ್ಷ ಅಂದರೆ 365 ದಿನಗಳವರೆಗೆ Amazon Prime ವೀಡಿಯೊದ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಇದರಿಂದ ಓಟಿಟಿಗೆ ಹೆಚ್ಚಿನ ಹಣವನ್ನು ಹೂಡುವುದನ್ನು ಬಳಕೆದಾರ ತಪ್ಪಿಸಬಹುದು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications