Viral Video: ಮೌಂಟ್ ಎವರೆಸ್ಟ್‌ನಲ್ಲಿ 'ಟ್ರಾಫಿಕ್ ಜಾಮ್': ಜೀವ ಭಯ ಎದುರಿಸಿದ ಚಾರಣಿಗರು
ಏಷ್ಯಾ ಖಂಡದ ಹೆಗ್ಗುರುತಾಗಿರುವ ವಿಶ್ವದ ಅತಿ ಎತ್ತರದ ಪರ್ವತ ಎಂದರೆ ಅದು 'ಮೌಂಟ್ ಎವರೆಸ್ಟ್' (Mount Everest). ಇದು ಸಮುದ್ರ ಮಟ್ಟದಿಂದ ಸುಮಾರು 1930 ಮೀಟರ್ (ಸುಮಾರು 29,000 ಅಡಿ) ಎತ್ತರವಿದೆ. ಈ ಪರ್ವತವು ಇದೀಗ ಸಾಹಸಿಗಳ ದಟ್ಟಣೆಯಿಂದ ಸುದ್ದಿಯಾಗಿದೆ. ಈ ಕುರಿತು ವಿಡಿಯೋ ಭಾರೀ ವೈರಲ್ ಆಗಿದೆ.
ಮೌಂಟ್ ಎವರೆಸ್ಟ್ ಪರ್ವತ ಏರಲು ಹೋಗಿ ಕೆಲವು ಸಾವುಗಳಾದರೂ ಸಹಿತ ಈ ಪರ್ವತದ ಏರುವ ಕ್ರೇಜ್ ಕಡಿಮೆಯಾಗಿಲ್ಲ. ಇಲ್ಲಿ ಪರ್ವತಾರೋಹಿಗಳಿಂದ 'ಟ್ರಾಫಿಕ್ ಜಾಮ್' ಆಗಿರುವ ವಿಡಿಯೋ ವೈರಲ್ ಹರಿದಾಡುತ್ತಿದೆ. ಇಬ್ಬರು ಈ ಟ್ರಾಫಿಕ್ ನಲ್ಲಿ ಸಿಲುಕಿ ಸಾವಿನ ಭಯ ಎದುರಿಸಿದ್ದಾರೆ. ಈ ಕುರಿತು ವಿಡಿಯೋವನ್ನು ರಾಜನ್ ದ್ವಿವೇದಿ ಎಂಬುವವರು ಮೇ 20 ರಂದು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮೌಂಟ್ ಎವರೆಸ್ಟ್ ಶಿಖರದಲ್ಲಿ ಪರ್ವತಾರೋಹಿಗಳ ಉದ್ದನೆಯ ಸರತಿ ಸಾಲುಗಳನ್ನು ನೋಡಬಹುದಾಗಿದೆ. ಈ ಶಿಖರ ಏರುವಾಗ ಸಂಚಾರ ದಟ್ಟಣೆಯಾಗಿ ಪ್ರರ್ವತಾರೋಹಿಗಳು ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಇದರಲ್ಲಿ ಬ್ರಿಟಿಷ್ ಆರೋಹಿ ಡೇನಿಯಲ್ ಪ್ಯಾಟರ್ಸನ್ ಮತ್ತು ಅವರ ನೇಪಾಳಿ ಶೆರ್ಪಾ ಪಾಸ್ಟೆಂಜಿ ಎಂಬುವವರು ಪವರ್ತದಿಂದ ಇಳಿಯುವ ಸಾವಿನ ಭಯ ಎದುರಿಸಿದ್ದಾರೆ ಎಂದು ವರದಿ ಆಗಿದೆ.
ಮಂಜುಗಡ್ಡೆಯಲ್ಲಿ ಸಿಲುಕಿದ ಪ್ರವಾಸಿಗರು
ಈ ಇಬ್ಬರು ಶಿಖರದಿಂದ ಕೆಳಗೆ ಇಳಿಯುವಾಗ ಮಂಜುಗಡ್ಡೆಯಲ್ಲಿ ಸಿಲುಕಿದ್ದಾರೆ. ಅವರ ಹಿಂದೆಯೇ ಹತ್ತಾರು ಮಂದಿ ಸಾಲುಗಟ್ಟಿ ನಿಂತಿರುವುದು ಕಾಣಿಸುತ್ತದೆ. ಜೀವ ಭಯ ತೊರೆದು ಸಾಹಸ ಮಾಡುವವರಿಗೂ ಕೆಲವೊಮ್ಮೆ ಅಪಾಯ, ಸಂಕಷ್ಟಗಳು ಎದುರಾಗಿಬಿಡುತ್ತವೆ ಎಂಬುದಕ್ಕೆ ಇದೊಂದು ಉದಹಾರಣೆ ಆಗಿದೆ.
ಮೌಂಟ್ ಎವರೆಸ್ಟ್ ಹತ್ತುವುದು ಹೇಳುವುದಕ್ಕೆ ಸಾಮಾನ್ಯ ಸಂಗತಿ ಎನಿಸಿದರೂ, ವಾಸ್ತವದಲ್ಲಿ ಇದೊಂದು ಗಂಭೀರ ಮತ್ತು ಬಹಳಷ್ಟು ಸಾಹಸಹ ಕೆಲಸವಾಗಿದೆ ಎಂದು ದ್ವಿವೇದಿ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಜೊತೆಗೆ ತಾವು ಮೇ 19 ರಂದು ಬೆಳಗ್ಗೆ 6 ಗಂಟೆಗೆ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಎತ್ತರದ ಪರ್ವತದಲ್ಲಿ 'ಟ್ರಾಫಿಕ್ ಜಾಮ್'
ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು, ವಿಶ್ವದ ಅತ್ಯಂತ ಎತ್ತರದ ಪರ್ವತದಲ್ಲಿ ಸಾಹಸಿಗಳು ಸರಣಿ ಸಾಲನ್ನು 'ಟ್ರಾಫಿಕ್ ಜಾಮ್' ಎಂದು ಕರೆದಿದ್ದಾರೆ. ಅತೀ ಕಠಿಣ ಹಾದಿಯನ್ನು ಏರಲು ಇಷ್ಟೊಂದು ರಶ್ ದಟ್ಟಣೆಯನ್ನು ಕೆಲವರು ಬಣ್ಣಿಸಿದ್ದಾರೆ.
ಇನ್ನೂ ಕೆಲವು ನೆಟ್ಟಿಗರು ಮತ್ತು ಪರಿಸರವಾದಿಗಳು ಮೌಂಟ್ ಎವರೆಸ್ಟ್‌ನಲ್ಲಿ ಅತ್ಯಂತ ಕಡಿದಾದ ದುರ್ಘಮ ಹಾದಿಯಲ್ಲಿ ಪರ್ವತಾರೋಹಿಗಳಿಂದ ಜನದಟ್ಟಣೆ ಆಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಪರ್ವತದ ಮೇಲೆ ಇಂತಹ ಜನದಟ್ಟಣೆ ಕೆಲವು ಅಪಾಯಕ್ಕೆ, ಜೀವಕ್ಕೆ ತೊಂದರೆ ಆಗುವ ಸಾಧ್ಯತೆಗಳು ಇರುತ್ತವೆ. ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
39 ವರ್ಷದ ಮಾರ್ ಪ್ಯಾಟರ್ಸನ್, ಮತ್ತು ಅವರ ಮಾರ್ಗದರ್ಶಕ ಪಾಸ್ತೆಂಜಿ ಶೆರ್ಪಾ (23) ಅವರು ಜೀವಭಯದಲ್ಲಿ ಕಳೆದ ಮಂಗಳವಾರ ಪರ್ವತದ ತುತ್ತ ತುದಿಯನ್ನು ತಲುಪಿ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.
These videos of the queue up Everest and the aftermath of the cornice collapse that killed a couple of people...
— tern (@1goodtern) May 24, 2024
There's something about this that sums up so much of what's wrong with the world.
😮 pic.twitter.com/S2qv1oBAOG
ಕಡಿಮೆ ಆಮ್ಲಜನಕ, ಹೆಚ್ಚು ಒತ್ತಡದ ಪ್ರದೇಶ
ಇನ್ನೂ ಇಂತಹ ಸಾಹಸಮಯ ಪ್ರವಾಸ ಆಯೋಜಿಸುವ ಕಂಪನಿ, ಏಜೆನ್ಸಿ ಯವರು ಪರ್ವತ ತುದಿಯ ಸಮೀಪವಿರುವ ಲಂಬವಾದ ಬಂಡೆಯ ಮುಖವಾದ ಹಿಲರಿ ಸ್ಟೆಪ್‌ನಲ್ಲಿ ಕುಸಿತ ಸಂಭವಿಸಿದೆ. ಕೆಲವು ಪುರುಷರು ಕಡಿದಾದ ಪ್ರದೇಶದಲ್ಲಿ ಕೆಳಗೆ ಬಿದ್ದರು ಎಂದು ಮಾಹಿತಿ ನೀಡಿದೆ.
ಈ ಮೌಂಟ್ ಎವರೆಸ್ಟ್ ಅಪಾಯಕಾರಿ ಪ್ರರ್ವತವಾಗಿದ್ದು, ಮೇಲೆ ಏರುತ್ತಿದ್ದಂತೆ ಆಮ್ಲಜನಕದ ಮಟ್ಟದಲ್ಲಿ ಕುಸಿತವಾಗುತ್ತದೆ. ಇರುವ ಕಡಿಮೆ ಆಮ್ಲಜನಕದಲ್ಲಿ ಸಾಹಸಿಗಳು ಅಷ್ಟು ಎತ್ತರದಲ್ಲಿ ಗಾಳಿಯ ಒತ್ತಡವಿರುವ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಜೀವ ಉಳಿಸಿಕೊಂಡು ಸಾಹಸ ಪ್ರದರ್ಶಿಸಬೇಕಿರುತ್ತದೆ.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications