ಕಡಿಮೆ ಬೆಲೆ ಬಂಪರ್ ಆಫರ್ ನೀಡುತ್ತಿರುವ Vi: ಏನೆಲ್ಲಾ ವಿಶೇಷತೆಗಳಿಂದ ಕೂಡಿದ ಈ ರಿಚಾರ್ಜ್
ಭಾರತದಲ್ಲಿ ಹಲವು ಟೆಲಿಕಾಂ ಕಂಪನಿಗಳಿವೆ. ಈ ಕಂಪನಿಗಳೂ ದಿನವೂ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತವೆ. ಅಲ್ಲದೆ ಉತ್ತಮ ರಿಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುತ್ತಲೇ ಇರುತ್ತವೆ. ಭಾರತದಲ್ಲಿ ಈಗಾಗಲೇ ಹಲವು ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ನೀಡುತ್ತವೆ. ಇನ್ನು ಹಲವು ಕಂಪನಿಗಳು ನೀಡಲು ಪ್ರಯತ್ನಿಸುತ್ತಿವೆ. ಈ ಸಾಲಿನಲ್ಲಿ ನಿಲ್ಲುತ್ತದೆ, ವೋಡಾಫೋನ್ ಐಡಿಯಾ.
ವೋಡಾಫೋನ್ ಕಂಪನಿ ತನ್ನ ಬಳಕೆದಾರರಿಗೆ 5ಜಿ ಸೇವೆಯನ್ನು ನೀಡದೆ ಇರಬಹುದು, ಆದರೆ ಈ ನೆಟ್‌ವರ್ಕ್ ಜನರ ಜೇಬಿನ ಭಾರವನ್ನು ಕಡಿಮೆ ಮಾಡಲು ಪ್ರಯತ್ನ ನಡೆಸಿದೆ. ಇನ್ನು ಭಾರತದಲ್ಲಿ ಏನು ಪಡೆದರೆ ಎಷ್ಟು ಉಳಿಯುತ್ತದೆ ಎಂಬ ಲೆಕ್ಕಾಚಾರವನ್ನೇ ಜನ ಹಾಕಿಕೊಂಡಿರುತ್ತಾರೆ. ಇನ್ನು ಹೆಚ್ಚಿನ ಜನರು ಯಾವ ಪ್ಲ್ಯಾನ್ ಹಾಕಿಸಿಕೊಂಡು ಹೆಚ್ಚಿನ ಪ್ರಾಫಿಟ್ ಪಡೆಯಬಹುದು ಎಂದೇ ಯೋಚಿಸುತ್ತಾರೆ. ಕಡಿಮೆ ಬೆಲೆ ಹಾಗೂ ಭರ್ಜರಿ ಆಫರ್‌ಗಳೊಂದಿಗೆ ವೋಡಾಫೋನ್ ಐಡಿಯಾ ತನ್ನ ಗ್ರಾಹಕರ ಮುಂದೆ ಬರಲಿವೆ.

56 ದಿನಗಳ ಅಗ್ಗದ ಯೋಜನೆ
ಬಳಕೆದಾರ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಮಾಡಿಕೊಳ್ಳುವ ಯೋಚನೆಯಲ್ಲಿರುತ್ತಾರೆ. ಅಂತಹವರಿಗೆ ಇದು ಬೆಸ್ಟ್ ಪ್ಲ್ಯಾನ್. ವಿಐ ತನ್ನ ಬಳಕೆದಾರರಿಗೆ 500ಕ್ಕಿಂತಲೂ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯನ್ನು ಹಾಕಿಸಿಕೊಂಡು ಇದರ ಸಂಪೂರ್ಣ ಲಾಭವನ್ನು ಪಡೆಯ ಬಹುದು. ವೊಡಾಫೋನ್ ಐಡಿಯಾ 479 ರೂಗಳ ರೀಚಾರ್ಜ್ ಯೋಜನೆಯನ್ನು ಕಂಪನಿಯು ನೀಡುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು 56 ದಿನಗಳವರೆಗೆ ಸೇವೆಯ ಪ್ರಯೋಜನವನ್ನು ಪಡೆಯುತ್ತಾರೆ. ಇದರ ಜೊತೆಗೆ ವಿಐ ಇನ್ನೊಂದು ಪ್ಲ್ಯಾನ್ ಲಾಂಚ್ ಮಾಡಿದೆ. ಇದನ್ನು ಅಳವಡಿಸಿಕೊಂಡಲ್ಲಿ ಗ್ರಾಹಕ 28 ದಿನಗಳ ವರೆಗೆ ಇದರ ಲಾಭವನ್ನು ಪಡೆಯಬಹುದು.
Vi ನ ರೂ 479 ರೀಚಾರ್ಜ್ ಯೋಜನೆಯು 56 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಯೋಜನೆಯನ್ನು ಪಡೆದಿದ್ದೇ ಆದಲ್ಲಿ ಬಳಕೆ ದಾರ ದಿನವೂ 1.5 GB ಡೇಟಾ ಪಡೆಯಬಹುದು. ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಗಳ ಪ್ರಯೋಜನವನ್ನು ನೀಡಲಾಗುತ್ತದೆ. ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಒಂದು ಲಾಭವಿದೆ. ಅದೇನಂದರೆ ಒಂದು ದೀನ ನೀವು 1.5 GB ಬಳಸದೆ ಉಳಿದಿದ್ದಲ್ಲಿ ಆ ಡೇಟಾವನ್ನು ನೀವು ಪ್ಯಾಕ್ ವ್ಯಾಲಿಡಿಟಿ ವರೆಗೆ ಬಳಸಬಹುದು.
ಬಳಕೆದಾರ 12 ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನಿಯಮಿತ ಡೇಟಾವನ್ನು ಬಳಸಬಹುದು. ಈ ಯೋಜನೆಯು ಪ್ರತಿ ತಿಂಗಳು 2GB ವರೆಗಿನ ಬ್ಯಾಕಪ್ ಡೇಟಾದ ಪ್ರಯೋಜನದೊಂದಿಗೆ ಬರುತ್ತದೆ. ದೈನಂದಿನ ಡೇಟಾ ಮಿತಿಯನ್ನು ಮೀರಿದ ನಂತರ, ನೀವು 64Kbps ವೇಗದಲ್ಲಿ ಡೇಟಾವನ್ನು ಬಳಸಬಹುದು.
28 ದಿನಗಳ ಪ್ಯಾಕ್‌ಗೆ ಬೆಲೆ ಎಷ್ಟು?
ಇನ್ನು ಅಗ್ಗದ ಹಾಗೂ ಕಡಿಮೆ ವ್ಯಾಲಿಡಿಟಿಯ ರಿಚಾರ್ಜ್ ಯೋಜನೆಯನ್ನು ವಿಐ ಬಳಕೆದಾರರಿಗೆ ನೀಡುತ್ತಿದೆ. ಇದಕ್ಕಾಗಿ ಬಳಕೆದಾರ 299 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಲ್ಲಿ ಇದರ ಲಾಭ ಪಡೆಯಬಹುದು. ಇದು ಸಹ 1.5 ಜಿಬಿ ಡೇಟಾವನ್ನು ಹೊಂದಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ.












Click it and Unblock the Notifications