Video Viral: ಸಭೆಯಲ್ಲಿ ಬಟ್ಟೆ ಬಿಚ್ಚಿದ ಪೊಲೀಸಪ್ಪನ ವಿಡಿಯೋ ವೈರಲ್
ಬೃಹತ್ ನಗರಗಳಲ್ಲಿ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ನಿತ್ಯ ಮೂಲಭೂತ ಸಮಸ್ಯೆಗಳ ಉಲ್ಬಣ, ಪರಿಹಾರಕ್ಕಾಗಿ ಆಗ್ರಹ ತಪ್ಪಿದ್ದಲ್ಲ. ಹೀಗೆ ಹಿಂದೊಮ್ಮೆ ಚರಂಡಿ ನಿರ್ಮಾಣಕ್ಕೆ ಕುರಿತಂತೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹಾಗೂ ಸ್ಥಳೀಯ ನಿವಾಸಿಗಳ ಮಧ್ಯೆ ಗಲಾಟೆ ಉಂಟಾಗಿತ್ತು. ಇದನ್ನು ಬಗೆಹರಿಸಲು ನಡೆದ ಸಭೆಯಲ್ಲಿ ಪೊಲೀಸ್ ಅಧಿಕಾರಿ ಶರ್ಟ್ ಬಿಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಮಧ್ಯಪ್ರದೇಶದ ಕೊತ್ವಾಲಿಯಲ್ಲಿ ನಡೆದಿದೆ. ಹೌದು ಕೊತ್ವಾಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕರೊಬ್ಬರು ಬೆದರಿಕೆ ಒಡ್ಡಿದರು ಎಂಬ ಕಾರಣಕ್ಕೆ ಠಾಣೆಯಲ್ಲಿ ಸಭೆಯಲ್ಲಿಯೇ ತನ್ನ ಮೇಲಾಧಿಕಾರಿಗಳು ಹಾಗೂ ಕಾರ್ಪೊರೇಷನ್ ಅಧಿಕಾರಿಗಳ ಮುಂದೆ ಪೊಲೀಸ್ ಸಮವಸ್ತ್ರವನ್ನು ತೆಗೆದು ಹಾಕಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಹರಿದಾಡುತ್ತಿದೆ.

ಈ ಘಟನೆಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಕಾರಣವಾಯಿತು. ಏಳು ತಿಂಗಳ ಹಿಂದೆ ಫೆಬ್ರವರಿ 2 ರಂದು ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಠಾಣೆಯಯಲ್ಲಿನ ಸಭೆಯಲ್ಲಿ ಬಟ್ಟೆ ಬಿಚ್ಚಿದ ಪೊಲೀಸ್ ಸಿಬ್ಬಂದಿ
ಠಾಣಾ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಇದನ್ನು ಬಗೆಹರಿಸುವ ಸಲುವಾಗಿ ಠಾಣೆಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ವಾಗ್ವಾದ ಶುರುವಾಯಿತು. ಕಾರ್ಪೋರೇಷನ್ ಅಧಿಕಾರಿಗಳು ಮತ್ತು ಪೊಲೀಸರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಸ್ಥಳೀಯ ಕೌನ್ಸಿಲರ್‌ನ ಪತಿ ಬಿಜೆಪಿ ನಾಯಕ ಅರ್ಜುನ್ ಗುಪ್ತಾ ಅವರು ಸಭೆ ಪಾಲ್ಗೊಂಡಿದ್ದರು. ಈ ವೇಳೆ ಅವರು ಜನರೊಂದಿಗೆ ಗಲಾಟೆ ಮಾಡಿದ್ದ ಪೊಲೀಸ್ ಅಧಿಕಾರಿಗೆ ಬೈದರು. ಬಟ್ಟೆ ಬಿಚ್ಚಿ ಮನೆಗೆ ನಡೆಯಿತು ಎಂದು ಆವಾಜ್ ಹಾಕಿದರು.
ಇದನ್ನು ಕೇಳುತ್ತಿದ್ದಂತೆ ಉದ್ರೇಕಗೊಂಡ ಪೊಲೀಸ್ ಅಧಿಕಾರಿ ತನ್ನ ಮೇಲಾಧಿಕಾರಿಗಳು ಹಾಗೂ ಕಾರ್ಪೋರೇಷನ್ ಅಧಿಕಾರಿಗಳ ಮುಂದೆಯೇ ಸಭೆಯಲ್ಲಿ ಬಟ್ಟೆ ಬಿಚ್ಚಿದರು. ಕೂಡಲೇ ಅಕ್ಕಪಕ್ಕದವರು ಅವರನ್ನು ಶಾಂತಗೊಳಿಸಿರುವ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ವೈರಲ್ ಆಗುತ್ತಿದೆ.
यह सत्ता की हनक है...भाजपा के पार्षद की धमक देखिए...एक वर्दीधारी को अपनी वर्दी फाड़ना पड़ गई !!
— MP Congress (@INCMP) September 16, 2024
प्रदेश में पुलिसिंग का स्तर जीरो हो गया है! अपराध अनियंत्रित हैं, अपराधी बेखौफ और पुलिस कहीं लाचार तो कहीं दबाव में है.
यह वायरल वीडियो सिंगरौली के बैढन थाने का बताया जा रहा है, जहां… pic.twitter.com/tCDRUpC3S0
ಪ್ರಕರಣದ ತನಿಖೆ ನಡೆಸಿದ ಪೊಲೀಸ್
ಬಿಜೆಪಿ ಮುಖಂಡ ಮಿಶ್ರಾ ಅವರು ಸಭೆಯಲ್ಲಿ ನಡೆದುಕೊಂಡ ನಡವಳಿಕೆ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಯಿತು ಎಂದು ತಿಳಿದು ಬಂದಿದೆ. ಈ ಘಟನೆ ಬಗ್ಗೆ ತಿಂಗಳ ಹಿಂದೆಯೇ ತನಿಖೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿವೇದಿತಾ ಗುಪ್ತಾ ಸ್ಪಷ್ಟಪಡಿಸಿದರು.
ತನಿಖೆಯಲ್ಲಿ ಕೌನ್ಸಿಲರ್‌ನೊಂದಿಗೆ ಜಮೀನಿಗೆ ಸಂಬಂಧಿಸಿದ ವಿವಾದ ಇರುವುದು ಕಂಡು ಬಂದಿದೆ ಎಂದು ಅವರು ಹೇಳಿದರು. ಇನ್ನೂ ಏಳು ತಿಂಗಳ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆ ಆಗಿದೆ. ಈ ಬಗ್ಗೆಯೂ ಇದೀಗ ತನಿಖೆಗೆ ಆದೇಶಿಸಲಾಗಿದೆ.












Click it and Unblock the Notifications