Vivo: ಅಗ್ಗದ ಬೆಲೆಗೆ ಗ್ರಾಹಕರ ಕೈ ಸೇರಲಿದೆ 6000mAh ಬ್ಯಾಟರಿ ಫೋನ್
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಶೇಕಡಾ 19ರಷ್ಟು ಪ್ರಾಬಲ್ಯ ಹೊಂದಿರುವ ವಿವೋ ಕಂಪನಿ, ಪ್ರತಿ ತಿಂಗಳೂ ಹೊಸ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ಹೊಸ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುತ್ತಿದೆ. ಎಲ್ಲ ರೇಂಜ್ ಗ್ರಾಹಕರನ್ನು ಟಾರ್ಗೆಟ್ ಮಾಡಿರುವ ಕಂಪನಿ, ಈಗ ಮಿಡ್ ರೇಂಜ್‌ನಲ್ಲಿ ಮತ್ತೊಂದು ಭರ್ಜರಿ ಫೋನ್ ಲಾಂಚ್ ಮಾಡಿದೆ. ಕಡಿಮೆ ಬೆಲೆಯಲ್ಲಿ ಈ ಫೋನ್ 6000 ಎಂಎಎಚ್ ಬ್ಯಾಟರಿಯೊಂದಿಗೆ ಗ್ರಾಹಕರ ಕೈ ಸೇರಲಿದೆ.
Vivo Y58 5G ಜೂನ್ 20ಕ್ಕೆ ಭಾರತದಲ್ಲಿ ಬಿಡುಗಡೆಯಾಗಿದೆ. ಹಲವು ವಿಶೇಷತೆಗಳೊಂದಿಗೆ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಕಂಪನಿಯ ಬಜೆಟ್ ಫೋನ್ ಇದಾಗಿದೆ. ಪ್ರಸ್ತುತ, ಈ ಫೋನ್‌ನ ವಿಶೇಷತೆಗಳು ಲಾಂಚ್ ಮುಂಚೆಯೇ ಸೋರಿಕೆ ಆಗಿವೆ. ಈ ಫೋನ್‌ನ ಬಿಡುಗಡೆಯಾದ ಬೆಲೆ, ಬಣ್ಣ, ವೈಶಿಷ್ಠ್ಯಗಳ ಏನೇನು ಎಂಬ ಬಗ್ಗೆ ವರದಿ ಇಲ್ಲಿದೆ.

ಡಿಸ್‌ಪ್ಲೇ ಹೇಗಿರಲಿದೆ?
ವಿವೋ ವಾಯ್ 58 6.72 ಇಂಚಿನ್ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೇಶ್ ದರವನ್ನು ಹೊಂದಿರಲಿದೆ. ಅಲ್ಲದೆ 1024 ನೀಟ್ಸ್ ಗರಿಷ್ಠ ಹೊಳಪನ್ನು ನೀಡಲಿದೆ. ಈ ಮೊಬೈಲ್ 199 ಗ್ರಾಮ್ ತೂಕ ಹೊಂದಿದೆ. Vivo Y58 ಸ್ಮಾರ್ಟ್ಫೋನ್ ಪ್ರೀಮಿಯಂ ವಿನ್ಯಾಸದಲ್ಲಿ ಗ್ರಾಹಕರ ಕೈ ಸೇರಲಿದೆ. ಮುಂಭಾಗದಲ್ಲಿ ಗ್ಲಾಸ್, ಹಿಂಭಾಗದಲ್ಲಿ ಪ್ಲ್ಯಾಸ್ಟಿಕ್ ಬ್ಯಾಕ್ ಕವರ್ ಹೊಂದಿದೆ. ಸೈಡ್ ಮೌಂಟೆನಡ್ ಫಿಂಗರ್ ಪ್ರಿಂಟ್ ಹೊಂದಿರಲಿದೆ.
ಕ್ಯಾಮೆರಾ ಹಾಗೂ ಬ್ಯಾಟರಿ ಹೇಗಿರಲಿದೆ?
Vivo Y58 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP ಪ್ರೈಮರಿ ಕ್ಯಾಮೆರಾ ಹಾಗೂ 2MP ಬೊಕೆ ಕ್ಯಾಮೆರಾ ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಬ್ಯಾಟರಿ
Vivo Y58 5G ಸ್ಮಾರ್ಟ್‌ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ, ಇದನ್ನು 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದು 8GB RAM ಮತ್ತು 8GB ವರ್ಚುವಲ್ RAM ಅನ್ನು ಹೊಂದಿದೆ. ಫೋನ್ ನಾಲ್ಕು ವರ್ಷಗಳ ಅಪ್‌ಡೇಟ್ ಲಭ್ಯವಿದೆ. ಅಲ್ಲದೆ ಕ್ವಾಲಕಂ ಸ್ನ್ಯಾಪ್ ಡ್ರ್ಯಾಗನ್ 4 ಜನರೇಷನ್ 2 ಚಿಪ್ ಸೆಟ್ ಹೊಂದಿರಲಿದೆ.
ಬೆಲೆ ಮತ್ತು ಆಫರ್
ಈ ಫೋನ್ ಹಿಮಾಲಯನ್ ಬ್ಲೂ ಮತ್ತು ಸುಂದರಬನ್ ಗ್ರೀನ್ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯ.. Vivo Y58 5G ಸಿಂಗಲ್ ಸ್ಟೋರೇಜ್ ರೂಪಾಂತರದಲ್ಲಿ ಬರುತ್ತದೆ. ಇದರ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 19,499 ರೂ. ಫೋನ್ ಅನ್ನು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್‌ನಿಂದ ಖರೀದಿಸಬಹುದು. ಈಗಾಗಲೇ ಫೋನ್‌ನ ಪ್ರೀ ಬುಕ್ಕಿಂಗ್ ಆರಂಭವಾಗಿದೆ. ಫೋನ್ ಖರೀದಿಗೆ 1500 ರೂಪಾಯಿಗಳ ತ್ವರಿತ ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ. ಅಲ್ಲದೆ, ಫೋನ್ ಅನ್ನು ದಿನಕ್ಕೆ ಕೇವಲ 35 ರೂಪಾಯಿಗಳ EMI ನಲ್ಲಿ ಖರೀದಿಸಬಹುದು.












Click it and Unblock the Notifications